ಮುಂಬೈ: ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಎಸ್ ಬದ್ರಿನಾಥ್ ಅವರಿಗೂ ಕೊರೊನಾ ದೃಢಪಟ್ಟಿದೆ. ಬದ್ರಿ ಕೊರೊನಾಗೆ ತುತ್ತಾಗಿರುವ ಭಾರತ ಲೆಜೆಂಡ್ ತಂಡದ 3ನೇ ಕ್ರಿಕೆಟಿಗನಾಗಿದ್ದಾರೆ.
ಈಗಾಗಲೇ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್ನ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಮಾಜಿ ಆಲ್ರೌಂಡರ್ ಯೂಸುಫ್ ಪಠಾಣ್ಗೆ ಶನಿವಾರ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಇದೀಗ ಸಚಿನ್ ನೇತೃತ್ವದ ಭಾರತ ಲೆಜೆಂಡ್ ತಂಡದ ಸಹ ಆಟಗಾರನಾಗಿದ್ದ ಎಸ್ ಬದ್ರಿನಾಥ್ಗೂ ಕೂಡ ಕೋವಿಡ್ 19 ದೃಢಪಟ್ಟಿದ್ದು, ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಇದನ್ನು ಓದಿ:ಸಚಿನ್ ಬೆನ್ನಲ್ಲೇ ರೋಡ್ ಸೇಫ್ಟಿ ಟೂರ್ನಿಯಲ್ಲಿ ಭಾಗವಹಿಸಿದ್ದ ಪಠಾಣ್ಗೂ ಕೊರೊನಾ ದೃಢ..
" ನಾನು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೆ ಮತ್ತು ನಿಯಮಿತವಾಗಿ ಪರೀಕ್ಷೆಗೂ ಸಹಾ ಒಳಗಾಗಿದ್ದು, ಆದಾಗ್ಯೂ ಸಣ್ಣ ಪ್ರಮಾಣದ ಲಕ್ಷಣಗಳೊಂದಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ. ಇದೀಗ ಕೋವಿಡ್ ಪ್ರೋಟೋಕಾಲ್ಗಳನ್ನು ಪಾಲಿಸುತ್ತಿದ್ದೇನೆ ಮತ್ತು ನನ್ನ ಮನೆಯಲ್ಲೇ ಐಸೊಲೇಟ್ ಆಗಿದ್ದೇನೆ. ವೈದ್ಯರ ಸಲಹೆಯಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದ್ದೇನೆ " ಎಂದು ಎಸ್ ಬದ್ರಿನಾಥ್ ತಮಗೆ ಕೊರೊನಾ ಸೋಂಕು ತಗುಲಿರುವುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.
- — S.Badrinath (@s_badrinath) March 28, 2021 " class="align-text-top noRightClick twitterSection" data="
— S.Badrinath (@s_badrinath) March 28, 2021
">— S.Badrinath (@s_badrinath) March 28, 2021
ಭಾರತದ ಪರ 2 ಟೆಸ್ಟ್, 7 ಏಕದಿನ ಪಂದ್ಯ ಮತ್ತು ಒಂದು ಟಿ20 ಪಂದ್ಯದಲ್ಲಿ ಆಡಿರುವ ಬದ್ರಿನಾಥ್ ಇತ್ತೀಚೆಗೆ ಮುಗಿದ ರೋಡ್ ಸೇಫ್ಟಿ ವರ್ಲ್ಡ್ ಟೂರ್ ಟೂರ್ನಿ ವೇಳೆ ಯೂಸುಫ್ ಪಠಾಣ್ ಹಾಗೂ ಸಚಿನ್ ತೆಂಡೂಲ್ಕರ್ ಜೊತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರೆಂದು ತಿಳಿದುಬಂದಿದೆ.
ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಟೂರ್ನಿ ರಾಯ್ಪುರದಲ್ಲಿ ನಡೆದಿತ್ತು. ಭಾರತ ಲೆಜೆಂಡ್ಸ್ ತಂಡ ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.