ETV Bharat / sports

'ಆಸ್ಟ್ರೇಲಿಯಾ - ಭಾರತ ವಿಶ್ವದ ಅತ್ಯುತ್ತಮ ಟೆಸ್ಟ್​ ತಂಡಗಳು... ಇಂಗ್ಲೆಂಡ್​ - ನ್ಯೂಜಿಲ್ಯಾಂಡ್​ ಕಸವಿದ್ದಂತೆ'

author img

By

Published : Dec 25, 2019, 7:17 PM IST

Updated : Dec 25, 2019, 7:24 PM IST

ನ್ಯೂಜಿಲ್ಯಾಂಡ್​ ಹಾಗೂ ಇಂಗ್ಲೆಂಡ್​ ತಂಡಗಳು ಟೆಸ್ಟ್​ ಕ್ರಿಕೆಟ್​ನಲ್ಲಿ ನೀಡುತ್ತಿರುವ ಪ್ರದರ್ಶನದ ಬಗ್ಗೆ ಇಂಗ್ಲೆಂಡ್​ನ ಮಾಜಿ ನಾಯಕ ಮೈಕಲ್​ ವಾನ್​ ಕಿಡಿಕಾರಿದ್ದಾರೆ.

'Absolute garbage': Vaughan reacts on New Zealand, England's Test rankings
ಸಂಗ್ರಹ ಚಿತ್ರ

ಲಂಡನ್​: ಇಂಗ್ಲೆಂಡ್​ನ ಮಾಜಿ ನಾಯಕ ಮೈಕಲ್​ ವಾನ್​ ನ್ಯೂಜಿಲ್ಯಾಂಡ್​ ಹಾಗೂ ಇಂಗ್ಲೆಂಡ್​ ತಂಡಗಳು ಟೆಸ್ಟ್​ ಕ್ರಿಕೆಟ್​ನಲ್ಲಿ ನೀಡುತ್ತಿರುವ ಪ್ರದರ್ಶನಕ್ಕೂ ಅವರು ಪಡೆದಿರುವ ಶ್ರೇಯಾಂಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಿಡಿಕಾರಿದ್ದಾರೆ.

ಇಂಗ್ಲೆಂಡ್​ ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ 4ರಲ್ಲೂ ನ್ಯೂಜಿಲ್ಯಾಂಡ್​ 2ನೇ ಸ್ಥಾನದಲ್ಲೂ ಇವೆ. ಆದರೆ ಅವೆರಡು ತಂಡಗಳು ಟೆಸ್ಟ್​ ಕ್ರಿಕೆಟ್​ನಲ್ಲಿ ನೀಡುತ್ತಿರುವ ಪ್ರದರ್ಶನ ಮಾತ್ರ ನಿಜಕ್ಕೂ ಕೆಟ್ಟದಾಗಿದೆ ಎಂದು ಕಸಕ್ಕೆ ಹೋಲಿಕೆ ಮಾಡಿ ಕಿಡಿಕಾರಿದ್ದಾರೆ.

ಇಂತಹ ಕೆಟ್ಟ ಪ್ರದರ್ಶನ ತೋರುವ ನ್ಯೂಜಿಲ್ಯಾಂಡ್ ಕಳೆದ ಎರಡು ವರ್ಷಗಳಲ್ಲಿ​ ಅಷ್ಟೊಂದು ಸರಣಿಗಳನ್ನು ಹೇಗೆ ಗೆದ್ದಿದೆ ಎಂಬುದೇ ತಿಳಿಯುತ್ತಿಲ್ಲ. ಜೊತೆಗೆ ಎರಡನೇ ಶ್ರೇಯಾಂಕ ಬೇರೆ ಪಡೆಕೊಂಡಿದ್ದಾರೆ. ಅದೇ ರೀತಿ ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್​ ಕಳೆದ ಮೂರ್ನಾಲ್ಕು ವರ್ಷಗಳಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ ಎಂದು ತವರು ತಂಡದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

'Absolute garbage': Vaughan reacts on New Zealand, England's Test rankings
ಇಂಗ್ಲೆಂಡ್​ನ ಮಾಜಿ ನಾಯಕ ಮೈಕಲ್​ ವಾನ್​

ಇಂಗ್ಲೆಂಡ್​ ತವರಿನಲ್ಲಿ ಮಾತ್ರ ಟೆಸ್ಟ್ ಸರಣಿ ಗೆದ್ದಿದೆ. ಆ್ಯಶಸ್​ ಸರಣಿಯನ್ನು ಡ್ರಾ ಸಾಧಿಸಿಕೊಂಡಿದೆ. ಅಲ್ಲದೆ ಐರ್ಲೆಂಡ್​ ತಂಡವನ್ನು ಮಾತ್ರ ಸೋಲಿಸಿದ್ದಾರೆ. ಆದರೆ, ಐಸಿಸಿ ರ‍್ಯಾಂಕಿಂಗ್​​ ಮಾತ್ರ ನನಗೆ ಗೊಂದಲವನ್ನುಂಟು ಮಾಡಿದೆ. ನನ್ನ ಪ್ರಕಾರ ಎರಡನೇ ಬೆಸ್ಟ್​ ತಂಡವಾಗಿರುವ ನ್ಯೂಜಿಲ್ಯಾಂಡ್​ಗಿಂತ 5ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತುಂಬಾ ಅತ್ಯುತ್ತಮ ತಂಡ. ಅದರಲ್ಲೂ ವಿದೇಶದಲ್ಲಿ ನೀಡುವ ಪ್ರದರ್ಶನ ನೋಡಿದರೆ ಆಸೀಸ್​ ನಿಜಕ್ಕೂ ಉತ್ತಮ ತಂಡ ಎಂದು ಸಿಡ್ನಿ ಮಾರ್ನಿಂಗ್​ ಹೆರಾಲ್ಡ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆಸ್ಟ್ರೇಲಿಯಾ- ಭಾರತ ವಿಶ್ವದ ಅತ್ಯುತ್ತಮ ಟೆಸ್ಟ್​ ತಂಡಗಳು ಎಂಬುವುದರಲ್ಲಿ ಯಾವುದೇ ಗೊಂದಲವಿಲ್ಲ. ಭಾರತ ತಂಡ ಮಾತ್ರ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯನ್ನರನ್ನೇ ಮಣಿಸಬಲ್ಲದು. ಕಳೆದ 12 ತಿಂಗಳ ಹಿಂದೆಯೇ ಅದು ಸಾಬೀತಾಗಿದೆ ಎಂದು ಭಾರತ ತಂಡವನ್ನು ಕೊಂಡಾಡಿದ್ದಾರೆ.

ಭಾರತ ಕಳೆದ ಆಸೀಸ್​ ಪ್ರವಾಸದ ವೇಳೆ ವಾರ್ನರ್​, ಸ್ಮಿತ್​ ಹಾಗೂ ಲಾಬುಶೇನ್​ ಇಲ್ಲದಿರಬಹುದು. ಆದರೆ ಮುಂದಿನ ಸರಣಿ ವೇಳೆ ಆ ತಂಡದ ಎಲ್ಲ ಆಟಗಾರರು ಫಿಟ್​ ಇದ್ದರೆ ಖಂಡಿತ ಮತ್ತೆ ಮೇಲುಗೈ ಸಾಧಿಸಲಿದೆ. ಭಾರತ ತಂಡದಲ್ಲಿ ಉತ್ತಮ ವೇಗಿಗಳು, ಅನುಭವಿ ಸ್ಪಿನ್ನರ್​ಗಳು ಹಾಗೂ ಅನುಭವಿ ಬ್ಯಾಟ್ಸ್​ಮನ್​ಗಳ ದಂಡೇ ಇದೆ. ಆಸೀಸ್​ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಏಕೈಕ ತಂಡವೆಂದರೆ ಅದು ಭಾರತ ಮಾತ್ರ ಎಂದು ವಾನ್​ ಅಭಿಪ್ರಾಯಪಟ್ಟಿದ್ದಾರೆ.

Intro:Body:

'ಆಸ್ಟ್ರೇಲಿಯಾ-ಭಾರತ ವಿಶ್ವದ ಅತ್ಯುತ್ತಮ ಟೆಸ್ಟ್​ ತಂಡಗಳು... ಇಂಗ್ಲೆಂಡ್​-ನ್ಯೂಜಿಲ್ಯಾಂಡ್​ ಕಸವಿದ್ದಂತೆ'

 Absolute garbage, Vaughan reacts on New Zealand, Vaughan reacts England Test rankings, ಆಸ್ಟ್ರೇಲಿಯಾ-ಭಾರತ ವಿಶ್ವದ ಅತ್ಯುತ್ತಮ ಟೆಸ್ಟ್​ ತಂಡಗಳು ಇಂಗ್ಲೆಂಡ್​-ನ್ಯೂಜಿಲ್ಯಾಂಡ್​ ಕಸ, ಆಸ್ಟ್ರೇಲಿಯಾವನ್ನು ಮಣಿಸುವ ತಾಕತ್ತು ಭಾರತಕ್ಕಿದೆ, ಐಸಿಸಿ ಟೆಸ್ಟ್​ ರ‍್ಯಾಂಕಿಂಗ್ 

ಲಂಡನ್​: ಇಂಗ್ಲೆಂಡ್​ನ ಮಾಜಿ ನಾಯಕ ಮೈಕಲ್​ ವಾನ್​ ನ್ಯೂಜಿಲ್ಯಾಂಡ್​ ಹಾಗೂ ಇಂಗ್ಲೆಂಡ್​ ತಂಡಗಳು ಟೆಸ್ಟ್​ ಕ್ರಿಕೆಟ್​ನಲ್ಲಿ ನೀಡುತ್ತಿರುವ ಪ್ರದರ್ಶನಕ್ಕೂ ಅವರು ಪಡೆದಿರುವ ಶ್ರೇಯಾಂಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಿಡಿಕಾರಿದ್ದಾರೆ. 

ಇಂಗ್ಲೆಂಡ್​ ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ 4ರಲ್ಲೂ ನ್ಯೂಜಿಲ್ಯಾಂಡ್​ 2ನೇ ಸ್ಥಾನದಲ್ಲೂ ಇವೆ. ಆದರೆ ಅವೆರಡು ತಂಡಗಳು ಟೆಸ್ಟ್​ ಕ್ರಿಕೆಟ್​ನಲ್ಲಿ ನೀಡುತ್ತಿರುವ ಪ್ರದರ್ಶನ ಮಾತ್ರ ನಿಜಕ್ಕೂ ಕೆಟ್ಟದಾಗಿದೆ ಎಂದು ಕಸಕ್ಕೆ ಹೋಲಿಕೆ ಮಾಡಿ ಕಿಡಿಕಾರಿದ್ದಾರೆ.

ಇಂತಹ ಕೆಟ್ಟ ಪ್ರದರ್ಶನ ತೋರುವ  ನ್ಯೂಜಿಲ್ಯಾಂಡ್ ಕಳೆದ ಎರಡು ವರ್ಷಗಳಲ್ಲಿ​ ಅಷ್ಟೊಂದು ಸರಣಿಗಳನ್ನು ಹೇಗೆ ಗೆದ್ದಿದೆ ಎಂಬುದೇ ತಿಳಿಯುತ್ತಿಲ್ಲ. ಜೊತೆಗೆ ಎರಡನೇ ಶ್ರೇಯಾಂಕ ಬೇರೆ ಪಡೆಕೊಂಡಿದ್ದಾರೆ. ಅದೇ ರೀತಿ  ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್​ ಕಳೆದ ಮೂರ್ನಾಲ್ಕು ವರ್ಷಗಳಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ ಎಂದು ತವರು ತಂಡದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂಗ್ಲೆಂಡ್​ ತವರಿನಲ್ಲಿ ಮಾತ್ರ ಟೆಸ್ಟ್ ಸರಣಿ ಗೆದ್ದಿದೆ. ಆ್ಯಶಸ್​ ಸರಣಿಯನ್ನು ಡ್ರಾ ಸಾಧಿಸಿಕೊಂಡಿದೆ. ಅಲ್ಲದೆ ಐರ್ಲೆಂಡ್​ ತಂಡವನ್ನು ಮಾತ್ರ ಸೋಲಿಸಿದ್ದಾರೆ. ಆದರೆ ಐಸಿಸಿ ರ‍್ಯಾಂಕಿಂಗ್​​ ಮಾತ್ರ ನನಗೆ ಗೊಂದಲವನ್ನುಂಟು ಮಾಡಿದೆ. ನನ್ನ ಪ್ರಕಾರ ಎರಡನೇ ಬೆಸ್ಟ್​ ತಂಡವಾಗಿರುವ ನ್ಯೂಜಿಲ್ಯಾಂಡ್​ಗಿಂತ 5ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತುಂಬಾ ಅತ್ಯುತ್ತಮ ತಂಡ. ಅದರಲ್ಲೂ ವಿದೇಶದಲ್ಲಿ ನೀಡುವ ಪ್ರದರ್ಶನ ನೋಡಿದರೆ ಆಸೀಸ್​ ನಿಜಕ್ಕೂ ಉತ್ತಮ ತಂಡ ಎಂದು ಸಿಡ್ನಿ ಮಾರ್ನಿಂಗ್​ ಹೆರಾಲ್ಡ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಆಸ್ಟ್ರೇಲಿಯಾ- ಭಾರತ  ವಿಶ್ವದ ಅತ್ಯುತ್ತಮ ಟೆಸ್ಟ್​ ತಂಡಗಳು ಎಂಬುವುದರಲ್ಲಿ ಯಾವುದೇ ಗೊಂದಲವಿಲ್ಲ. ಭಾರತ ತಂಡ ಮಾತ್ರ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯನ್ನರನ್ನೇ ಮಣಿಸಬಲ್ಲದು. ಕಳೆದ 12 ತಿಂಗಳ ಹಿಂದೆಯೇ ಅದು ಸಾಬೀತಾಗಿದೆ ಎಂದು ಭಾರತ ತಂಡವನ್ನು ಕೊಂಡಾಡಿದ್ದಾರೆ.

ಭಾರತ ಕಳೆದ ಆಸೀಸ್​ ಪ್ರವಾಸದ ವೇಳೆ ವಾರ್ನರ್​, ಸ್ಮಿತ್​ ಹಾಗೂ ಲಾಬುಶೇನ್​ ಇಲ್ಲದಿರಬಹುದು. ಆದರೆ ಮುಂದಿನ  ಸರಣಿ ವೇಳೆ ಆ ತಂಡದ ಎಲ್ಲಾ ಆಟಗಾರರು ಫಿಟ್​ ಇದ್ದರೆ ಖಂಡಿತ ಮತ್ತೆ ಮೇಲುಗೈ ಸಾಧಿಸಲಿದೆ. ಭಾರತ ತಂಡದಲ್ಲಿ ಉತ್ತಮ ವೇಗಿಗಳು, ಅನುಭವಿ ಸ್ಪಿನ್ನರ್​ಗಳು ಹಾಗೂ ಅನುಭವಿ ಬ್ಯಾಟ್ಸ್​ಮನ್​ಗಳ ದಂಡೇ ಇದೆ. ಆಸೀಸ್​ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಏಕೈಕ ತಂಡವೆಂದರೆ ಅದು ಭಾರತ ಮಾತ್ರ ಎಂದು ವಾನ್​ ಅಭಿಪ್ರಾಯಪಟ್ಟಿದ್ದಾರೆ.

Conclusion:
Last Updated : Dec 25, 2019, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.