ETV Bharat / sports

ಬ್ರಾವೋ ಬದಲು ಆಸೀಸ್​​ ಬೌಲರ್ ಆಡಿಸಲು ಸಿಎಸ್​ಕೆ ಆಕಾಶ್ ಚೋಪ್ರಾ ಸಲಹೆ

author img

By

Published : Oct 17, 2020, 6:48 PM IST

ಆಡಿರುವ ಎಲ್ಲ ಲೀಗ್​ಗಳಲ್ಲೂ ಪ್ಲೇ ಆಫ್​ ಸಾಧನೆ ಮಾಡಿರುವ ಏಕೈಕ ತಂಡವಾಗಿರುವ ಸಿಎಸ್​ಕೆ ತಂಡ ಇದೇ ಮೊದಲ ಬಾರಿಗೆ ಎಲ್ಲ ವಿಭಾಗದಲ್ಲಿ ವೈಫಲ್ಯ ಅನುಭವಿಸಿದೆ. ಆಡಿರುವ 8 ಪಂದ್ಯಗಳಲ್ಲಿ 3 ಜಯ ಹಾಗೂ 5 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್​
ಡ್ವೇನ್ ಬ್ರಾವೋ

ದುಬೈ: ಅಂಕಪಟ್ಟಿಯಲ್ಲಿ 6ನೇ ಸ್ಥಾನಲ್ಲಿದರುವ 3 ಬಾರಿಯ ಚಾಂಪಿಯನ್ ಸಿಎಸ್​ಕೆ ತಂಡಕ್ಕೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಆಲ್​ರೌಂಡರ್​ ಬ್ರಾವೋ ಬದಲಿಗೆ ಜೋಶ್ ಹೇಜಲ್​ವುಡ್​ ರನ್ನು ಕಣಕ್ಕಿಳಿಸುವಂತೆ ಸಲಹೆ ನೀಡಿದ್ದಾರೆ.

ಆಡಿರುವ ಎಲ್ಲ ಲೀಗ್​ಗಳಲ್ಲೂ ಪ್ಲೇ ಆಫ್​ ಸಾಧನೆ ಮಾಡಿರುವ ಏಕೈಕ ತಂಡವಾಗಿರುವ ಸಿಎಸ್​ಕೆ ತಂಡ ಇದೇ ಮೊದಲ ಬಾರಿಗೆ ಎಲ್ಲ ವಿಭಾಗದಲ್ಲಿ ವೈಫಲ್ಯ ಅನುಭವಿಸಿದೆ. ಆಡಿರುವ 8 ಪಂದ್ಯಗಳಲ್ಲಿ 3 ಜಯ ಹಾಗೂ 5 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್​ ಶನಿವಾರ ನಡೆಯುವ 2ನೇ ಪಂದ್ಯದಲ್ಲಿ 2ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಈ ಪಂದ್ಯದ ಬಗ್ಗೆ ಮಾತನಾಡುತ್ತಾ ಆಕಾಶ್ ಚೋಪ್ರಾ ಹೇಜಲ್​ ವುಡ್​ರನ್ನು ಮತ್ತೆ ತಂಡಕ್ಕೆ ಕರೆಸುವಂತೆ ಸೂಚಿಸಿದ್ದಾರೆ.

ಬ್ರಾವೋ ಜಾಗದಲ್ಲಿ ಹೇಜಲ್​ವುಡ್​ರನ್ನು ಆಡಿಸಿದರೆ ತಂಡದ ಸಂಯೋಜನೆ ಚೆನ್ನಾಗಿರುತ್ತದೆ. ಇದರಿಂದ ಚೆನ್ನೈ ಡೆತ್ ಬೌಲಿಂಗ್ ಅದ್ಭುತವಾಗಿರುತ್ತದೆ. ಈ ಆವೃತ್ತಿಯಲ್ಲಿ ಇದುವರೆಗೂ ಚಾಂಪಿಯನ್ ಬೌಲಿಂಗ್ ಪ್ರದರ್ಶನ ಹೊರಬಂದಿಲ್ಲ. ಆರಂಭದಲ್ಲೇ ಗಾಯಗೊಂಡಿದ್ದರಿಂದ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿರಬಹುದು ಎಂದಿದ್ದಾರೆ.

ಇನ್ನು ಕಳೆದ ಪಂದ್ಯದಲ್ಲಿ ಗಾಯಗೊಂಡಿರುವ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್​ ಇಂದಿನ ಪಂದ್ಯದಲ್ಲಿ ಆಡುವುದು ಕಷ್ಟ ಎಂದಿರುವ ಚೋಪ್ರಾ, ಅಯ್ಯರ್​ ಇಲ್ಲದೇ ಡೆಲ್ಲಿ ತಂಡ ಸಿಎಸ್​ಕೆ ಮಣಿಸುವುದು ಕೂಡ ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.