ಅಹ್ಮದಾಬಾದ್: ಅಕ್ಷರ್ ಪಟೇಲ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಆಂಗ್ಲರನ್ನು ಕೇವಲ 112 ರನ್ಗಳಿಗೆ ಕಟ್ಟಿಹಾಕಿದ್ದ ಭಾರತ ತಂಡ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 99 ರನ್ ಗಳಿಸಿ ಅಹರ್ನಿಶಿ ಟೆಸ್ಟ್ನಲ್ಲಿ ಮೊದಲ ದಿನ ಪ್ರಾಬಲ್ಯ ಸಾಧಿಸಿದೆ.
ಅಹ್ಮದಾಬಾದ್ನ ನವೀಕರಣಗೊಂಡಿರುವ ನರೇದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಆರಂಭದಿಂದಲೂ ಭಾರತದ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡಲು ಸಾಧ್ಯವಾಗಲಿಲ್ಲ. ಪಂದ್ಯ ಆರಂಭವಾದ 3ನೇ ಓವರ್ನಲ್ಲಿ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಶಾಂತ್ ಶರ್ಮಾ, ಡೊಮೆನಿಕ್ ಸಿಬ್ಲೀ(0) ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಮೇಲುಗೈ ತಂದುಕೊಟ್ಟರು.
ಆದರೆ ನಂತರ ದಾಳಿಗಿಳಿದ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಕ್ರೀಸ್ನಲ್ಲಿ ನೆಲೆಯೂರದಂತೆ ಮಾಡಿದರು.ಅಕ್ಷರ್ ಪಟೇಲ್ 38 ರನ್ ನೀಡಿ 6 ವಿಕೆಟ್ ಪಡೆದರೆ, ಆರ್.ಅಶ್ವಿನ್ 26 ರನ್ ನೀಡಿ 3 ವಿಕೆಟ್ ಪಡೆದು ಆಂಗ್ಲರ ತಂಡವನ್ನು ಕೇವಲ 112 ರನ್ಗಳಿಗೆ ಆಲೌಟ್ ಆಗುವಂತೆ ಮಾಡಿದರು.
-
That's Stumps on Day 1 of the third @Paytm #INDvENG #PinkBallTest! @ImRo45 5⃣7⃣*@imVkohli 2⃣7⃣@ajinkyarahane88 1⃣*#TeamIndia 99/3 & trail England by 13 runs.
— BCCI (@BCCI) February 24, 2021 " class="align-text-top noRightClick twitterSection" data="
Scorecard 👉 https://t.co/9HjQB6TZyX pic.twitter.com/P4ziSw1mzz
">That's Stumps on Day 1 of the third @Paytm #INDvENG #PinkBallTest! @ImRo45 5⃣7⃣*@imVkohli 2⃣7⃣@ajinkyarahane88 1⃣*#TeamIndia 99/3 & trail England by 13 runs.
— BCCI (@BCCI) February 24, 2021
Scorecard 👉 https://t.co/9HjQB6TZyX pic.twitter.com/P4ziSw1mzzThat's Stumps on Day 1 of the third @Paytm #INDvENG #PinkBallTest! @ImRo45 5⃣7⃣*@imVkohli 2⃣7⃣@ajinkyarahane88 1⃣*#TeamIndia 99/3 & trail England by 13 runs.
— BCCI (@BCCI) February 24, 2021
Scorecard 👉 https://t.co/9HjQB6TZyX pic.twitter.com/P4ziSw1mzz
ಜ್ಯಾಕ್ ಕ್ರಾಲೆ 84 ಎಸೆತಗಳಲ್ಲಿ 10 ಬೌಂಡರಿ ಸಹಿತ 53 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. 17 ರನ್ ಗಳಿಸಿದ ನಾಯಕ ರೂಟ್ 2ನೇ ಗರಿಷ್ಠ ಸ್ಕೋರರ್ ಆದರು. ಸಿಬ್ಲೀ ಮತ್ತು ಬೈರ್ಸ್ಟೋವ್ ಸೊನ್ನೆ ಸುತ್ತಿದರೆ, ಸ್ಟೋಕ್ಸ್ 6, ಪೋಪ್ 1, ಫೋಕ್ಸ್ 12, ಆರ್ಚರ್ 11, ಲೀಚ್ 2, ಬ್ರಾಡ್ 3 ರನ್ ಗಳಿಸಿದರು.
ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿ ಭಾರತ ತಂಡ 3 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿದೆ. ರೋಹಿತ್ ಶರ್ಮಾ 92 ಎಸೆತಗಳಲ್ಲಿ 9 ಬೌಂಡರಿ ಸಹಿತ 57 ರನ್ ಗಳಿಸಿ ಅಜೇಯ 57 ರನ್ ಗಳಿಸಿದ್ದಾರೆ.
ಆರಂಭಿಕ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ 11 ರನ್ಗೆ ಔಟಾದರೆ, ಪೂಜಾರ ಖಾತೆ ತೆರೆಯದೇ ಪೆವಿಲಿಯನ್ ಸೇರಿಕೊಂಡರು. ಇನ್ನು ನಾಯಕ ಕೊಹ್ಲಿ 27 ರನ್ ಗಳಿಸಿ ಔಟ್ ಆದರು.
ಇದನ್ನು ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ : ಜಹೀರ್ ಹಿಂದಿಕ್ಕಿ 4ನೇ ಸ್ಥಾನ ಪಡೆದ ಆಶ್ವಿನ್