ETV Bharat / sports

ಐಪಿಎಲ್​​​​ 2020ರ ಹರಾಜಿನಲ್ಲಿ ಕಂಡುಬಂದ 5 ಆಶ್ಚರ್ಯಕರ ಸಂಗತಿಗಳು! - ಐಪಿಎಲ್​ ಹರಾಜು

ಟಿ-20 ಕ್ರಿಕೆಟ್​ ಲೀಗ್​ಗಳಲ್ಲಿ ಶ್ರೀಮಂತ ಲೀಗ್​ ಎಂದು ಕರೆಸಿಕೊಳ್ಳುವ ಐಪಿಎಲ್​ ಲೀಗ್​ನ 2020ರ ಆವೃತ್ತಿಯಲ್ಲಿ ಕೆಲವು ಹೊಸಬರು ಕೋಟಿ ಕೋಟಿ ಹಣ ಪಡೆದರೆ, ವಿಶ್ವಮಟ್ಟದಲ್ಲಿ ಹೆಸರುವಾಸಿಯಾದವರು ಕಡಿಮೆ ಮೊತ್ತ ಪಡೆದಿದ್ದಾರೆ. ಇನ್ನೂ ಕೆಲವರ ಖರೀದಿಗೆ ಯಾವ ಫ್ರಾಂಚೈಸಿಗಳು ಮುಂದಾಗಲಿಲ್ಲ.

5 biggest surprise
5 biggest surprise
author img

By

Published : Dec 21, 2019, 1:49 PM IST

ಕೋಲ್ಕತ್ತಾ: ಟಿ-20 ಕ್ರಿಕೆಟ್​ ಲೀಗ್​ಗಳಲ್ಲಿ ಶ್ರೀಮಂತ ಲೀಗ್​ ಎಂದು ಕರೆಸಿಕೊಳ್ಳುವ ಐಪಿಎಲ್​ ಲೀಗ್​ನ 2020ರ ಆವೃತ್ತಿಯಲ್ಲಿ ಕೆಲವು ಹೊಸಬರು ಕೋಟಿ ಕೋಟಿ ಹಣ ಪಡೆದರೆ, ವಿಶ್ವಮಟ್ಟದಲ್ಲಿ ಹೆಸರುವಾಸಿಯಾದವರು ಕಡಿಮೆ ಮೊತ್ತ ಪಡೆದಿದ್ದಾರೆ. ಇನ್ನೂ ಕೆಲವರ ಖರೀದಿಗೆ ಯಾವ ಫ್ರಾಂಚೈಸಿಗಳು ಮುಂದಾಗಲಿಲ್ಲ.

2.ಕ್ರಿಸ್​ ಲಿನ್

ಐಪಿಎಲ್​ ಸೇರಿದಂತೆ ಪ್ರಪಂಚದ ವಿವಿಧ ಟಿ-20 ಲೀಗ್​ಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್​ನಿಂದ ಹೆಸರುವಾಗಿಯಾಗಿರುವ ಆಸ್ಟ್ರೇಲಿಯಾದ ಕ್ರಿಸ್​ ಲಿನ್ ಕೇವಲ 2 ಕೋಟಿ ಪಡೆದಿದ್ದಾರೆ. 2018ರ ಐಪಿಎಲ್​ನಲ್ಲಿ 9.6 ಕೋಟಿ ಹಣ ಪಡೆದಿದ್ದ ಲಿನ್​ರನ್ನು ಯಾವ ಫ್ರಾಂಚೈಸಿ ಕೊಳ್ಳಲು ಮುಂದಾಗಲಿಲ್ಲ. ಅವರ ಮೂಲ ಬೆಲೆ 2 ಕೋಟಿಗೆ ಮುಂಬೈ ಇಂಡಿಯನ್ಸ್​ ಖರೀದಿಸಿದೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ ಆಡದ ಕೆಲವು ಯುವ ಆಟಗಾರರು ಇವರಿಗಿಂತ ಹೆಚ್ಚು ಹಣ ಪಡೆದಿದ್ದಾರೆ.

2. ಕೆಸ್ರಿಕ್​ ವಿಲಿಯಮ್ಸ್​

ವೆಸ್ಟ್​ ಇಂಡೀಸ್​ ತಂಡದ ಬೌಲರ್​ ಕೆಸ್ರಿಕ್​ ವಿಲಿಯಮ್ಸ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್​ ಕೂಡ ನಡೆಸಬಲ್ಲ ಇವರನ್ನು ಯಾವ ಫ್ರಾಂಚೈಸಿಯೂ ಕೊಂಡುಕೊಳ್ಳದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

3. ಕ್ರಿಸ್​ ಮೋರಿಸ್​ಗೆ 10 ಕೋಟಿ

​ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಕ್ರಿಸ್​ ಮೋರಿಸ್​ ತಮ್ಮ ಕಳಪೆ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್​ನಿಂದ ಹೊರಬಿದ್ದಿದ್ದರು. 1.15 ಕೋಟಿ ಮೂಲ ಬೆಲೆ ಇದ್ದ ಮೋರಿಸ್​ರನ್ನು ಆರ್​ಸಿಬಿ ಬರೋಬ್ಬರಿ 10 ಕೋಟಿಗೆ ಖರೀದಿಸಿರುವುದು ಸೋಜಿಗದ ಸಂಗತಿಯಾಗಿದೆ. ಇದೇ ತಂಡ ಸ್ಟೈನ್​ರನ್ನು 2 ಕೋಟಿಗೆ, ಆ್ಯರೋನ್​ ಫಿಂಚ್​ರನ್ನು 4.4 ಕೋಟಿ ನೀಡಿ ಖರೀದಿಸಿದೆ.

ಪಿಯೂಷ್​ ಚಾವ್ಲಾಗೆ 6.75 ಕೋಟಿ

2018ರ ಹರಾಜಿನಲ್ಲಿ 4.20 ಕೋಟಿಗೆ ಕೆಕೆಆರ್​ ಫ್ರಾಂಚೈಸಿ ಪಿಯೂಸ್​ ಚಾವ್ಲಾರನ್ನು ರೀಟೈನ್​ ಮಾಡಿಕೊಂಡಿತ್ತು. ದುಬಾರಿ ಎಂದು ತಂಡದಿಂದ ಹೊರಬಿದ್ದಿದ್ದ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್​ 6.75 ಕೋಡಿ ಹಣ ನೀಡಿ ಖರೀದಿಸಿದೆ. ಇವರನ್ನು ಖರೀದಿಸಲು ಡೆಲ್ಲಿ, ಪಂಜಾಬ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಭರ್ಜರಿ ಪೈಪೋಟಿ ನಡೆಸಿದ್ದವು.

5: ವರುಣ್​ ಚಕ್ರವರ್ತಿ 4 ಕೋಟಿ

2018ರ ಹರಾಜಿನಲ್ಲಿ 8.4 ಕೋಟಿ ರೂ. ಪಡೆದು ದಾಖಲೆ ಸೃಷ್ಠಿಸಿದ್ದ ತಮಿಳುನಾಡಿನ ಯುವ ಬೌಲರ್​ ವರುಣ್​ ಚಕ್ರವರ್ತಿ 12ನೇ ಆವತ್ತಿಯ ಐಪಿಎಲ್​ನಲ್ಲಿ ಆಡಿದ್ದು ಕೇವಲ ಒಂದು ಪಂದ್ಯ. ಅದರಲ್ಲೂ ಕೇವಲ ಒಂದು ಓವರ್​ ಬೌಲಿಂಗ್​ ಮಾಡಿ 25 ರನ್​ ನೀಡಿದ್ದರು. ಆದರೆ ಮತ್ತೆ ಇವರನ್ನು ಈ ಬಾರಿ ಕೆಕೆಆರ್​ 4 ಕೋಟಿ ನೀಡಿ ಖರೀದಿಸಿದೆ.

ಈ ಐಪಿಎಲ್​ ಹರಾಜಿನಲ್ಲಿ ರಣಜಿ ಕ್ರಿಕೆಟ್​ನಲ್ಲಿ ಒಂದೆರಡು ಪಂದ್ಯವಾಡಿದ ಆಟಗಾರರಿಗೆ ಫ್ರಾಂಚೈಸಿಗಳು ಮನ್ನಣೆ ನೀಡಿದ್ದು, ವಿದೇಶಿ ಆಟಗಾರರನ್ನು ತಿರಸ್ಕರಿಸಿದ್ದಾರೆ. ಆದರೆ ಮಿಲಿಯನ್​ ಡಾಲರ್​ ಟೂರ್ನಿಯಲ್ಲಿ ಅದೃಷ್ಟ ಕೆಲವೇ ಆಟಗಾರರಿಗೆ ಸಿಕ್ಕಿದ್ದು, ಅಂತಹವರಲ್ಲಿ ಆಸೀಸ್ ವೇಗಿ ಪ್ಯಾಟ್​ ಕಮ್ಮಿನ್ಸ್​ ಒಬ್ಬರು. ಇವರು ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಹಣ ಪಡೆದ 2ನೇ ಆಟಗಾರ ಹಾಗೂ ಮೊದಲ ವಿದೇಶಿ ಆಟಗಾರ ಎನಿಸಿಕೊಂಡರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.