ETV Bharat / sports

ಜಮೈಕಾಗೆ ತಲುಪಿದ ಕೋವಿಡ್​ ಲಸಿಕೆ: ಪ್ರಧಾನಿ ಮೋದಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸಿದ ರಸೆಲ್​

author img

By

Published : Mar 18, 2021, 1:37 PM IST

ಕೋವಿಡ್​ ಲಸಿಕೆ ಜಮೈಕಾಗೆ ಕಳುಹಿಸಿರುವ ಪ್ರಧಾನಿ ಮೋದಿಗೆ ಕ್ರಿಕೆಟ್​ ಆಟಗಾರ ರಸೆಲ್​ ತುಂಬು ಹೃದಯದ ಧನ್ಯವಾದ ಸಲ್ಲಿಸಿದ್ದಾರೆ.

Andre Russell  COVID-19 vaccines  Narendra Modi  Covid  PM Modi  Andre Russell thank PM Modi  Andre Russell thank PM Modi news  ಪ್ರಧಾನಿ ಮೋದಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸಿದ ರಸೆಲ್​ ಪ್ರಧಾನಿ ಮೋದಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸಿದ ರಸೆಲ್​ ಸುದ್ದಿ  ಜಮೈಕಾಗೆ ತಲುಪಿದ ಕೋವಿಡ್​ ಲಸಿಕೆ
ಸಂಗ್ರಹ ಚಿತ್ರ

ನವದೆಹಲಿ: ಜಮೈಕಾಗೆ ಕೊರೊನಾ ವೈರಸ್ ಲಸಿಕೆಗಳನ್ನು ಕಳುಹಿಸಿದ್ದಕ್ಕಾಗಿ ವೆಸ್ಟ್ ಇಂಡೀಸ್ ಆಟಗಾರ ಆ್ಯಂಡ್ರೆ ರಸೆಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ನಾನು ಪ್ರಧಾನಿ ಮೋದಿ ಮತ್ತು ಭಾರತ ಹೈಕಮಿಷನ್‌ಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಲಸಿಕೆಗಳು ಬಂದಿದ್ದು, ಅದರಿಂದ ನಾವು ಉತ್ಸುಕರಾಗಿದ್ದೇವೆ. ಜಗತ್ತು ಸಾಮಾನ್ಯ ಸ್ಥಿತಿಗೆ ಹೋಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ಜಮೈಕಾ ಜನರು ಇದನ್ನು ನಿಜವಾಗಿಯೂ ಪ್ರಶಂಸಿಸುತ್ತಿದ್ದಾರೆ. ಭಾರತ ಮತ್ತು ಜಮೈಕಾ ಈಗ ಸಹೋದರರಾಗಿದ್ದಾರೆ ಎಂದು ರಸೆಲ್ ವಿಡಿಯೋ ಟ್ವೀಟ್​ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ 50,000 ಡೋಸ್​ ಕೊರೊನಾ ವೈರಸ್ ಲಸಿಕೆಗಳನ್ನು ಕಳುಹಿಸಿದ್ದಕ್ಕಾಗಿ ಜಮೈಕಾ ಭಾರತಕ್ಕೆ ಧನ್ಯವಾದ ಅರ್ಪಿಸಿತ್ತು. ಟ್ವೀಟ್‌ನಲ್ಲಿ, ಜಮೈಕಾ ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಟ್ವೀಟ್​ ಮೂಲಕ ಭಾರತದ ಸಹಾಯಕ್ಕೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.