ETV Bharat / sports

ಐಪಿಎಲ್​ ನಡೆಯದಿದ್ರೆ ಈ ಮೂವರು ವಿಶ್ವಕಪ್​ ಆಡುವುದು ಬಹುತೇಕ ಡೌಟ್​! - ಇಂಡಿಯನ್​ ಪ್ರೀಮಿಯರ್​ ಲೀಗ್​

ಕೊರೊನಾ ಮಹಾಮಾರಿ ಈಗಾಗಲೇ ಎಲ್ಲಾ ವಲಯಗಳ ಮೇಲೂ ತನ್ನ ಕರಿನೆರಳು ಬೀರಿದ್ದು, ಕ್ರೀಡಾ ವಲಯ ಕೂಡ ಇದರಿಂದ ತತ್ತರಿಸಿ ಹೋಗಿದೆ.

Indian Premier League
ಇಂಡಿಯನ್​ ಪ್ರೀಮಿಯರ್​ ಲೀಗ್​
author img

By

Published : Mar 23, 2020, 7:06 PM IST

ಮುಂಬೈ: ಮಹಾಮಾರಿ ಕೊರೊನಾ ವೈರಸ್​ ಇಡೀ ವಿಶ್ವದ ಮೇಲೆ ಕರಿನೆರಳು ಬೀರಿದ್ದು, ಇದರಿಂದ ಎಲ್ಲಾ ವಲಯಗಳು ಸಂಪೂರ್ಣವಾಗಿ ಬಂದ್​ ಆಗಿವೆ. ಕ್ರೀಡಾ ಲೋಕದ ಮೇಲೂ ಕೊರೊನಾ ಪರಿಣಾಮ ಬೀರಿದೆ. ಅದೇ ಕಾರಣಕ್ಕಾಗಿ ಮುಂಬರುವ ಕೆಲವೊಂದು ಕ್ರೀಡಾ ಚಟುವಟಿಕೆ ಮುಂದೂಡಿಕೆಯಾಗಿದ್ದು, ಕೆಲವೊಂದು ಟೂರ್ನಿ ರದ್ದುಗೊಂಡಿವೆ.

ವಿಶ್ವದ ಶ್ರೀಮಂತ ಕ್ರೀಡೆ ಎನಿಸಿಕೊಂಡಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​​ ಕೂಡ ಈಗಾಗಲೇ ಮುಂದೂಡಿಕೆಯಾಗಿದ್ದು, ಏಪ್ರಿಲ್​ 13ರಂದು ಇದು ನಡೆಯುವುದರ ಕುರಿತು ಮಹತ್ವದ ನಿರ್ಧಾರ ಹೊರ ಬೀಳಲಿದೆ. ಒಂದು ವೇಳೆ ಇದು ರದ್ದುಗೊಂಡರೆ ಕೆಲ ಪ್ರಮುಖ ಪ್ಲೇಯರ್ಸ್​ಗಳ​ ಕ್ರಿಕೆಟ್ ಬದುಕು ಬಹುತೇಕ ಅಂತ್ಯಗೊಳ್ಳಲಿದೆ.

3 Indian players who stand to lose the most if IPL is cancelled
ಎಂ.ಎಸ್​.ಧೋನಿ

ಈಗಾಗಲೇ ಆಯ್ಕೆ ಸಮಿತಿ ಹೇಳಿರುವ ಪ್ರಕಾರ ಒಂದು ವೇಳೆ ಐಪಿಎಲ್​ನಲ್ಲಿ ಧೋನಿ ಅದ್ಭುತವಾಗಿ ಪ್ರದರ್ಶನ ನೀಡಿದರೆ ಅವರಿಗೆ ಖಂಡಿತವಾಗಿ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಸಿಗಲಿದೆ ಎಂದಿದೆ. ಆದರೆ ಇದೀಗ ಈ ಟೂರ್ನಿ ನಡೆಯುವುದೇ ಡೌಟ್​ ಎನ್ನಲಾಗ್ತಿದೆ.

ಸಂಜು ಸ್ಯಾಮ್ಸನ್​

ಧೋನಿ ಜತೆಗೆ ಕೇರಳದ ವಿಕೆಟ್​ ಕೀಪರ್,​ ಬ್ಯಾಟ್ಸಮನ್​ ಸಂಜು ಸ್ಯಾಮ್ಸನ್​ ಹಾಗೂ ಆಲ್​ರೌಂಡರ್​ ಕೃನಾಲ್​ ಪಾಂಡ್ಯ ಕ್ರಿಕೆಟ್​ ಭವಿಷ್ಯ ಕೂಡ ಅಡಕತ್ತರಿಯಲ್ಲಿ ಸಿಲುಕಿದ್ದು, ಅವರು ಟೀಂ ಇಂಡಿಯಾ ಸೇರಿಕೊಳ್ಳಬೇಕಾದರೆ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಟೂರ್ನಿ ರದ್ದುಗೊಂಡರೆ ಇವರ ಭವಿಷ್ಯ ಡೋಲಾಯಮಾನವಾಗಲಿದೆ ಎನ್ನಲಾಗುತ್ತಿದೆ.

ಕೃನಾಲ್​ ಪಾಂಡ್ಯ

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಪ್ಲೇಯರ್ಸ್ ಟಿ-20 ವಿಶ್ವಕಪ್​ನಲ್ಲಿ ಅವಕಾಶ ಪಡೆದುಕೊಳ್ಳುವುದು ಬಹುತೇಕ ಕನ್ಫರ್ಮ್​ ಆಗಿತ್ತು. ಇದೀಗ ಆಯ್ಕೆ ಸಮಿತಿ ಯಾವ ಆಧಾರದ ಮೇಲೆ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.