ಪರ್ತ್: ಟಿ-20 ಶ್ರೇಯಾಂಕದಲ್ಲಿ ನಂಬರ್ ಒನ್ ತಂಡವಾಗಿರುವ ಪಾಕಿಸ್ತಾನವನ್ನು ಆಸ್ಟ್ರೇಲಿಯಾ 2-0ದಿಂದ ಬಗ್ಗುಬಡಿದು ಸರಣಿ ವಶಪಡಿಸಿಕೊಂಡಿದೆ.
2016ರಿಂದ 2018/19ರವರೆಗೆ ಸತತ 11 ಸರಣಿ ಗೆದ್ದು ಬೀಗಿದ್ದ ಪಾಕಿಸ್ತಾನ ಕಳೆದ ಕೆಲವು ತಿಂಗಳಿಂದ ಟಿ-20 ಕ್ರಿಕೆಟ್ನಲ್ಲಿ ಹೀನಾಯ ಪ್ರದರ್ಶನ ತೋರುತ್ತಿದ್ದು, ಸತತ 4ನೇ ಸರಣಿಯಲ್ಲಿ ಸೋಲುಕಂಡಿದೆ.
ಶುಕ್ರವಾರ ನಡೆದ ಕೊನೆಯ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಾಕಿಸ್ತಾನ 20 ಓವರ್ಗಳಲ್ಲಿ ಕೇವಲ 106 ರನ್ಗಳಿಸಿತು. ಇಫ್ತಿಖರ್ ಅಹ್ಮದ್ 45 ರನ್ ಹಾಗೂ ಇಮಾಮ್ ಉಲ್ ಹಕ್ 14 ರನ್ಗಳಿಸಿದ್ದು ಬಿಟ್ಟರೆ, ಉಳಿದೆಲ್ಲ ಬ್ಯಾಟ್ಸ್ಮನ್ಗಳು ಒಂದಂಕಿ ಮೊತ್ತಕ್ಕೆ ಔಟಾದರು.
ಆಸೀಸ್ ಪರ ಕೇನ್ ರಿಚರ್ಡ್ಸನ್ 3, ಸೀನ್ ಅಬಾಟ್ 2, ಸ್ಟಾರ್ಕ್ 2, ಅಸ್ಟನ್ ಅಗರ್ ಪಂದು ವಿಕೆಟ್ ಪಡೆದರು.
107 ರನ್ಗಳ ಗುರಿ ಪಡೆದ ಆಸೀಸ್ ಫಿಂಚ್ ಹಾಗೂ ವಾರ್ನರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 11.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು. ಫಿಂಚ್ 36 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 52 ರನ್ಗಳಿಸಿದರೆ, ವಾರ್ನರ್ 35 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 48 ರನ್ಗಳಿಸಿದರು.
ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಸತತ 3ನೇ ಟಿ-20 ಸರಣಿ ಗೆದ್ದು ಬೀಗಿತು.