ಸಿಡ್ನಿ(ಆಸ್ಟ್ರೇಲಿಯಾ): ಆಸೀಸ್ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟಿ-20 ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ನಡೆಸಿದ್ದಕ್ಕಾಗಿ ಟೀಂ ಇಂಡಿಯಾ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ಹಾಕಲಾಗಿದೆ.
ಭಾರತ ನಿಗದಿತ ಸಮಯಕ್ಕೆ ಸರಿಯಾಗಿ 20 ಓವರ್ ಬೌಲಿಂಗ್ ಪೂರ್ಣಗೊಳಿಸದ ಕಾರಣ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ದಂಡ ವಿಧಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ತಿರುಗಿ ಬೀಳಲು ನೆರವಾದ ಯೋಜನೆ ಬಹಿರಂಗಪಡಿಸಿದ ರಾಹುಲ್
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ ಒಂದು ತಂಡ ನಿಗದಿತ ಸನಮಯದಲ್ಲಿ ಬೌಲಿಂಗ್ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಆಟಗಾರರು ತಮ್ಮ ಪಂದ್ಯದ ಸಂಭಾವನೆಯ ಶೇ. 20ರಷ್ಟನ್ನು ದಂಡವಾಗಿ ಪಾವತಿಸಬೇಕು ಎಂದು ಹೇಳುತ್ತದೆ.
ಆಸ್ಟ್ರೇಲಿಯಾ ವಿರುದ್ಧ ಮಂಗಳವಾರ ನಡೆದ ಅಂತಿಮ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 12 ರನ್ಗಳಿಂದ ಸೋಲು ಕಂಡರೂ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದರಿಂದ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.