ಅಹ್ಮದಾಬಾದ್ : ಮುಂಬೈ ಇಂಡಿಯನ್ಸ್ ತಂಡದಲ್ಲಿ ಸತತ 2-3 ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದ ಸೂರ್ಯ ಕುಮಾರ್ ಯಾದವ್ ಮತ್ತು ಅವರ ಸಹ ಆಟಗಾರ ಇಶಾನ್ ಕಿಶನ್ ಇಂದು ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
-
BIG DAY for @surya_14kumar & @ishankishan51 who are all set for their T20I debuts 😎😎
— BCCI (@BCCI) March 14, 2021 " class="align-text-top noRightClick twitterSection" data="
What a moment for these two 🧢💙 #TeamIndia 🇮🇳🇮🇳#INDvENG @Paytm pic.twitter.com/cFVVxDgvIO
">BIG DAY for @surya_14kumar & @ishankishan51 who are all set for their T20I debuts 😎😎
— BCCI (@BCCI) March 14, 2021
What a moment for these two 🧢💙 #TeamIndia 🇮🇳🇮🇳#INDvENG @Paytm pic.twitter.com/cFVVxDgvIOBIG DAY for @surya_14kumar & @ishankishan51 who are all set for their T20I debuts 😎😎
— BCCI (@BCCI) March 14, 2021
What a moment for these two 🧢💙 #TeamIndia 🇮🇳🇮🇳#INDvENG @Paytm pic.twitter.com/cFVVxDgvIO
ಯುಎಇನಲ್ಲಿ ನಡೆದಿದ್ದ ಕಳೆದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಈ ಜೋಡಿ ಮುಂಬೈ ಇಂಡಿಯನ್ಸ್ಗೆ ದಾಖಲೆಯ 5ನೇ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು. ಅವರ ಈ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ. ಇಶಾನ್ ಕಿಶನ್ ಮುಂಬೈ ಪರ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು 14 ಪಂದ್ಯಗಳಿಂದ 57.33ರ ಸರಾಸರಿಯಲ್ಲಿ 516 ರನ್ಗಳಿಸಿ ಮುಂಬೈ ಪರ ಗರಿಷ್ಠ ಸ್ಕೋರರ್ ಆಗಿದ್ದರು.
-
Suryakumar Yadav and Ishan Kishan are set to make their first T20I appearances 🙌#INDvENG pic.twitter.com/1mXZJR5LGr
— ICC (@ICC) March 14, 2021 " class="align-text-top noRightClick twitterSection" data="
">Suryakumar Yadav and Ishan Kishan are set to make their first T20I appearances 🙌#INDvENG pic.twitter.com/1mXZJR5LGr
— ICC (@ICC) March 14, 2021Suryakumar Yadav and Ishan Kishan are set to make their first T20I appearances 🙌#INDvENG pic.twitter.com/1mXZJR5LGr
— ICC (@ICC) March 14, 2021
ಸೂರ್ಯಕುಮಾರ್ ಯಾದವ್ ಕೂಡ ಕಳೆದ 3 ಐಪಿಎಲ್ಗಳಲ್ಲೂ ಸತತ 400+ ರನ್ ಬಾರಿಸಿದ್ದರು. ಅವರು ದೇಶಿ ಕ್ರಿಕೆಟ್‌ನಲ್ಲಿ 77 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 14 ಶತಕ ಹಾಗೂ 26 ಅರ್ಧ ಶತಕ ಸೇರಿ 5326 ರನ್, ಲಿಸ್ಟ್ ಎ ಕ್ರಿಕೆಟ್‌ನಲ್ಲಿ 97 ಪಂದ್ಯಗಳಲ್ಲಿ 3 ಶತಕ ಹಾಗೂ 17 ಅರ್ಧ ಶತಕ ಸಹಿತ 2779 ರನ್. ಐಪಿಎಲ್ ಸೇರಿ 170 ಟಿ-20 ಪಂದ್ಯಗಳಿಂದ 3567 ರನ್ ಗಳಿಸಿದ್ದಾರೆ.
ಇಂದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಕ್ಷರ್ ಪಟೇಲ್ ಬದಲಿಗೂ ಹಾಗೂ ಶಿಖರ್ ಧವನ್ ಬದಲಿಗೆ ಇಶಾನ್ ಕಿಶನ್ ಕಣಕ್ಕಿಳಿದಿದ್ದಾರೆ. ಪದಾರ್ಪಣೆ ಮಾಡಿದ ಆಟಗಾರರಿಗೆ ಕೆಲವು ಕ್ರಿಕೆಟ್ ದಿಗ್ಗಜರು ಸೇರಿ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.