ETV Bharat / sports

"ಎಬಿಡಿ ನನ್ನ ಆರಾಧ್ಯ, ಕೊಹ್ಲಿ ಜತೆ ಬ್ಯಾಟ್​ ಮಾಡುವುದು ಖುಷಿ": ಆರ್​ಸಿಬಿ ಸೇರುವ ಇಂಗಿತ ಹೊರಹಾಕಿದ ಮ್ಯಾಕ್ಸ್​ವೆಲ್​!

author img

By

Published : Feb 15, 2021, 8:54 PM IST

14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಆಸ್ಟ್ರೇಲಿಯಾದ ಆಲ್​ರೌಂಡರ್​ ಗ್ಲೇನ್ ಮ್ಯಾಕ್ಸ್​ವೆಲ್​​ ಆರ್​ಸಿಬಿ ಪರ ಆಡುವ ಇಂಗಿತ ಹೊರಹಾಕಿದ್ದಾರೆ.

Glenn Maxwell
Glenn Maxwell

ಹೈದರಾಬಾದ್​: 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ ಹರಾಜು ಪ್ರಕ್ರಿಯೆಗೆ ದಿನಗಣನೇ ಆರಂಭಗೊಂಡಿದ್ದು, ಫೆ. 18ರಂದು ಮುಂಬೈನಲ್ಲಿ ವಿವಿಧ ಪ್ರಾಂಚೈಸಿಗಳು ತಮಗೆ ಅವಶ್ಯವಿರುವ ಪ್ಲೇಯರ್ಸ್ ಖರೀದಿ ಮಾಡಲಿದ್ದಾರೆ.

ಈ ಹಿಂದಿನ ಆವೃತ್ತಿಯಲ್ಲಿ ಪಂಜಾಬ್​ ತಂಡದಲ್ಲಿದ್ದ ಮ್ಯಾಕ್ಸ್​ವೆಲ್​ಗೆ ಪ್ರಾಂಚೈಸಿ ಕೈಬಿಟ್ಟಿರುವ ಕಾರಣ ಈ ಸಲದ ಆವೃತ್ತಿಯಲ್ಲಿ ಹೊಸದೊಂದು ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಇದರ ಮಧ್ಯೆ ಆಸ್ಟ್ರೇಲಿಯಾ ಆಲ್​​ರೌಂಡರ್​ ಮ್ಯಾಕ್ಸ್​ವೆಲ್ ತಾವು ಯಾವ ತಂಡದ ಪರ ಆಡಲು ಇಷ್ಟಪಡುತ್ತಾರೆಂಬ​ ಇಂಗಿತ ಹೊರಹಾಕಿದ್ದಾರೆ.

AB de Villiers
ಆರ್​ಸಿಬಿ ಪ್ಲೇಯರ್ಸ್​​ ಎಬಿಡಿ- ವಿರಾಟ್​ ಕೊಹ್ಲಿ

ಓದಿ: ಕಿಂಗ್ಸ್​ ಇಲೆವೆನ್​ ಪಂಜಾಬ್ ಇನ್ಮುಂದೆ ಪಂಜಾಬ್​ ಕಿಂಗ್ಸ್​: ಪ್ರಶಸ್ತಿಗೆ ಮುತ್ತಿಕ್ಕಲು ಹೆಸರು ಚೇಂಜ್!?

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತಮ್ಮ ಆರಾಧ್ಯ ಎಂದು ಹೇಳಿಕೊಂಡಿರುವ ಮ್ಯಾಕ್ಸ್​ವೆಲ್​ ಈ ಮೂಲಕ ಆರ್​ಸಿಬಿ ಸೇರಿಕೊಳ್ಳುವ ಇಂಗಿತ ಹೊರಹಾಕಿದ್ದಾರೆ. 2 ಕೋಟಿ ರೂ. ಮೂಲ ಬೆಲೆ ಘೋಷಣೆ ಮಾಡಿಕೊಂಡಿರುವ ಮ್ಯಾಕ್ಸ್​ವೆಲ್​ ಮೇಲೆ ಅನೇಕ ಪ್ರಾಂಚೈಸಿಗಳು ಕಣ್ಣಿಟ್ಟಿದ್ದು, ಆರ್​ಸಿಬಿ ಕೂಡ ಆಲ್​ರೌಂಡರ್ ಖರೀದಿ ಮಾಡುವ ಸಾಧ್ಯತೆ ಇದೆ.

ಇದೇ ವಿಚಾರವಾಗಿ ಮಾತನಾಡಿರುವ ಮ್ಯಾಕ್ಸ್​ವೆಲ್​, ಎಬಿ ಡಿವಿಲಿಯರ್ಸ್ ನನ್ನ ಆರಾಧ್ಯೆಗಳಲ್ಲಿ ಒಬ್ಬರಾಗಿದ್ದು, ಅವರ ಆಟವನ್ನ ನಾನು ಯಾವಾಗಲೂ ನೋಡುತ್ತಿರುತ್ತೇನೆ. ಅವರೊಂದಿಗೆ ಆಡುವುದು ನಿಜಕ್ಕೂ ಅದ್ಭುತವಾಗಿರುತ್ತದೆ ಎಂದಿದ್ದಾರೆ. ಇದರ ಜತೆಗೆ ವಿರಾಟ್​ ಕೊಹ್ಲಿ ಜೊತೆ ಬ್ಯಾಟ್ ಮಾಡುವುದು ನಿಜಕ್ಕೂ ಆನಂದ ಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.