ETV Bharat / sports

ಕೆಕೆಆರ್​ ತಂಡಕ್ಕೆ ಸೇರ್ಪಡೆಗೊಂಡ ಮೊದಲ ಅಮೆರಿಕಾ ತಂಡದ ಕ್ರಿಕೆಟರ್​​ - CPL

ದಿನೇಶ್ ಕಾರ್ತಿಕ್​ ಮುನ್ನಡೆಸುವ ಕೆಕೆಆರ್​ ತಂಡ ಇದೀಗ ಅಲಿ ಖಾನ್​ ಜೊತೆಗೆ ಇಯಾನ್ ಮಾರ್ಗನ್​, ಪ್ಯಾಟ್​ ಕಮ್ಮಿನ್ಸ್​, ರಾಹುಲ್​ ತ್ರಿಪಾಠಿ, ವರುಣ್ ಚಕ್ರವರ್ತಿ, ಎಂ ಸಿದ್ಧಾರ್ಥ್​, ಕ್ರಿಸ್​ ಗ್ರೀನ್​, ಟಾಮ್​ ಬಾಂಟಮ್​ರನ್ನು ತಂಡಕ್ಕೆ ಹೊಸದಾಗಿ ಸೇರಿಸಿಕೊಂಡಂತಾಗಿದೆ..

ಕೆಕೆಆರ್​- ಐಪಿಎಲ್​ 2020
ಅಲಿ ಖಾನ್​
author img

By

Published : Sep 12, 2020, 4:28 PM IST

ದುಬೈ : ಗಾಯದ ಕಾರಣ ಐಪಿಎಲ್​ನಿಂದ ಹೊರಬಿದ್ದಿರುವ ಇಂಗ್ಲೆಂಡ್​ ವೇಗಿ ಹ್ಯಾರಿ ಗರ್ನೆ ಬದಲಿಗೆ ಅಮೆರಿಕಾ ತಂಡದ ವೇಗದ ಬೌಲರ್​ ಅಲಿ ಖಾನ್ ಅವರು ಕೆಕೆಆರ್​ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಶಾರುಖ್​ ಖಾನ್​ ನೇತೃತ್ವದ ಸಿಕೆಆರ್​ ತಂಡ ಸಿಪಿಎಲ್​ ಚಾಂಪಿಯನ್​ ಆಗಿದೆ. ಫೈನಲ್ ಪಂದ್ಯದಲ್ಲಿ ಎರಡು ವಿಕೆಟ್​ ಪಡೆದು ಚಾಂಪಿಯನ್​ ಆಗಲು ನೆರವಾಗಿದ್ದ ಅಲಿ ಖಾನ್​ರನ್ನು ಕಳೆದ ತಿಂಗಳು ಭುಜದ ನೋವಿಗೆ ತುತ್ತಾಗಿ ಐಪಿಎಲ್​ನಿಂದ ಹೊರಬಿದ್ದದ್ದ ಗರ್ನೆ ಬದಲಿ ಆಟಗಾರನಾಗಿ 2020ರ ಆವೃತ್ತಿಗೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ದಿನೇಶ್ ಕಾರ್ತಿಕ್​ ಮುನ್ನಡೆಸುವ ಕೆಕೆಆರ್​ ತಂಡ ಇದೀಗ ಅಲಿ ಖಾನ್​ ಜೊತೆಗೆ ಇಯಾನ್ ಮಾರ್ಗನ್​, ಪ್ಯಾಟ್​ ಕಮ್ಮಿನ್ಸ್​, ರಾಹುಲ್​ ತ್ರಿಪಾಠಿ, ವರುಣ್ ಚಕ್ರವರ್ತಿ, ಎಂ ಸಿದ್ಧಾರ್ಥ್​, ಕ್ರಿಸ್​ ಗ್ರೀನ್​, ಟಾಮ್​ ಬಾಂಟಮ್​ರನ್ನು ತಂಡಕ್ಕೆ ಹೊಸದಾಗಿ ಸೇರಿಸಿಕೊಂಡಂತಾಗಿದೆ.

ಕೆಕೆಎರ್​ನ ಸಹೋದರಿ ಪ್ರಾಂಚೈಸಿಯಾಗಿರುವ ಟ್ರಿಂಬಾಗೋ ನೈಟ್​ ರೈಡರ್ಸ್​ ಪರ ಅಲಿ ಖಾನ್​ ಕಳೆದ ಮೂರು ವರ್ಷಗಳಿಂದ ಆಡುತ್ತಿದ್ದಾರೆ. ಇದೀಗ ಐಪಿಎಲ್​ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಈ ಮೂಲಕ ಶ್ರೀಮಂತ ಕ್ರಿಕೆಟ್​ ಲೀಗ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಅಮೆರಿಕಾದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೂ ಪಾತ್ರರಾಗಲಿದ್ದಾರೆ. ಖಾನ್​ 2020ರ ಸಿಪಿಎಲ್​ನಲ್ಲಿ 7.43 ಎಕಾನಮಿಯಲ್ಲಿ 8 ವಿಕೆಟ್​ ಪಡೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.