ಮೆಲ್ಬೋರ್ನ್: ಭಾರತ ಟೆಸ್ಟ್ ತಂಡದ ನಾಯಕನಾಗಿ ಬಡ್ತಿ ಪಡೆದಿದ್ದ ಅಜಿಂಕ್ಯ ರಹಾನೆ ಆಕರ್ಷಕ ಶತಕ ಸಿಡಿಸಿ ಭಾರತಕ್ಕೆ 8 ವಿಕೆಟ್ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಪ್ರಸಿದ್ಧ ಎಂಸಿಜಿಯ ಸೆಂಚುರಿ ಬೋರ್ಡ್ನಲ್ಲಿ 2ನೇ ಬಾರಿಗೆ ರಾರಾಜಿಸಿದ್ದಾರೆ.
ರಹಾನೆ ಬಾಂಕ್ಸಿಂಗ್ ಡೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 112 ರನ್ ಸಿಡಿಸಿ 131 ರನ್ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ನೆರವಾಗಿದ್ದರು. ಪಂದ್ಯದ ನಂತರ ರಹಾನೆ ಹೆಸರು ಎಂಸಿಜಿ ಗೌರವ ಫಲಕದಲ್ಲಿ ಶತಕ ಸಿಡಿಸಿದವರ ಪಟ್ಟಿಗೆ ಸೇರಿತು.
ಈ ಹಿಂದೆ 2014ರಲ್ಲಿ ರಹಾನೆ 147 ರನ್ ಸಿಡಿಸುವ ಮೂಲಕ ಮೊದಲ ಬಾರಿಗೆ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರಾಗಿದ್ದರು. ಇದೇ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 169 ರನ್ ಸಿಡಿಸಿ ಈ ಗೌರವಕ್ಕೆ ಪಾತ್ರರಾಗಿದ್ದರು.
-
After leading from the front with a fantastic ton in the Boxing Day Test against Australia, @ajinkyarahane88 has his name engraved on the MCG Honours Board for the second time. 👏👏#TeamIndia #AUSvIND pic.twitter.com/z7vDe5dG4U
— BCCI (@BCCI) December 30, 2020 " class="align-text-top noRightClick twitterSection" data="
">After leading from the front with a fantastic ton in the Boxing Day Test against Australia, @ajinkyarahane88 has his name engraved on the MCG Honours Board for the second time. 👏👏#TeamIndia #AUSvIND pic.twitter.com/z7vDe5dG4U
— BCCI (@BCCI) December 30, 2020After leading from the front with a fantastic ton in the Boxing Day Test against Australia, @ajinkyarahane88 has his name engraved on the MCG Honours Board for the second time. 👏👏#TeamIndia #AUSvIND pic.twitter.com/z7vDe5dG4U
— BCCI (@BCCI) December 30, 2020
ಎಂಸಿಜಿಯ ಈ ಪ್ರತಿಷ್ಠಿತ ಬೋರ್ಡ್ನಲ್ಲಿ ರಹಾನೆ ಎರಡು ಬಾರಿ ಕಾಣಿಸಿಕೊಂಡ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಭಾರತ ತಂಡದ ಮಾಜಿ ನಾಯಕ ವೀನೂ ಮಂಕಡ್ 1948ರಲ್ಲಿ ಎರಡು ಬಾರಿ ಶತಕ ಸಿಡಿಸಿ ತಮ್ಮ ಹೆಸರನ್ನು ಕೆತ್ತಿಸಿದ್ದರು. ಇವರನ್ನು ಬಿಟ್ಟರೆ ಸುನೀಲ್ ಗವಾಸ್ಕರ್, ಜಿ.ಆರ್.ವಿಶ್ವನಾಥ್, ಸೆಹ್ವಾಗ್, ಸಚಿನ್ ಹಾಗೂ ಕೊಹ್ಲಿ ತಲಾ ಒಂದು ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಎಸಿಜಿ ಸಿಬ್ಬಂದಿ ರಹಾನೆ ಅವರ ಹೆಸರಿನ ಸ್ಟಿಕ್ಕರ್ ಅಂಟಿಸುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ. ಈ ವಿಡಿಯೋ ವೀಕ್ಷಿಸಿದ ಅಭಿಮಾನಿಗಳು ಭಾರತ ತಂಡದ ನಾಯಕನ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಇದನ್ನು ಓದಿ:ಮೆಲ್ಬೋರ್ನ್ನಲ್ಲಿ ಟೀಂ ಇಂಡಿಯಾ ಸೇರಿಕೊಂಡ ರೋ'ಹಿಟ್' ಶರ್ಮಾ : ವಿಡಿಯೋ