ETV Bharat / sports

ಪಾಕ್ ಆಟಗಾರರನ್ನು ಕಾಡಿದ್ದ ಕನ್ನಡಿಗ: 'ಜಂಬೋ' ಐತಿಹಾಸಿಕ ಸಾಧನೆಗೆ 21 ವರ್ಷ! - ಅನಿಲ್ ಕುಂಬ್ಳೆ ಲೇಟೆಸ್ಟ್ ನ್ಯೂಸ್

1999ರಲ್ಲಿ ಪಾಕ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜಾದು ಮಾಡಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಇನ್ನಿಂಗ್ಸ್‌ನ ಎಲ್ಲ 10 ವಿಕೆಟ್​​ಗಳನ್ನ ಕಬಳಿಸಿ ಐತಿಹಾಸಿಕ ಸಾಧನೆ ಮಾಡಿದ್ದರು. ಈ ಸಾಧನೆಗೆ ಇಂದು 21 ವರ್ಷ ತುಂಬಿದೆ.

Anil Kumble 10 wickets,10 ವಿಕೆಟ್ ಕಬಳಿಸಿದ್ದ ಅನಿಲ್ ಕುಂಬ್ಳೆ
ಪಾಕ್ ಆಟಗಾರರನ್ನ ಕಾಡಿದ್ದ ಕನ್ನಡಿಗ
author img

By

Published : Feb 7, 2020, 6:04 PM IST

ನವದೆಹಲಿ: 1999 ಫೆಬ್ರವರಿ 7 ರಂದು ಫಿರೋಜ್​ ಶಾ ಕೋಟ್ಲಾ ಮೈದಾನದಲ್ಲಿ (ಈಗಿನ ಆರುಣ್ ಜೇಟ್ಲಿ ಮೈದಾನ) ಜಾದು ಮಾಡಿದ್ದ ಕನ್ನಡಿಗ ಅನಿಲ್​ ಕುಂಬ್ಳೆ ಟೆಸ್ಟ್​ ಕ್ರಿಕೆಟ್​ನ ಇನ್ನಿಂಗ್ಸ್​​ವೊಂದರಲ್ಲಿ ಎದುರಾಳಿ ತಂಡದ ಎಲ್ಲಾ 10 ವಿಕೆಟ್​​ಗಳನ್ನು ಕಬಳಿಸಿ ಐತಿಹಾಸಿಕ ಸಾಧನೆ ಮಾಡಿದ್ದರು.

Anil Kumble 10 wickets,10 ವಿಕೆಟ್ ಕಬಳಿಸಿದ್ದ ಅನಿಲ್ ಕುಂಬ್ಳೆ
ಒಂದೇ ಚಿತ್ರದಲ್ಲಿ 10 ವಿಕೆಟ್ ಪಡೆದ ಸ್ಮರಣೀಯ ಕ್ಷಣಗಳು

ಭಾರತ ಪ್ರವಾಸ ಕೈಗೊಂಡ ಪಾಕ್ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಎದುರಾಗಿದ್ದವು. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಪಾಕ್​ ತಂಡ 12 ರನ್​ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಟೀಂ ಇಂಡಿಯಾ ಮುಂದಿನ ಪಂದ್ಯವನ್ನ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿತ್ತು.

ವಿಕೆಟ್ ಪಡೆದ ಸಂಭ್ರಮದಲ್ಲಿ ಅನಿಲ್ ಕುಂಬ್ಳೆ

ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್​​ ಬ್ಯಾಟಿಂಗ್​ಗೆ ಇಳಿದ ಪಾಕ್ ಭಾರತ ನೀಡಿದ್ದ 420ರನ್​ಗಳ ಗುರಿ ಬೆನ್ನತ್ತಿತ್ತು. ಶಾಹಿದ್ ಅಫ್ರಿದಿ ಮತ್ತು ಸೈಯದ್ ಅನ್ವರ್ ಮೊದಲ ವಿಕೆಟ್​ಗೆ 101 ರನ್​ಗಳ ಜೊತೆಯಾಟವಾಡಿದ್ದರು. ಕುಂಬ್ಳೆ ಬೌಲಿಂಗ್​ಗೆ ಇಳಿಯುವುದಕ್ಕೂ ಮೊದಲು ಪಾಕ್ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು.

ಪಂದ್ಯ ಗೆದ್ದ ಸಂಭ್ರಮದಲ್ಲಿ ಕುಂಬ್ಳೆಯವರನ್ನ ಹೊತ್ತು ಸಾಗಿದ ಸಹ ಆಟಗಾರರು

25ನೇ ಓವರ್​ನಲ್ಲಿ ದಾಳಿಗೆ ಇಳಿದ ಅನಿಲ್ ಕುಂಬ್ಳೆ ಅಫ್ರಿದಿಯನ್ನ ಔಟ್ ಮಾಡಿದ್ರು. ಅಲ್ಲಿಂದ ಪಾಕ್ ಆಟಗಾರರ ಪೆವಿಲಿಯನ್ ಪರೇಡ್ ಆರಂಭವಾಯ್ತು. 128 ರನ್​ ಗಳಿಸುವಷ್ಟರಲ್ಲಿ ಪಾಕಿಸ್ತಾನ ಪ್ರಮುಖ 6 ವಿಕೆಟ್​ಗಳನ್ನ ಕಳೆದುಕೊಂಡಿತು. ಪಂದ್ಯದ 61ನೇ ಓವರ್​ನಲ್ಲಿ ವಾಸಿಮ್ ಅಕ್ರಮ್ ವಿಕೆಟ್ ಪಡೆಯುವ ಮೂಲಕ ಕುಂಬ್ಳೆ ವಿಶ್ವ ದಾಖಲೆ ನಿರ್ಮಿಸಿದ್ರು. ಇನ್ನಿಂಗ್ಸ್​ ಒಂದರ 10 ವಿಕೆಟ್​​ ಪಡೆದ ವಿಶ್ವದ 2ನೇ ಆಟಗಾರ ಎಂಬ ಕೀರ್ತಿಗೆ ಕನ್ನಡಿಗ ಪಾತ್ರರಾದ್ರು. ಕುಂಬ್ಳೆಗೂ ಮೊದಲು ಇಂಗ್ಲೆಂಡ್​ನ ಆಟಗಾರ ಜಿಮ್ ಲೇಕರ್ ಈ ಸಾಧನೆ ಮಾಡಿದ್ದರು.

ಈ ಪಂದ್ಯದಲ್ಲಿ ಟೀಂ ಇಂಡಿಯಾ 212ರನ್​ಗಳ ಅಂತರದಲ್ಲಿ ಬೃಹತ್ ಜಯ ಸಾಧಿಸಿತು.132 ಟೆಸ್ಟ್ ಪಂದ್ಯಗಳನ್ನ ಆಡಿರುವ ಕುಂಬ್ಳೆ 619 ವಿಕೆಟ್ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.