ಸಿಡ್ನಿ : ಸೋಮವಾರ ಅಂತ್ಯಗೊಂಡ ಮೂರನೇ ಪಂದ್ಯ ಡ್ರಾನಲ್ಲಿ ಆಂತ್ಯಗೊಂಡ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಪರೂಪದ ದಾಖಲೆಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡದ ಐವರು ಬ್ಯಾಟ್ಸ್‌ಮನ್‌ಗಳು ಇದೇ ಮೊದಲ ಬಾರಿಗೆ 50 ಅಥವಾ ಅದಕ್ಕಿಂತ ಹೆಚ್ಚು ಎಸೆತ ಎದುರಿಸಿದ್ದಾರೆ.
ಆಸ್ಟ್ರೇಲಿಯಾ ನೀಡಿದ 407ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು 334 ರನ್ಗಳಿಸಿತ್ತು. ಆದರೆ, ನಾಲ್ಕನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಆರಕ್ಕೂ ಹೆಚ್ಚು ಬ್ಯಾಟ್ಸ್‌ಮನ್‌ಗಳು 50 ಅಥವಾ ಅದಕ್ಕಿಂತ ಹೆಚ್ಚು ಎಸೆತ ಎದುರಿಸಿದ್ದಾರೆ.
ಆರಂಭಿಕನಾಗಿ ಕಣಕ್ಕಿಳಿದಿದ್ದ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ಗೆ 71 ರನ್ಗಳ ಜೊತೆಯಾಟ ನೀಡಿದ್ದರು. ಗಿಲ್ 64 ಎಸೆತಗಳಲ್ಲಿ 31 ರನ್ಗಳಿಸಿದ್ರೆ, ರೋಹಿತ್ 98 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ನಂತರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಚೇತೇಶ್ವರ್ ಪೂಜಾರ(77 ರನ್) 205 ಎಸೆತಗಳೆನ್ನುದುರಿಸಿದ್ರೆ ಹಾಗೂ ರಿಷಭ್ ಪಂತ್(97) 118 ಎಸೆತಗಳನ್ನೆದುರಿಸಿದ್ದರು.
ಸೋಲಿನತ್ತ ಮುಖ ಮಾಡಿದ್ದ ಪಂದ್ಯವನ್ನು ಡ್ರಾಗೊಳ್ಳುವಂತೆ ಮಾಡಿದ್ದ ಹನುಮ ವಿಹಾರಿ ಮತ್ತು ಅಶ್ವಿನ್ ಬರೋಬ್ಬರಿ 43 ಓವರ್ಗಳನ್ನ ಎದುರಿಸಿದ್ದರು. ವಿಹಾರಿ 161 ಎಸೆತಗಳನ್ನೆದುರಿಸಿದ್ರೆ, ಅಶ್ವಿನ್ 128 ಎಸೆತಗಳನ್ನು ಎದುರಿಸಿದರು.