ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ಗೂ ಮುನ್ನ ಬ್ರಿಸ್ಬೇನ್ನಲ್ಲಿನ ಕಟ್ಟುನಿಟ್ಟಾದ ಕ್ವಾರಂಟೈನ್ ನಿಯಮವನ್ನು ಸಿಡಿಸಿಬೇಕೆಂದು ಮನವಿ ಮಾಡಿ ಬಿಸಿಸಿಐ ಕ್ರಿಕೆಟ್ ಆಸ್ಟ್ರೇಲಿಯಾ ಔಪಚಾರಿಕ ಪತ್ರ ಬರೆದಿದೆ.
ಪ್ರವಾಸದ ವಿಧಾನಗಳನ್ನು ಕುರಿತು ಎರಡು ಮಂಡಳಿಗಳು ಸಹಿ ಮಾಡಿರುವ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ ಬಿಸಿಸಿಐನ ಉನ್ನತ ಕಾರ್ಯನಿರ್ವಾಹಕರು ಸಿಎ ಮುಖ್ಯಸ್ಥ ಅರ್ಲ್ ಎಡ್ಡಿಂಗ್ಸ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಪತ್ರದಲ್ಲಿ ಪ್ರತ್ಯೇಕ ಪಂದ್ಯಗಳಿಗೆ ಪ್ರತ್ಯೇಕ ನಗರ ಪ್ರವಾಸ ಕೈಗೊಳ್ಳುವ ವೇಳೆ ಕಠಿಣ ಕ್ವಾರಂಟೈನ್ ಆಗಬೇಕೆಂದು ತಿಳಿಸಿಲ್ಲ ಎಂಬುದನ್ನು ಬಿಸಿಸಿಐ ಒತ್ತಿ ಹೇಳಿದೆ.
ಈ ಪತ್ರದಲ್ಲಿ ಆಟಗಾರರು ಒಟ್ಟಿಗೆ ಹೋಟೆಲ್ನಲ್ಲಿ ಸೇರಲು, ಒಟ್ಟಿಗೆ ಊಟ ಮಾಡಲು ಐಪಿಎಲ್ನಲ್ಲಿ ಇದ್ದಂತೆ ಇರಲು ಅವಕಾಶ ಮಾಡಿಕೊಡಬೇಕು ಎಂದು ಬಿಸಿಸಿಐ ಕೇಳಿಕೊಳ್ಳಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ಕ್ರಿಕೆಟ್ ಮಂಡಳಿಗಳ ನಡುವೆ ಈ ಕುರಿತು ಚರ್ಚೆ ನಡೆಯುತ್ತಿದೆ. ಆದರೂ ನಾವು ಔಪಚಾರಿಕವಾಗಿ ಕ್ರಿಕೆಟ್ ಆಸ್ಟ್ರೇಲಿಯಾಗೆ ಪತ್ರ ಬರೆದಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ ಮಾಡಿದ್ದ ವೇಳೆ ಪ್ರತಿ ಫ್ಲೋರ್ಗೂ ಒಬ್ಬ ಪೊಲೀಸ್ ಅಧಿಕಾರಿಯನ್ನು ನೇಮಿಸಲಾಗಿತ್ತು. ಹಾಗಾಗಿ ಬಯೋಬಬಲ್ ಪ್ರೋಟೋಕಾಲ್ಗಳನ್ನು ಯಾರು ಉಲ್ಲಂಘಿಸಲು ಸಾಧ್ಯವಾಗಿರಲಿಲ್ಲ. ಅದರೆ ಮತ್ತೆ ಅದೇ ರೀತಿಯ ಬಯೋಬಬಲ್ ವ್ಯವಸ್ಥೇ ತುಂಬಾ ಕಠಿಣವಾಗಲಿದೆ ಎಂದು ಬಿಸಿಸಿಐ ಅಧಿಕಾರಿಗಳ ಕೋರಿಕೆಯಾಗಿದೆ.
ಇದನ್ನು ಓದಿ:ಅಶ್ವಿನ್ರನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಲು ಎದುರು ನೋಡುತ್ತಿದ್ದೇನೆ: ಸ್ಟೀವ್ ಸ್ಮಿತ್