ETV Bharat / sports

ನಿವೃತ್ತಿಗೂ ಮೊದಲೇ ಬಾಂಗ್ಲಾದೇಶ ಆಯ್ಕೆ ಸಮಿತಿ ಸೇರಿದ ಅಬ್ದುರ್ ರಜಾಕ್ - ಆಯ್ಕೆ ಸಮಿತಿ

ಅಬ್ದುರ್ ರಜಾಕ್, ಬಾಂಗ್ಲಾದೇಶದ ಪರ 13 ಟೆಸ್ಟ್​, 153 ಏಕದಿನ ಮತ್ತು 34 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಕ್ರಮವಾಗಿ 28, 207 ಹಾಗೂ 44 ವಿಕೆಟ್​ಗಳನ್ನು ಪಡೆದಿದ್ದಾರೆ.

ಅಬ್ದುರ್ ರಜಾಕ್
ಅಬ್ದುರ್ ರಜಾಕ್
author img

By

Published : Jan 28, 2021, 6:21 PM IST

ಢಾಕಾ: ಎಡಗೈ ಸ್ಪಿನ್ನರ್​ ಅಬ್ದುರ್​ ರಜಾಕ್ ಅವರನ್ನು ರಾಷ್ಟ್ರೀಯ ಆಯ್ಕೆ ಸಮಿತಿಗೆ ಬಾಂಗ್ಲಾದೇಶ ಕ್ರಿಕೆಟ್​ ಬೋರ್ಡ್ ನೇಮಿಸಿದೆ. ಗುರುವಾರ ನಡೆದ ವರ್ಚುವಲ್ ಸಭೆಯಲ್ಲಿ ಬಿಸಿಬಿ ನಿರ್ದೇಶಕರು ಈ ನಿರ್ಧಾರ ತೆಗೆದುಕೊಂಡರು.

ಬಿಸಿಬಿಯ ಆಯ್ಕೆ ಸಮಿತಿಯಲ್ಲಿ ಮಿನ್ಹಾಜುಲ್ ಅಬೆದಿನ್ ಮತ್ತು ಹಬೀಬುಲ್ ಬಶರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಮೂರನೇ ಸದಸ್ಯರಾಗಿ ಅಬ್ದುರ್​ ರಜಾಕ್​ ನೇಮಕವಾಗಿದ್ದಾರೆ.

ರಜಾಕ್ ಪ್ರಸ್ತುತ ಸ್ಪರ್ಧಾತ್ಮಕ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿಲ್ಲ. ಆದರೂ ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

'​​ನಾನು ನನ್ನ ದೇಶಿಯ ಕ್ರಿಕೆಟ್​ಗೆ ಶೀಘ್ರದಲ್ಲೇ ವಿದಾಯ ಘೋಷಿಸಲಿದ್ದೇನೆ. ಬಿಸಿಬಿ ಈಗಷ್ಟೇ ಆಯ್ಕೆ ಸಮಿತಿಗೆ ಸದಸ್ಯನನ್ನಾಗಿ ನೇಮಕ ಮಾಡಿರುವುದಾಗಿ ತಿಳಿಸಿದೆ' ಎಂದು ರಜಾಕ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.