ನವದೆಹಲಿ : ಐಪಿಎಲ್ನಲ್ಲಿ ಭಾಗವಹಿಸಿರುವ ಎಲ್ಲಾ ತಂಡಗಳಿಗೂ ಭಾರತದ ನಾಲ್ಕನೇ ಅತಿದೊಡ್ಡ ನ್ಯೂಬರ್ಗ್ ಡಯಾಗ್ನೋಸಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕೋವಿಡ್- 19 ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಿದೆ.
ದೇಶದಲ್ಲಿ ಪ್ರತಿದಿನ ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣ ವರದಿಯಾಗುತ್ತಿವೆ. ಇದರ ಮಧ್ಯೆಯೂ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ನ ಬಯೋಬಬಲ್ ನಿರ್ಮಿಸಿ ಆಯೋಜಿಸಲಾಗಿದೆ. ಆದರೂ ಕೊರೊನಾ ಭಯವಿರುವುದರಿಂದ ಬಿಸಿಸಿಐ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ಐಪಿಎಲ್ನಲ್ಲಿ ಭಾಗವಾಗಿರುವ ಪ್ರತಿಯೊಬ್ಬರಿಗೂ ಕೋವಿಡ್-19 ಪರೀಕ್ಷೆ ನಡೆಸಲಿದೆ.
ಈಗಾಗಲೇ ಚೆನ್ನೈ ಮತ್ತು ಮುಂಬೈನಲ್ಲಿ 14ನೇ ಆವೃತ್ತಿಯ ಐಪಿಎಲ್ ಆರಂಭಗೊಂಡು 4 ಪಂದ್ಯ ಮುಗಿದಿವೆ. ಇದೀಗ ಬಿಸಿಸಿಐ ಮಾರ್ಗಸೂಚಿಯಂತೆ ಎಲ್ಲಾ ಆಟಗಾರರು, ಮ್ಯಾನೇಜ್ಮೆಂಟ್ ತಂಡ, ಬ್ರಾಡ್ಕಾಸ್ಟಿಂಗ್ ಸದಸ್ಯರು, ಅಂಕಿ-ಅಂಶ ತಜ್ಞರು, ಮೈದಾನದಲ್ಲಿರುವ ಕೆಲಸಗಾರರು, ಹೋಟೆಲ್ ಸಿಬ್ಬಂದಿ ಮತ್ತು ಇವೆಂಟ್ ಮ್ಯಾನೇಜ್ಮೆಂಟ್ ತಂಡ ತಂಗಿರುವ ಹೋಟೆಲ್ನಲ್ಲಿಯೇ ಕೋವಿಡ್ ಟೆಸ್ಟ್‌ಗೊಳಗಾಗಲಿದೆ.
ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಈಗಾಗಲೇ ಮಿನಿ ಹರಾಜಿನ ವೇಳೆ ಕೂಡ ಸಾಮೂಹಿಕ ಆರ್ಟಿಪಿಸಿಆರ್ ಟೆಸ್ಟ್ ನಡೆಸಿತ್ತು. "2021ರ ಐಪಿಎಲ್ ಸುಗಮವಾಗಿ ನಡೆಯಲದೆಂದು ಎಲ್ಲಾ ತಂಡದ ಸದಸ್ಯರಿಗೆ ಪರೀಕ್ಷೆ ತೆಗೆದುಕೊಳ್ಳಲು ನಾವು ಸಂತೋಷ ಪಡುತ್ತೇವೆ. ಹಾಗೂ ಮಾರಕ ವೈರಸ್ ಹರಡುವುದನ್ನು ಕಡಿಮೆ ಮಾಡಲು ಅವರಿಗೆ ಸಹಾಯ ಮಾಡುತ್ತೇವೆ" ಎಂದು ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ಸಮೂಹದ ಮುಖ್ಯಸ್ಥೆ ಐಶ್ವರ್ಯಾ ವಾಸುದೇವನ್ ಹೇಳಿದ್ದಾರೆ.
ಇದನ್ನು ಓದಿ: ಕೊನೆಯ ಓವರ್ನಲ್ಲಿ ಸಿಂಗಲ್ ರನ್ ನಿರಾಕರಿಸಿದ ಸಾಮ್ಸನ್ ಪರ ನಿಂತ ಸಂಗಕ್ಕರ ಹೇಳಿದ್ದೇನು?