ಶಿವಮೊಗ್ಗ: ಆರಂಭಿಕ ಬ್ಯಾಟ್ಸ್ಮನ್ ಆರ್ ಸಮರ್ಥ್ ಶತಕ ಹಾಗೂ ಕೆ ಗೌತಮ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಮಧ್ಯಪ್ರದೇಶದ ವಿರುದ್ಧ 426 ರನ್ಗಳಿಸಿ ಆಲೌಟ್ ಆಗಿದೆ.
ಮೊದಲ 3 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡ 233 ರನ್ಗಳಿಸಿತ್ತು. ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಿದ ಸಿದ್ಧಾರ್ಥ್(62) ನಿನ್ನೆಯ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು 105 ರನ್ಗಳಿಸಿದ್ದ ಸಮರ್ಥ್ ಇಂದು ಆ ಮೊತ್ತಕ್ಕೆ 3 ರನ್ಗಳಿಸಿ ರನ್ಗಳಿಸಿ ಔಟಾದರು. ನಂತರ ಬಂದ ವಿಕೆಟ್ ಕೀಪರ್ ಶರತ್ 15 ರನ್ಗಳಿಗೆ ಸೀಮಿತರಾದರು.
233 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ 282 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಒಂದಾದ ಶ್ರೇಯಸ್ ಗೋಪಾಲ್(50) ಹಾಗೂ ಕೆ ಗೌತಮ್(82) 7ನೇ ವಿಕೆಟ್ಗೆ 120 ರನ್ಗಳ ಜೊತಯಾಟ ನೀಡಿ ತಂಡದ ಮೊತ್ತವನ್ನು 400 ರನ್ಗಳ ಗಡಿದಾಟಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೆ.ಗೌತಮ್ 4 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿ ಸೇರಿದಂತೆ 82 ರನ್ಗಳಿಸಿದರೆ, ಗೋಪಾಲ್ 87 ಎಸೆತಗಳಲ್ಲಿ 7 ಬೌಂಡರಿ ಸಹಿತ 50 ರನ್ಗಳಿಸಿದರು.
ಒಟ್ಟಾರೆ ಕರ್ನಾಟಕ ತಂಡ 132 ಓವರ್ಗಳಲ್ಲಿ 426 ರನ್ಗಳಿಗೆ ಆಲೌಟ್ ಆಯಿತು. ಮಧ್ಯಪ್ರದೇಶ ಪರ ಗೌರವ್ ಯಾದವ್ 2, ರವಿ ಯಾದವ್ 3, ಕುಲ್ದೀಪ್ ಸೇನ್ 2, ಕುಮಾರ್ ಕಾರ್ತಿಕೇಯ 3 ವಿಕೆಟ್ ಪಡೆದರು.