ETV Bharat / sports

ಬಾಂಬ್​ ಸ್ಫೋಟ.. ಅಂತಾರಾಷ್ಟ್ರೀಯ ಅಂಪೈರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಸಾವು - Bismillah Jan Shinwari

ಶಿನ್ವಾರಿ 11 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ 5 ಏಕದಿನ ಪಂದ್ಯಗಳು ಮತ್ತು 6 ಟಿ20 ಪಂದ್ಯಗಳು ಸೇರಿವೆ..

ಬಿಸ್ಮಿಲ್ಲಾ ಜಾನ್ ಶಿನ್ವಾರಿ
ಬಿಸ್ಮಿಲ್ಲಾ ಜಾನ್ ಶಿನ್ವಾರಿ
author img

By

Published : Oct 4, 2020, 6:13 PM IST

ಕಾಬೂಲ್ ​: ಕಾರು ಬಾಂಬ್ ಸ್ಫೋಟದಲ್ಲಿ ಆಫ್ಘಾನಿಸ್ತಾನದ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ದುರಂತ ಸಾವು ಕಂಡಿದ್ದಾರೆ.

ಮೊನ್ನೆ ನಡೆದ ಕಾರು ಅಪಘಾಕ್ಕೊಳಗಾಗಿ ಆರಂಭಿಕ ಬ್ಯಾಟ್ಸ್​ಮನ್​ ನಜೀಬ್ ತಾರಕೈ ಕೋಮಾಕ್ಕೆ ತೆರಳಿದ್ದರು. ಈ ಕಹಿ ಘಟನೆ ಮಾಸುವ ಮುನ್ನವೇ ಆಫ್ಘನ್​ ಕ್ರಿಕೆಟ್​ನಲ್ಲಿ ಶಿನ್ವಾರಿ ಸಾವು ಆಘಾತ ತಂದಿದೆ. ಆಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಶನಿವಾರ ಮಧ್ಯಾಹ್ನ 12:20ಕ್ಕೆ ಸ್ಫೋಟ ಸಂಭವಿಸಿದೆ ಎಂದು ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಮಾಧ್ಯಮ ವಕ್ತಾರ ಮೊಹ್ಮದ್ ಇಬ್ರಾಹಿಂ ಟ್ವೀಟ್ ಮಾಡಿದ್ದಾರೆ.

ಘಟನೆಯಲ್ಲಿ ಶಿನ್ವಾರಿ ಸೇರಿ ಅವರ ಕುಟುಂಬದ 7 ಮಂದಿ ಕೂಡ ದುರಂತದಲ್ಲಿ ಅಸು ನೀಗಿದ್ದಾರೆ. 'ಕಾರು ಬಾಂಬ್ ಸ್ಫೋಟದಲ್ಲಿ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಹಾಗೂ ಅವರ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಒಟ್ಟು 15 ಜನರು ಮೃತಪಟ್ಟಿದ್ದು, 40 ಜನ ಗಾಯಗೊಂಡಿದ್ದಾರೆ' ಎಂದು ಇಬ್ರಾಹಿಂ ಟ್ವೀಟ್ ಮಾಡಿದ್ದಾರೆ.

ಶಿನ್ವಾರಿ 11 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ 5 ಏಕದಿನ ಪಂದ್ಯಗಳು ಮತ್ತು 6 ಟಿ20 ಪಂದ್ಯಗಳು ಸೇರಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.