ಮೆಲ್ಬೋರ್ನ್: ಕೊರೊನಾ ವೈರಸ್ ಭೀತಿಯ ನಡುವೆ ಟಿ-20 ವಿಶ್ವಕಪ್ ಆಯೋಜಕರು ಆಸ್ಟ್ರೇಲಿಯಾ ಫುಟ್ಬಾಲ್ ಕೋಡ್ನೊಂದಿಗೆ ನೇರವಾಗಿ ಸ್ಪರ್ಧಿಸಿ ಯಶಸ್ವಿಯಾಗಿ ಟೂರ್ನಮೆಂಟ್ ಆಯೋಜಿಸಲು ಸಿದ್ಧರಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ ಹಾಗೂ ರಗ್ಬಿ ಫುಟ್ಬಾಲ್ ಲೀಗ್ ಕೂಡ ರದ್ದಾಗಿತ್ತು. ಇದೀಗ ಟಿ20 ವಿಶ್ವಕಪ್ ಪುನರಾರಂಭಿಸುವ ಸಂದರ್ಭದಲ್ಲಿ ತಾವೂ ಕೂಡ ಟೂರ್ನಿ ನಡೆಸುವ ಮೂಲಕ ಪ್ರತಿಸ್ಪರ್ಧಿಯಾಗಬಹುದು ಎನ್ನಲಾಗುತ್ತಿದೆ.
ನಾವು ಯೋಜನೆಯಂತೆ ಕ್ರೀಡಾಕೂಟ ಮುಂದುವರಿಸಲು ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದೇವೆ. ಟೂರ್ನಿಯ ಬಗ್ಗೆ ಯಾವುದೇ ರೀತಿಯ ತ್ವರಿತ ನಿರ್ಧಾರವಿಲ್ಲ ಎಂದು ಟಿ20 ವಿಶ್ವಕಪ್ನ ಸಂಘಟನಾ ಸಮಿತಿಯ ಮುಖ್ಯ ಕಾರ್ಯ ನಿರ್ವಾಹಕ ನಿಕ್ ಹ್ಯಾಕ್ಲೆ ತಿಳಿಸಿದ್ದಾರೆ.
ಎಲ್ಲಾ ಸಮಸ್ಯೆ ಪರಿಹಾರವಾದರೆ ನಾವು ಟೂರ್ನಿ ಮುಂದುವರಿಸುವ ಬಗ್ಗೆ ಆಲೋಚಿಸಲಿದ್ದೇವೆ. ಒಂದು ವೇಳೆ ಪರಿಸ್ಥಿತಿ ಬಗೆಹರಿಯದಿದ್ದರೆ ವಿವೇಕಯುತವಾಗಿ ಯೋಚಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ನಮಗೆ 7 ತಿಂಗಳ ಸಮಯವಿದೆ. ನಮಗೆ ಟೂರ್ನಿಯ ಬಗ್ಗೆ ಆಲೋಚಿಸಲು ಸಮಯಾವಕಾಶವಿದೆ. ಇನ್ನು ಮುಂದೂಡಲ್ಪಟ್ಟಿರುವ AFL ಮತ್ತು NRL ಲೀಗ್ಗಳು ಸೆಪ್ಟೆಂಬರ್ನಲ್ಲಿ ಆರಂಭಿಸಿದರೂ ನಿಸ್ಸಂಶಯವಾಗಿ ಚಳಿಗಾಲದ ಸಂಕೇತಗಳಿಗೆ ಕಠಿಣವಾಗಲಿದೆ ಎಂದು ಭಾವಿಸುತ್ತೇವೆ.
ಅವರು ಟೂರ್ನಿಯನ್ನು ಮುಂದುವರಿಸಲು ಆಲೋಚಿಸಿದರೂ ವಿಶ್ವಕಪ್ ಟೂರ್ನಿಯೇ ಬಲಿಷ್ಠ ಸ್ಥಾನದಲ್ಲಿ ನಿಲ್ಲಲಿದೆ. ಏಕೆಂದರೆ, ಮತ್ತೆ ವಿಶ್ವಕಪ್ 10 ಅಥವಾ 20 ವರ್ಷಗಳವರೆಗೆ ಇಲ್ಲಿಗೆ ಬರುವುದಿಲ್ಲ. ಹೀಗಾಗಿ, ನಾವು ವಿಶ್ವಕಪ್ ಟಿಕೆಟ್ಗಳ ಮಾರಾಟಕ್ಕೆ ಈಗಾಗಲೇ ಪ್ರೋತ್ಸಾಹ ನೀಡಲು ಬಯಸಿದ್ದೇವೆ ಎಂದು ಹ್ಯಾಕ್ಲೆ ತಿಳಿಸಿದ್ದಾರೆ.
ಈ ಗೊಂದಲಗಳೇನೇ ಆದರೂ ಐಸಿಸಿ ಮಾತ್ರ ಇಲ್ಲಿಯವರೆಗೆ ಟೂರ್ನಿ ಮುಂದೂಡುವುದರ ಬಗ್ಗೆ ಯಾವುದೇ ರೀತಿಯ ಪ್ಲಾನ್ ಮಾಡಿಲ್ಲ. ಆಯೋಜನೆಯಂತೆ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದೆ.