ETV Bharat / sports

ಕೆಕೆಆರ್​ ಜರ್ಸಿಯಲ್ಲೇ ಕ್ರಿಕೆಟ್​ಗೆ ನಿವೃತ್ತಿ ಹೇಳುವ ಬಯಕೆ: ಆ್ಯಂಡ್ರ್ಯೂ ರೆಸಲ್ - ಆ್ಯಂಡ್ರ್ಯೂ ರೆಸಲ್​

ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದಲ್ಲಿದ್ದುಕೊಂಡು ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡುವ ಬಯಕೆ ಇದೆ ಎಂದು ವೆಸ್ಟ್​ ಇಂಡೀಸ್​​​ ಆಲ್​ರೌಂಡರ್​ ರೆಸಲ್​ ಹೇಳಿಕೊಂಡಿದ್ದಾರೆ.

Andre Russell
Andre Russell
author img

By

Published : May 3, 2020, 8:18 PM IST

ನವದೆಹಲಿ: ವೆಸ್ಟ್​​ ಕ್ರಿಕೆಟ್​ ತಂಡದ ಸ್ಫೋಟಕ ಆಲ್​ರೌಂಡರ್​ ಆ್ಯಂಡ್ರ್ಯೂ ರಸೆಲ್ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಪರ ಬ್ಯಾಟ್​ ಬೀಸ್ತಿದ್ದು, ಈಗಾಗಲೇ ತಂಡಕ್ಕಾಗಿ ಅನೇಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಕೆಕೆಆರ್​​​ ನಡೆಸಿಕೊಡುತ್ತಿರುವ ನೈಟ್ಸ್​​ ಅನ್​​ಪ್ಲಗ್ಡ್​​ ಆನ್​ಲೈನ್ ಶೋನಲ್ಲಿ ಭಾಗಿಯಾಗಿ ಮಾತನಾಡಿರುವ 32 ವರ್ಷದ ರೆಸೆಲ್​,ಕೋಲ್ಕತ್ತಾ ನೈಟ್​ ರೈಡರ್ಸ್​​ ಜರ್ಸಿ ತೊಟ್ಟು ತಾನು ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ಳುವ ಬಯಕೆ ಇದೆ ಎಂದಿದ್ದಾರೆ.

32 ವರ್ಷದ ಕ್ರಿಕೆಟರ್​ ಕಳೆದ ವಿಶ್ವಕಪ್​​ನಲ್ಲಿ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ರೂ, ಮಂಡಿ ನೋವಿನಿಂದ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ ಕೆರಿಬಿಯನ್​ ಪ್ರೀಮಿಯರ್​ ಲೀಗ್​, ಐಪಿಎಲ್​​ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಈ ಹಿಂದೆ ಕೋಲ್ಕತ್ತಾದ ಈಡನ್​ ಗಾರ್ಡನ್​​ನಲ್ಲಿ ತಾವು ಬ್ಯಾಟ್​ ಬೀಸಿದಾಗ ಅಲ್ಲಿನ ಕ್ರೀಡಾಭಿಮಾನಿಗಳು ತೋರಿಸಿರುವ ಪ್ರೀತಿಗೆ ತಾವು ಆಭಾರಿ ಎಂದು ಇದೇ ವೇಳೆ ಹೇಳಿಕೊಂಡಿದ್ದು, ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಕ್ಕೆ ಟ್ರೋಫಿ ಗೆದ್ದು ಕೊಡುವ ಆಸೆ ಇದೆ ಎಂದಿದ್ದಾರೆ.

ಕಳೆದ ಆರು ಆವೃತ್ತಿಗಳಿಂದಲೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಪರ ಬ್ಯಾಟ್​ ಬೀಸುತ್ತಿರುವ ಈ ಪ್ಲೇಯರ್ ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳಿಂದ 510ರನ್​ಗಳಿಕೆ ಮಾಡಿದ್ದು, 11 ವಿಕೆಟ್​ ಪಡೆದುಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.