ದುಬೈ: ಎಬಿ ಡಿ ವಿಲಿಯರ್ಸ್ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ 7 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ರಾಜಸ್ಥಾನ್ ರಾಯಲ್ಸ್ ನೀಡಿದ 178 ರನ್ಗಳ ಗುರಿಯನ್ನ ಬೆನ್ನತ್ತಿದ ಬೆಂಗಳೂರು ತಂಡ ಎಬಿ ಡಿ ವಿಲಿಯರ್ಸ್ ಅವರ ನಿರ್ಣಾಯಕ ಅರ್ಧಶತಕ(55) ಹಾಗೂ ನಾಯಕ ಕೊಹ್ಲಿ ಅವರ 43 ರನ್ಗಳ ನೆರವಿನಿಂದ ಇನ್ನು 2 ಎಸೆತಗಳು ಉಳಿದಿರುವಂತೆ 3 ವಿಕೆಟ್ ಕಳೆದುಕೊಂಡು ತಲುಪಿತು.
-
An elated Captain after a thrilling victory against #RR.#Dream11IPL pic.twitter.com/DKzUq1nQoB
— IndianPremierLeague (@IPL) October 17, 2020 " class="align-text-top noRightClick twitterSection" data="
">An elated Captain after a thrilling victory against #RR.#Dream11IPL pic.twitter.com/DKzUq1nQoB
— IndianPremierLeague (@IPL) October 17, 2020An elated Captain after a thrilling victory against #RR.#Dream11IPL pic.twitter.com/DKzUq1nQoB
— IndianPremierLeague (@IPL) October 17, 2020
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೊಹ್ಲಿ ಬಳಗ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು, ಆಸೀಸ್ ದಾಂಡಿಗ ಆ್ಯರೋನ್ ಫಿಂಚ್ ಕೇವಲ 14 ರನ್ಗಳಿಸಿ ಗೋಪಾಲ್ಗೆ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ನಾಯಕ ಕೊಹ್ಲಿ ಜೊತೆ 79 ರನ್ಗಳ ಜೊತೆಯಾಟ ನಡೆಸಿದರಾದರೂ ನಿಧಾನಗತಿ ಆಟ ಪ್ರದರ್ಶಿಸಿದರು. ಒತ್ತಡದಿಂದ ಬ್ಯಾಟ್ ಬೀಸಿದ ಯುವ ಬ್ಯಾಟ್ಸ್ಮನ್ 37 ಎಸೆತಗಳಲ್ಲಿ ಕೇವಲ 2 ಬೌಂಡರಿ ಸಹಿತ 35 ರನ್ಗಳಿಸಿ ಔಟಾದರು. ನಂತರದ ಎಸೆತದಲ್ಲೇ ಕೊಹ್ಲಿ ಕೂಡ 43 ರನ್ಗಳಿಸಿ ಯುವ ಬೌಲರ್ ತ್ಯಾಗಿಗೆ ವಿಕೆಟ್ ಒಪ್ಪಿಸಿದರು.
ಗೇಮ್ ಚೇಂಜ್ ಮಾಡಿದ ಮಿಸ್ಟರ್ 360
ಒಂದು ಹಂತದಲ್ಲಿ 13.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 102 ರನ್ಗಳಿಸಿ ಬೆಂಗಳೂರು ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಕ್ರೀಸ್ ಆಗತಾನೆ ಗುರ್ಕಿರಾತ್ ರನ್ಗಳಿಸಲು ಪರದಾಡಿದರು. ಆದರೆ ಎಬಿಡಿ ಕೆಲವು ಕೆಟ್ಟ ಎಸೆತಗಳನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ರನ್ಗತಿ ಕಾಪಾಡಿಕೊಳ್ಳುತ್ತಿದ್ದರು. ಆದರೂ ಕೊನೆಯ 18 ಎಸೆತಗಳಲ್ಲಿ ಗೆಲ್ಲಲು 35 ರನ್ಗಳ ಅಗತ್ಯವಿತ್ತು. ಉನ್ನಾದ್ಕಟ್ ಎಸೆದ ಆ ಓವರ್ನಲ್ಲಿ ಎಬಿಡಿ 3 ಸಿಕ್ಸರ್ ಸಿಡಿಸಿದರೆ, ಗುರುಕಿರಾತ್ ಒಂದು ಬೌಂಡರಿ ಬಾರಿಸುವ ಮೂಲಕ 25 ರನ್ ಸೂರೆಗೈದರು. 12 ಎಸೆತಗಳಲ್ಲಿ 35 ಇದ್ದ ಪಂದ್ಯದ ಗತಿ ಕೊನೆ ಓವರ್ಗೆ 10 ರನ್ಗಳಿಗೆ ಬಂದು ನಿಂತಿತು.
ಆರ್ಚರ್ ಎಸೆದ 20 ಓವರ್ನಲ್ಲಿ ಎಬಿಡಿ ಮತ್ತು ಗುರುಕಿರಾರ್ 4 ಎಸೆತಗಳಲ್ಲಿ 10 ರನ್ಗಳಿಸಿ ತಂಡಕ್ಕೆ 7 ವಿಕೆಟ್ಗಳ ಜಯ ತಂದುಕೊಟ್ಟರು.
-
A game changer and how!#RCB WINS by 7 wickets.#Dream11IPL pic.twitter.com/NFdKHPX1B2
— IndianPremierLeague (@IPL) October 17, 2020 " class="align-text-top noRightClick twitterSection" data="
">A game changer and how!#RCB WINS by 7 wickets.#Dream11IPL pic.twitter.com/NFdKHPX1B2
— IndianPremierLeague (@IPL) October 17, 2020A game changer and how!#RCB WINS by 7 wickets.#Dream11IPL pic.twitter.com/NFdKHPX1B2
— IndianPremierLeague (@IPL) October 17, 2020
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ವಿಲಿಯರ್ಸ್ ಕೇವಲ 22 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 55 ರನ್ಗಳಿಸಿದರೆ, ಗುರ್ಕಿರಾತ್ ಸಿಂಗ್ ಮನ್ ಔಟಾಗದೆ 19 ರನ್ಗಳಿಸಿದರು.
ರಾಜಸ್ಥಾನ್ ಪರ ರಾಹುಲ್ ತೆವಾಟಿಯಾ 30ಕ್ಕೆ 1, ಕಾರ್ತಿಕ್ ತ್ಯಾಗಿ 32ಕ್ಕೆ 1, ಶ್ರೇಯಸ್ ಗೋಪಾಲ್ 32ಕ್ಕೆ 1 ವಿಕೆಟ್ ಪಡೆದರು. ಆರ್ಚರ್ ಹಾಗೂ ಉನಾದ್ಕಟ್ ಆಟ ಆರ್ಸಿಬಿ ಬ್ಯಾಟ್ಸ್ಮನ್ಗಳ ಮುಂದೆ ನಡೆಯಲಿಲ್ಲ. ಇವರಿಬ್ಬರು ಕ್ರಮವಾಗಿ 38 ಹಾಗೂ 46 ರನ್ ಬಿಟ್ಟುಕೊಟ್ಟರು.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ತಂಡ ನಾಯಕ ಸ್ಮಿತ್ 57 ಹಾಗೂ ರಾಬಿನ್ ಉತ್ತಪ್ಪ ಅವರ 41 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ಗಳಿಸಿತ್ತು.
ಆರ್ಸಿಬಿ ಪರ ಕ್ರಿಸ್ ಮೋರಿಸ್ 4 ಹಾಗೂ ಯಜುವೇಂದ್ರ ಚಹಾಲ್ 2 ವಿಕೆಟ್ ಪಡೆದು ಮಿಂಚಿದ್ದರು. 22 ಎಸೆತಗಳಲ್ಲಿ 55 ರನ್ಗಳಿಸಿದ ಎಬಿ ಡಿ ವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.