ETV Bharat / sports

ಒಗ್ಗಟ್ಟಿನ ಪ್ರಾರ್ಥನೆ ಎಂದಿಗೂ ವ್ಯರ್ಥವಾಗಲ್ಲ: ದೀಪ ಹಚ್ಚಿ ಟ್ವೀಟ್​ ಮಾಡಿದ ಕೊಹ್ಲಿ-ಅನುಷ್ಕಾ! - ಕೊರೊನಾ ವೈರಸ್​

ಮಹಾಮಾರಿ ಕೊರೊನಾ ದೇಶಾದ್ಯಂತ ರೌದ್ರನರ್ತನವಾಡುತ್ತಿದ್ದು, ಇದರ ಮಧ್ಯೆ ಪ್ರಧಾನಿ ಮೋದಿ ನೀಡಿದ್ದ ಕರೆಗೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದ್ದಾರೆ.

A prayer in unity does make a difference:Virat

author img

By

Published : Apr 6, 2020, 9:31 AM IST

ಮುಂಬೈ: ಪ್ರಧಾನಿ ಮನವಿಗೆ ಎಲ್ಲಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಸೇರಿ ತಮ್ಮ ಮನೆಯಲ್ಲಿ ದೀಪ ಬೆಳಗಿಸಿದ್ದಾರೆ.

ವಿಶ್ವಕ್ಕೆ ನಮ್ಮ ಶಕ್ತಿ ಪ್ರದರ್ಶನವಾಗಲಿ... ರಾತ್ರಿ 9 ಗಂಟೆಗೆ ದೀಪ ಬೆಳಗಿಸೋಣ: ಕೊಹ್ಲಿ

ಒಟ್ಟಿಗೆ ತಮ್ಮ ಮನೆಯಲ್ಲಿ ದೀಪ ಹಚ್ಚಿರುವ ದಂಪತಿ, ಒಗ್ಗಟ್ಟಿನಿಂದ ಮಾಡಿರುವ ಪ್ರಾರ್ಥನೆ ನಿಜಕ್ಕೂ ವ್ಯತ್ಯಾಸವನ್ನುಂಟು ಮಾಡಲಿದೆ. ಇದು ಎಂದಿಗೂ ವ್ಯರ್ಥವಾಗಲ್ಲ. ಪ್ರತಿಯೊಂದು ಜೀವಿಗಾಗಿ ಪ್ರಾರ್ಥಿಸಿ ಮತ್ತು ಒಟ್ಟಿಗೆ ನಿಂತುಕೊಳ್ಳಿ ಎಂದು ಟ್ವಿಟ್​ ಮಾಡಿದ್ದಾರೆ.

ನಿನ್ನೆ ಬೆಳಗ್ಗೆ ಟ್ವೀಟ್ ಮಾಡಿದ್ದ ವಿರಾಟ್​ ಕೊಹ್ಲಿ, ಮೈದಾನದ ಶಕ್ತಿ ಅಲ್ಲಿರುವ ಅಭಿಮಾನಿಗಳು.ಭಾರತದ ಶಕ್ತಿ ಇಲ್ಲಿರುವ ಜನರು. ಇಂದು ರಾತ್ರಿ 9 ಗಂಟೆ 9 ನಿಮಿಷಗಳ ಕಾಲ ವಿಶ್ವಕ್ಕೆ ನಮ್ಮ ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ನಾವೆಲ್ಲರೂ ಒಂದು ಎಂಬ ಒಗ್ಗಟ್ಟು ಪ್ರದರ್ಶಿಸಬೇಕು ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.