ರಾಂಚಿ: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟೆಸ್ಟ್ನ ಮೂರನೇ ದಿನದಾಟದಲ್ಲಿ ಭಾರತೀಯ ಬೌಲರ್ಗಳು ಮೇಲುಗೈ ಸಾಧಿಸಿದ್ದು, ಭೋಜನ ವಿರಾಮದ ವೇಳೆಗೆ ಪ್ರವಾಸಿ ತಂಡ 6 ವಿಕೆಟ್ ನಷ್ಟಕ್ಕೆ 129 ರನ್ ಕಲೆ ಹಾಕಿದೆ.
ಎರಡನೇ ದಿನದಾಟದ ಅಂತ್ಯ 2 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕನ್ನರು ಇಂದು ಮುಂಜಾನೆ ನಾಯಕ ಫ್ಲೆಸಿಸ್ ವಿಕೆಟ್ ಕಳೆದುಕೊಂಡಿತು.
ನಾಯಕನ ನಿರ್ಗಮನ ಬಳಿಕ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಝುಬೈರ್ ಹಂಝಾ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. 79 ಎಸೆತದಲ್ಲಿ 1 ಸಿಕ್ಸರ್ ಹಾಗೂ 10 ಬೌಂಡರಿ ಸಹಿತ 62 ರನ್ ಗಳಿಸಿ ಜಡೇಜಾ ಎಸೆತಕ್ಕೆ ಬಲಿಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ತೆಂಬಾ ಬವುಮಾ 32 ರನ್ನಿಗೆ ನದೀಮ್ಗೆ ವಿಕೆಟ್ ಒಪ್ಪಿಸಿದರು.
-
A great morning session for #TeamIndia bowlers as they pick up 4 wickets and reduce South Africa to 129/6 on Day 3 of the 3rd Test.
— BCCI (@BCCI) October 21, 2019 " class="align-text-top noRightClick twitterSection" data="
Updates - https://t.co/aHgpd1BT6z #INDvSA pic.twitter.com/BLtY3t8Xva
">A great morning session for #TeamIndia bowlers as they pick up 4 wickets and reduce South Africa to 129/6 on Day 3 of the 3rd Test.
— BCCI (@BCCI) October 21, 2019
Updates - https://t.co/aHgpd1BT6z #INDvSA pic.twitter.com/BLtY3t8XvaA great morning session for #TeamIndia bowlers as they pick up 4 wickets and reduce South Africa to 129/6 on Day 3 of the 3rd Test.
— BCCI (@BCCI) October 21, 2019
Updates - https://t.co/aHgpd1BT6z #INDvSA pic.twitter.com/BLtY3t8Xva
ನಂತರದಲ್ಲಿ ಕ್ಲಾಸೆನ್(6) ಬೇಗನೇ ನಿರ್ಗಮಿಸಿದರು. ಸದ್ಯ ಜಾರ್ಜ್ ಲಿಂಡೆ(10) ಹಾಗೂ ಡೇನ್ ಪೀಟ್(4) ರನ್ ಗಳಿಸಿ ಆಟ ಮುಂದುವರೆಸಿದ್ದಾರೆ. ದ.ಆಫ್ರಿಕಾ ಇನ್ನೂ 368 ರನ್ ಹಿನ್ನಡೆಯಲ್ಲಿದೆ.
ಸೆಹ್ವಾಗ್,ಸಚಿನ್,ಗೇಲ್ ಜೊತೆ ವಿಶೇಷ ದಾಖಲೆ ಹಂಚಿಕೊಂಡ ಹಿಟ್ಮ್ಯಾನ್
ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ, ಉಮೇಶ್ ಯಾದವ್ 2 ವಿಕೆಟ್ ಪಡೆದಿದ್ದರೆ, ಮೊಹಮ್ಮದ್ ಶಮಿ ಹಾಗೂ ಶಹಬಾಜ್ ನದೀಂ ತಲಾ ಒಂದೊಂದು ವಿಕೆಟ್ ಹಂಚಿಕೊಂಡಿದ್ದಾರೆ.