ETV Bharat / sports

ವುಮೆನ್ಸ್​ ಟಿ-20 ಚಾಲೆಂಜ್​ಗೂ ಪಾಲುದಾರಿಕೆ ಮುಂದುವರೆಸಿದ ಐಪಿಎಲ್ ಸ್ಪಾನ್ಸರ್ಸ್​!

ಡ್ರೀಮ್ 11 ಐಪಿಎಲ್​ನ ಎಲ್ಲಾ ಪ್ರಾಯೋಜಕರು ಬಿಸಿಸಿಐ ಜೊತೆಗಿನ ಪಾಲುದಾರಿಕೆಯನ್ನು 2020 ಜಿಯೋ ವುಮೆನ್ಸ್ ಟಿ-20 ಚಾಲೆಂಜ್​ಗೆ ವಿಸ್ತರಿಸಿಕೊಂಡಿದ್ದಾರೆ. ಡ್ರೀಮ್ 11, ಟಾಟಾ ಆಲ್ಟ್ರೊಜ್, ಅನ್​ಅಕಾಡೆಮಿ, ಪೇಟಿಎಂ ಮತ್ತು ಸಿಯೆಟ್ ಇವೆಲ್ಲವೂ ಜಿಯೋ ಮಹಿಳೆಯರ ಟಿ-20 ಚಾಲೆಂಜ್‌ನ ಅಧಿಕೃತ ಪ್ರಾಯೋಜಕರಾಗಿ ಮಾರ್ಪಟ್ಟಿವೆ ಎಂದು ಐಪಿಎಲ್​ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ವುಮೆನ್ಸ್ ಟಿ20 ಚಾಲೆಂಜ್​
ವುಮೆನ್ಸ್ ಟಿ20 ಚಾಲೆಂಜ್​
author img

By

Published : Nov 4, 2020, 7:22 PM IST

ಮುಂಬೈ: ಡ್ರೀಮ್ ಇಲೆವೆನ್ ಐಪಿಎಲ್​ನಲ್ಲಿ ಪ್ರಾಯೋಜಕತ್ವ ಪಡೆದಿರುವ ಎಲ್ಲಾ ಕಂಪನಿಗಳು ಇಂದಿನಿಂದ ಆರಂಭವಾಗಲಿರುವ ವುಮೆನ್ಸ್​ ಟಿ-20 ಚಾಲೆಂಜ್​​ ಟೂರ್ನಮೆಂಟ್​ನಲ್ಲೂ ಮುಂದುವರೆಯಲು ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿವೆ.

ಡ್ರೀಮ್ 11 ಐಪಿಎಲ್​ನ ಎಲ್ಲಾ ಪ್ರಾಯೋಜಕರು ಬಿಸಿಸಿಐ ಜೊತೆಗಿನ ಪಾಲುದಾರಿಕೆಯನ್ನು 2020 ಜಿಯೋ ವುಮೆನ್ಸ್ ಟಿ-20 ಚಾಲೆಂಜ್​ಗೆ ವಿಸ್ತರಿಸಿಕೊಂಡಿದ್ದಾರೆ. ಡ್ರೀಮ್ 11, ಟಾಟಾ ಆಲ್ಟ್ರೊಜ್, ಅನ್​ಅಕಾಡೆಮಿ, ಪೇಟಿಎಂ ಮತ್ತು ಸಿಯೆಟ್ ಇವೆಲ್ಲವೂ ಜಿಯೋ ಮಹಿಳೆಯರ ಟಿ-20 ಚಾಲೆಂಜ್‌ನ ಅಧಿಕೃತ ಪ್ರಾಯೋಜಕರಾಗಿ ಮಾರ್ಪಟ್ಟಿವೆ ಎಂದು ಐಪಿಎಲ್​ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

  • NEWS - The sponsors of the Dream11 IPL have extended their partnership with the BCCI to the 2020 Jio Women’s T20 Challenge.

    Dream11, Tata Altroz, Unacademy, Paytm and CEAT have all become Official Sponsors of the Jio Women’s T20 Challenge.

    More - https://t.co/NVzu1BU7B0

    — IndianPremierLeague (@IPL) November 4, 2020 " class="align-text-top noRightClick twitterSection" data=" ">

ಈ ಕುರಿತು ಮಾತನಾಡಿರುವ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್, ಜಿಯೋ ವುಮೆನ್ಸ್​ ಟಿ-20 ಚಾಲೆಂಜ್​ ಮೂಲಕ ಮಹಿಳಾ ಐಪಿಎಲ್​ಗೆ ದಾರಿ ಮಾಡಿಕೊಡಲು ಮತ್ತು ಕ್ರಿಕೆಟ್​ನಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಆಶಿಸುತ್ತೇವೆ. ಡ್ರೀಮ್ 11 ಐಪಿಎಲ್​ನ ನಮ್ಮ ಪಾಲುದಾರರು ಜಿಯೋ ಮಹಿಳೆಯರ ಟಿ-20 ಚಾಲೆಂಜ್​ಗಾಗಿ ನಮ್ಮೊಂದಿಗೆ ಸಹಿ ಹಾಕಿರುವುದು ಭಾರತದಲ್ಲಿ ಮಹಿಳೆಯರ ಆಟದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಯುವತಿಯರನ್ನು ಕ್ರೀಡೆಗೆ ಪ್ರೇರೇಪಿಸಲು ಪಾಲುದಾರರ ನಿರಂತರ ಬೆಂಬಲಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.

ಪಂದ್ಯದಲ್ಲಿ ಪವರ್​ ಪ್ಲೇನಲ್ಲಿ ಉತ್ತಮ ಪ್ರದರ್ಶನ ತೋರಿದವರಿಗೆ, ಹೆಚ್ಚು ಸಿಕ್ಸರ್​, ಹೆಚ್ಚು ಡ್ರೀಮ್ ಇಲೆವೆನ್ ಪಾಯಿಂಟ್ ಪಡೆದವರಿಗೆ, ಉತ್ತಮ ಸ್ಟ್ರೈಕ್ ​ರೇಟ್​ ಪಡೆಯವವರಿಗೆ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ತಲಾ ಒಂದು ಲಕ್ಷ ರೂಪಾಯಿ ಹಾಗೂ ಟ್ರೋಫಿಗಳನ್ನು ನೀಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.