ಚೆನ್ನೈ: ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆದು ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅನುಭವಿ ವೇಗಿ ಜೇಮ್ಸ್ ಆ್ಯಡರ್ಸನ್ 2ನೇ ಪಂದ್ಯದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕೋಚ್ ಕ್ರಿಸ್ ಸಿಲ್ವರ್ವುಡ್ ಸುಳಿವು ನೀಡಿದ್ದಾರೆ.
ಇಂಗ್ಲೆಂಡ್ ತಂಡ ರೊಟೇಷನ್ ಪದ್ದತಿಯ ಪ್ರಕಾರ ಸ್ಟುವರ್ಟ್ ಬ್ರಾಡ್ ಅವರಿಗೆ ಅವಕಾಶ ನೀಡುವ ಸಲುವಾಗಿ ಆ್ಯಂಡರ್ಸನ್ಗೆ ವಿಶ್ರಾಂತಿ ನೀಡಲಾಗಿದೆ.
"ಆಟಗಾರರು ಮತ್ತು ತಂಡದ ದೀರ್ಘಾಯುಷ್ಯ ಕಾಪಾಡಿಕೊಳ್ಳುವುದಕ್ಕೆ ಉತ್ತಮ ಎನಿಸಿದರೆ ವಿಜೇತ ತಂಡ ಬದಲಾಯಿಸಲು ನಾನು ಹಿಂಜರಿಯುವುದಿಲ್ಲ. ಹೌದು, ಅವನು (ಆಂಡರ್ಸನ್)ಅತ್ಯುತ್ತಮ ಆಟಗಾರ. ಈ ನಿರ್ಧಾರದ ಬಗ್ಗೆ ಕಾದು ನೋಡಬೇಕಿದೆ " ಎಂದು ಸಿಲ್ವರ್ವುಡ್ ಹೇಳಿದ್ದಾರೆ.
"ಆದರೆ, ಇಬ್ಬರನ್ನು ಆಡಿಸುವುದು ನಮ್ಮ ತಲೆಯಲ್ಲಿಲ್ಲ. ಏಕೆಂದರೆ ಒಬ್ಬರನ್ನು ಆಡಿಸುವ ನಮ್ಮ ಯೋಜನೆ ಕೆಲಸ ಮಾಡುತ್ತಿದೆ. ಅಲ್ಲದೆ, ನಮ್ಮ ಆಟಗಾರರನ್ನು ನಾವು ನೋಡಿಕೊಳ್ಳಬೇಕಿದೆ. ಜೊತೆಗೆ ನಮಗೆ ಯಾವುದೇ ಸಂದರ್ಭದಲ್ಲಿ ಬೌಲಿಂಗ್ ಮಾಡುವ ಬೌಲರ್ಗಳನ್ನು ಹೊಂದಿರುವುದರಿಂದ ಯಾವುದೇ ಸಮಸ್ಯೆಯಿಲ್ಲ, ಇದರಲ್ಲಿ ನಾನು ತುಂಬಾ ಅದೃಷ್ಟಶಾಲಿ" ಎಂದು ಹೇಳಿರುವ ಸಿಲ್ವರ್ವುಡ್, ಆ್ಯಂಡರ್ಸನ್ಗೆ ವಿಶ್ರಾಂತಿ ನೀಡುವ ಸುಳಿವನ್ನು ನೀಡಿದ್ದಾರೆ.
ಇದನ್ನು ಓದಿ:2ನೇ ಟೆಸ್ಟ್ಗೂ ಮುನ್ನ ಅಭ್ಯಾಸಕ್ಕಿಳಿದ ಅಕ್ಸರ್, ನದೀಮ್ಗೆ ಗೇಟ್ ಪಾಸ್ ಸಾಧ್ಯತೆ