ETV Bharat / sports

13 ವರ್ಷದ ಕ್ರಿಕೆಟ್​ ಬದುಕಿಗೆ ವಿದಾಯ... ಧೋನಿ ನಾಯಕತ್ವದಲ್ಲಿ ಆಡಿದ್ದ ಮತ್ತೊಬ್ಬ ಪ್ಲೇಯರ್​ ನಿವೃತ್ತಿ! - ಆಲ್​ರೌಂಡರ್​ ಅಭಿಷೇಕ್​ ನಾಯರ್​

ಕಳೆದ 13 ವರ್ಷಗಳಿಂದ ದೇಶಿ ಕ್ರಿಕೆಟ್​​ನಲ್ಲಿ ಮಿಂಚು ಹರಿಸಿದ್ದ ಮತ್ತೊಬ್ಬ ಕ್ರಿಕೆಟರ್​ ಇದೀಗ ತಮ್ಮ 13 ವರ್ಷದ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ ಘೋಷಣೆ ಮಾಡಿದ್ದಾರೆ.

ಅಭಿಷೇಕ್​ ನಾಯರ್​​
author img

By

Published : Oct 23, 2019, 6:22 PM IST

ಮುಂಬೈ: ದೇಶಿ ಕ್ರಿಕೆಟ್​​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಆಲ್​ರೌಂಡರ್​​ ಅಭಿಷೇಕ್​ ನಾಯರ್​ ಇದೀಗ ದಿಢೀರ್​ ಆಗಿ ಪ್ರಥಮ ದರ್ಜೆ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದಾರೆ.

103ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯ ಆಡಿರುವ ಅಭಿಷೇಕ್​​ 13 ಶತಕ ಹಾಗೂ 32 ಅರ್ಧಶತಕ ಸೇರಿದಂತೆ 45.62ರ ಸರಾಸರಿಯಲ್ಲಿ 5,749ರನ್​ಗಳಿಕೆ ಮಾಡಿದ್ದಾರೆ. ಜತೆಗೆ 173 ವಿಕೆಟ್​ ಪಡೆದುಕೊಂಡಿದ್ದಾರೆ. ಮುಂಬೈನ ಆಲ್​ರೌಂಡರ್​ ಆಗಿರುವ ಇವರು ಟೀಂ ಇಂಡಿಯಾ ಪರ ಕೇವಲ ಮೂರು ಏಕದಿನ ಪಂದ್ಯಗಳಲ್ಲಿ ಮಾತ್ರ ಭಾಗಿಯಾಗಿದ್ದಾರೆ.

Abhishek Nayar
ಅಭಿಷೇಕ್​ ನಾಯರ್​​

ತಮ್ಮ ನಿವೃತ್ತಿ ಬಗ್ಗೆ ಟ್ವೀಟ್ ಮಾಡಿರುವ ನಾಯರ್​, 'ನಾನು ನಿಜಕ್ಕೂ ತೃಪ್ತನಾಗಿದ್ದೇನೆ. ನಾನು ಇಂದು ಇರುವ ಸ್ಥಾನದಲ್ಲಿರಲು ಬಯಸುವ ಅನೇಕ ಕ್ರಿಕೆಟಿಗರು ಇದ್ದಾರೆ. ಇಷ್ಟು ದೀರ್ಘ ಕಾಲ ಆಡುವ ಅವಕಾಶ ಲಭಿಸಿದ್ದಕ್ಕಾಗಿ ನನಗೆ ಹೆಮ್ಮೆ ಅನಿಸಿದೆ, ನಾನಿದಕ್ಕೆ ಅಭಾರಿ ಕೂಡ ಆಗಿದ್ದೇನೆ. ಈ ಬಗ್ಗೆ ಯಾವುದೇ ಬೇಸರವಿಲ್ಲ. ನಾನು ಖುಷಿಯಾಗಿದ್ದೇನೆ ಎಂದಿದ್ದಾರೆ. ಜತೆಗೆ ಬಿಸಿಸಿಐಗೆ ಇದಕ್ಕೆ ಸಂಬಂಧಿಸಿದಂತೆ ಪತ್ರ ರವಾನೆ ಮಾಡಿದ್ದಾರೆ.

ಎಡಗೈ ಬ್ಯಾಟ್ಸ್​​ಮನ್​​ ಹಾಗೂ ಮಧ್ಯಮ ವೇಗಿ ಅಭಿಷೇಕ್ ನಾಯರ್​​ ಅವರನ್ನ 2017-18 ಸಾಲಿನಲ್ಲಿ ಮುಂಬೈ ತಂಡದಿಂದ ಕೈ ಬಿಡಲಾಗಿತ್ತು. ಇದಾದ ಬಳಿಕ ಪುದುಚೆರಿಗೆ ವಲಸೆ ಹೋಗಿದ್ದರು. ಅಲ್ಲಿ ನಾಲ್ಕು ಪ್ರಥಮ ದರ್ಜೆ ಪಂದ್ಯಗಳಾಡಿದ್ದರು. 2009ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಮೂರು ಏಕದಿನ ಪಂದ್ಯಗಳಾಡಿದ್ದರು. ಈ ಮೂರು ಪಂದ್ಯಗಳಲ್ಲಿ ವಿಕೆಟ್ ಹಾಗೂ ರನ್ ಗಳಿಸುವಲ್ಲಿ ವಿಫಲರಾಗಿದ್ದರು.

ಈಗಾಗಲೇ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸಹಾಯಕ ಕೋಚ್​ ಆಗಿ ಕಾರ್ಯ ನಿರ್ವಹಿಸಿರುವ ಇವರು, ಬೆಂಗಳೂರಿನಲ್ಲಿನ ಕೆಕೆಆರ್​ ಅಕಾಡೆಮಿಯಲ್ಲಿ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು.

Intro:Body:

13 ವರ್ಷದ ಕ್ರಿಕೆಟ್​ ಬದುಕಿಗೆ ವಿದಾಯ... ಧೋನಿ ನಾಯಕತ್ವದಲ್ಲಿ ಆಡಿದ್ದ ಮತ್ತೊಬ್ಬ ಪ್ಲೇಯರ್​ ನಿವೃತ್ತಿ! 

ಮುಂಬೈ: ದೇಶಿ ಕ್ರಿಕೆಟ್​​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಆಲ್​ರೌಂಡರ್​​ ಅಭಿಷೇಕ್​ ನಾಯರ್​ ಇದೀಗ ದಿಢೀರ್​ ಆಗಿ ಪ್ರಥಮ ದರ್ಜೆ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದಾರೆ. 

103ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯ ಆಡಿರುವ ಅಭಿಷೇಕ್​​ 13 ಶತಕ ಹಾಗೂ 32 ಅರ್ಧಶತಕ ಸೇರಿದಂತೆ 45.62ರ ಸರಾಸರಿಯಲ್ಲಿ 5,749ರನ್​ಗಳಿಕೆ ಮಾಡಿದ್ದಾರೆ. ಜತೆಗೆ 173 ವಿಕೆಟ್​ ಪಡೆದುಕೊಂಡಿದ್ದಾರೆ. ಮುಂಬೈನ ಆಲ್​ರೌಂಡರ್​ ಆಗಿರುವ ಇವರು ಟೀಂ ಇಂಡಿಯಾ ಪರ ಕೇವಲ ಮೂರು ಎಕದಿನ ಪಂದ್ಯಗಳಲ್ಲಿ ಮಾತ್ರ ಭಾಗಿಯಾಗಿದ್ದಾರೆ. 

ತಮ್ಮ ನಿವೃತ್ತಿ ಬಗ್ಗೆ ಟ್ವೀಟ್ ಮಾಡಿರುವ ನಾಯರ್​, 'ನಾನು ನಿಜಕ್ಕೂ ತೃಪ್ತನಾಗಿದ್ದೇನೆ. ನಾನು ಇಂದು ಇರುವ ಸ್ಥಾನದಲ್ಲಿರಲು ಬಯಸುವ ಅನೇಕ ಕ್ರಿಕೆಟಿಗರು ಇದ್ದಾರೆ. ಇಷ್ಟು ದೀರ್ಘ ಕಾಲ ಆಡುವ ಅವಕಾಶ ಲಭಿಸಿದ್ದಕ್ಕಾಗಿ ನನಗೆ ಹೆಮ್ಮೆ ಅನಿಸಿದೆ, ನಾನಿದಕ್ಕೆ ಅಭಾರಿಯೂ ಕೂಡ. ಈ ಬಗ್ಗೆ ಯಾವುದೇ ಬೇಸರವಿಲ್ಲ. ನಾನು ಖುಷಿಯಾಗಿದ್ದೇನೆ ಎಂದಿದ್ದಾರೆ. ಜತೆಗೆ ಬಿಸಿಸಿಐಗೆ ಇದಕ್ಕೆ ಸಂಬಂಧಿಸಿದಂತೆ ಪತ್ರ ರವಾನೆ ಮಾಡಿದ್ದಾರೆ.

ಎಡಗೈ ಬ್ಯಾಟ್ಸ್​​ಮನ್​​ ಹಾಗೂ ಮಧ್ಯಮ ವೇಗಿ ಅಭಿಷೇಕ್ ನಾಯರ್​​ ಅವರನ್ನ 2017-18 ಸಾಲಿನಲ್ಲಿ ಮುಂಬೈ ತಂಡದಿಂದ ಕೈ ಬಿಡಲಾಗಿತ್ತು. ಇದಾದ ಬಳಿಕ ಪುದುಚೇರಿಗೆ ವಲಸೆ ಹೋಗಿದ್ದರು. ಅಲ್ಲಿ ನಾಲ್ಕು ಪ್ರಥಮ ದರ್ಜೆ ಪಂದ್ಯಗಳಾಡಿದ್ದರು. 2009ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಮೂರು ಏಕದಿನ ಪಂದ್ಯಗಳಾಡಿದ್ದರು. ಈ ಮೂರು ಪಂದ್ಯಗಳಲ್ಲಿ ವಿಕೆಟ್ ಹಾಗೂ ರನ್ ಗಳಿಸುವಲ್ಲಿ ವಿಫಲರಾಗಿದ್ದರು.

ಈಗಾಗಲೇ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸಹಾಯಕ ಕೋಚ್​ ಆಗಿ ಕಾರ್ಯ ನಿರ್ವಹಿಸಿರುವ ಇವರು, ಬೆಂಗಳೂರಿನಲ್ಲಿನ ಕೆಕೆಆರ್​ ಅಕಾಡೆಮಿಯಲ್ಲಿ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.