ಹೈದರಾಬಾದ್: ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ತಲೆಯಲ್ಲಿರುವ ಕೂದಲಿಗಿಂತ ನನ್ನ ಬಳಿ ಹೆಚ್ಚು ಹಣವಿದೆ ಎಂದು ಪಾಕ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ತಮಾಷೆ ಮಾಡಿದ್ದಾರೆ.
ಟೀಂ ಇಂಡಿಯಾ ಆಟಗಾರರನ್ನು ಹೊಗಳಿದರೆ ಅವರಿಗೆ ಒಳ್ಳೆಯ ವ್ಯವಹಾರ ಆಗುತ್ತದೆ. ಹೀಗಾಗಿ ಅಖ್ತರ್ ಭಾರತ ತಂಡವನ್ನು ಹೊಗಳುತ್ತಾರೆ ಎಂದು ವೀರೇಂದ್ರ ಸೆಹ್ವಾಗ್ ಈ ಹಿಂದೆ ಹೇಳಿದ್ದರು. ಈ ಹಳೇಯ ವಿಡಿಯೋಗೆ ಪ್ರತಿಕ್ರಿಯಿಸಿರುವ ಅಖ್ತರ್ ಇದೀಗ ಸೆಹ್ವಾಗ್ಗೆ ಟಾಂಗ್ ಕೊಟ್ಟಿದ್ದಾರೆ.
- " class="align-text-top noRightClick twitterSection" data="">
ಸೆಹ್ವಾಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾವಲ್ಪಿಂಡಿ ಎಕ್ಸ್ಪ್ರೆಸ್, ನಿಮ್ಮ ತಲೆಯಲ್ಲಿರುವ ಕೂದಲಿಗಿಂತ ನಾನು ಹೆಚ್ಚು ಹಣ ಹೊಂದಿದ್ದೇನೆ. ಹೆಚ್ಚಿನ ಅನುಯಾಯಿಗಳನ್ನೂ ಹೊಂದಿದ್ದೇನೆ ಎಂದು ನಿಮಗೆ ತಿಳಿಯಲು ಸಾಧ್ಯವಾಗದಿದ್ದರೆ, ಅದನ್ನು ಅರ್ಥಮಾಡಿಕೊಳ್ಳಿ. ಶೋಯೆಬ್ ಅಖ್ತರ್ ಆಗಲು ನನಗೆ 15 ವರ್ಷಗಳು ಬೇಕಾಗಿತ್ತು ಎಂದಿದ್ದಾರೆ.
ಇತ್ತೀಚೆಗೆ ನಡೆದಿದ್ದ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ವೇಳೆಯೂ ಟೀಂ ಇಂಡಿಯಾ ಪ್ರದರ್ಶನವನ್ನು ಹೊಗಳಿದ್ದ ಅಖ್ತರ್, ಮೊದಲ ಪಂದ್ಯದ ಸೋಲಿನ ನಂತರ ಕಂಬ್ಯಾಕ್ ಮಾಡಿದ್ದ ಕೊಹ್ಲಿ ಪಡೆಯ ಪ್ರದರ್ಶನ ಮೆಚ್ಚಿಕೊಂಡಿದ್ದರು.
ನನಗೆ ಭಾರತದಲ್ಲೂ ಅಭಿಮಾನಿಗಳಿದ್ದಾರೆ. ಆದರೂ ನಾನು ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರದಿದ್ದಾಗಲೂ ಟೀಕಿಸಿದ್ದೇನೆ. ರಮೀಜ್ ರಾಜಾ, ಅಫ್ರಿದಿ ಮತ್ತು ಪಾಕ್ ಆಟಗಾರರೆಲ್ಲ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ಹೊಗಳಿದ್ದಾರೆ ಎಂದಿದ್ದಾರೆ.
ಕ್ರಿಕೆಟ್ಗೆ ಸಂಬಂಧಿಸಿದ ವಿಚಾರ ಬಂದಾಗ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ. ಇದರಿಂದ ಇತರರಿಗೆ ಆಗುವ ತೊಂದರೆ ಏನು ಎಂದು ನನಗೆ ತಿಳಿಯುತ್ತಿಲ್ಲ. ನಾನು ಪಾಕ್ ತಂಡದಲ್ಲಿ 15 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇನೆ, ಕೇವಲ ಯೂಟ್ಯೂಬ್ ವಿಡಿಯೋ ಮಾಡಿಕೊಂಡು ಬೆಳೆದಿಲ್ಲ ಎಂದು ಅಖ್ತರ್ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.