ETV Bharat / sports

100ನೇ ಪಂದ್ಯವಾಡಿದ ನಾಥನ್ ಲಿಯಾನ್​​ಗೆ ವಿಶೇಷ ಉಡುಗೊರೆ ನೀಡಿದ ರಹಾನೆ! - nathan lyon on his 100th test

ಲಿಯಾನ್ ಆಡಿದ 100ನೇ ಪಂದ್ಯದಲ್ಲಿ ಸೋಲು ಕಂಡಿದ್ದರೂ, ಈ ಕ್ಷಣ ಅವಿಸ್ಮರಣೀಯವಾಗಿಸಲು ಭಾರತದ ಎಲ್ಲ ಆಟಗಾರರು ಸಹಿ ಹಾಕಿರುವ ಟೀಂ ಇಂಡಿಯಾದ ಜೆರ್ಸಿಯನ್ನು ರಹಾನೆ ಉಡುಗೊರೆಯಾಗಿ ಕೊಟ್ಟು ಅಭಿನಂದಿಸಿದ್ದಾರೆ.

ajinkya rahane presented signature jersey to nathan lyon on his 100th test
100ನೇ ಪಂದ್ಯವಾಡಿದ ನಾಥನ್ ಲಿಯಾನ್​​ಗೆ ವಿಶೇಷ ಉಡುಗೊರೆ ನೀಡಿದ ರಹಾನೆ!
author img

By

Published : Jan 19, 2021, 11:18 PM IST

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ ತಂಡ ಗೆದ್ದು ಬೀಗಿದೆ. ಆದರೆ, ಸೋತ ಆಸ್ಟ್ರೇಲಿಯಾ ತಂಡದ ಆಟಗಾರನಿಗೆ ಭಾರತ ತಂಡದ ನಾಯಕ ಅಜಿಂಕ್ಯಾ ರಹಾನೆ ವಿಶೇಷ ಉಡುಗೊರೆ ನೀಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 3 ವಿಕೆಟ್​​​ಗಳ ರೋಚಕ ಜಯ ಸಾಧಿಸಿದ್ದು, ನಾಲ್ಕು ಪಂದ್ಯಗಳ ಐತಿಹಾಸಿಕ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ.

ಬ್ರಿಸ್ಬೇನ್ ಟೆಸ್ಟ್‌ ಮೂಲಕ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ 100ನೇ ಟೆಸ್ಟ್ ಪಂದ್ಯ ಆಡಿದರು. ಈ ಪಂದ್ಯದಲ್ಲಿ ಲಿಯಾನ್‌ 3 ವಿಕೆಟ್‌ ಪಡೆದುಕೊಂಡಿದ್ದಾರೆ. ಆಡಿದ 100ನೇ ಪಂದ್ಯ ಸೋತರೂ ಅವಿಸ್ಮರಣೀಯವಾಗಿಸಲು ಭಾರತದ ಎಲ್ಲ ಆಟಗಾರರು ಸಹಿ ಹಾಕಿರುವ ಟೀಂ ಇಂಡಿಯಾದ ಜೆರ್ಸಿಯನ್ನು ರಹಾನೆ ಉಡುಗೊರೆಯಾಗಿ ಕೊಟ್ಟು ಅಭಿನಂದಿಸಿದ್ದಾರೆ.

  • The way the Indian side have conducted themselves throughout this series has been exemplary 👏

    Ajinkya Rahane presented Nathan Lyon a signed shirt to celebrate 'Garry' reaching 100 Test's 🐐

    Class. pic.twitter.com/wuMKEexczQ

    — Cricket on BT Sport (@btsportcricket) January 19, 2021 " class="align-text-top noRightClick twitterSection" data=" ">

ಆಸ್ಟ್ರೇಲಿಯಾದ ಪರ 100 ಟೆಸ್ಟ್‌ ಪಂದ್ಯಗಳನ್ನಾಡಿದ 13ನೇ ಆಟಗಾರ ಎಂಬ ದಾಖಲೆಗೆ ಲಿಯಾನ್ ಪಾತ್ರರಾಗಿದ್ದಾರೆ. ಆದರೆ, 100ನೇ ಪಂದ್ಯದಲ್ಲಿ 400ನೇ ವಿಕೆಟ್ ಮೈಲಿಗಲ್ಲು ಸ್ಥಾಪಿಸುವ ಅವಕಾಶವನ್ನು ಕೊಂಚದರಲ್ಲಿ ತಪ್ಪಿಸಿಕೊಂಡಿರುವ ಲಿಯಾನ್​​, ಈವರೆಗೂ 399 ವಿಕೆಟ್ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.