ETV Bharat / sports

ಅಂಡರ್​​-19 ಏಷ್ಯಾ ಕಪ್​ಗೆ ಟೀಂ ಇಂಡಿಯಾ ಆಯ್ಕೆ... ಅವಕಾಶ ಗಿಟ್ಟಿಸಿಕೊಂಡ ಕನ್ನಡದ ಪ್ರತಿಭೆ!

author img

By

Published : Jul 29, 2019, 11:36 PM IST

ಅಂಡರ್​​​​-19 ಏಷ್ಯಾ ಕಪ್​ಗೆ ಟೀಂ ಇಂಡಿಯಾ ಆಯ್ಕೆ ಆಗಿದ್ದು, 15 ಸದಸ್ಯರನ್ನೊಳಗೊಂಡ ತಂಡದಲ್ಲಿ ರಾಯಚೂರಿನ ವೇಗದ ಬೌಲರ್​ ವಿದ್ಯಾಧರ್​ ಪಾಟೀಲ್​ ಅವಕಾಶ ಪಡೆದುಕೊಂಡಿದ್ದಾರೆ.

ಅಂಡರ್​​-19 ಏಷ್ಯಾ ಕಪ್​ಗೆ ಟೀಂ ಇಂಡಿಯಾ ಆಯ್ಕೆ

ನವದೆಹಲಿ: ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್​ಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಇಂಗ್ಲೆಂಡ್​​ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿರುವ ಕನ್ನಡದ ಪ್ರತಿಭೆಯೊಂದು ಅವಕಾಶ ಪಡೆದುಕೊಂಡಿದೆ.

ಜೂನಿಯರ್​ ಸೆಲೆಕ್ಷನ್​ ಕಮಿಟಿ ಅಂಡರ್​​-19 ತಂಡವನ್ನ ಪ್ರಕಟಿಸಿದ್ದು, ವಿಕೆಟ್​ ಕೀಪರ್,​ ಬ್ಯಾಟ್ಸ್​​ಮನ್​ ಆಗಿರುವ ಧ್ರುವ್​ ಚಂದ್​​ ಜುರೆಲ್​ ತಂಡವನ್ನ ಮುನ್ನಡೆಸಲಿದ್ದಾರೆ. ಇನ್ನು ಸದ್ಯ ಅಂಡರ್​​-19 ತಂಡದ ಕ್ಯಾಪ್ಟನ್​​ ಪ್ರಿಯಾಂ ಗರ್ಗ್​​ ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ತ್ರಿಕೋನ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಿದ್ದಾರೆ.

Dhruv Chand Jurel
ಧ್ರುವ್​ ಚಂದ್​​ ಜುರೆಲ್​

ಆಯ್ಕೆಯಾಗಿರುವ ತಂಡದಲ್ಲಿ ಅನೇಕ ಬದಲಾವಣೆ ಮಾಡಲಾಗಿದ್ದು, ಇಂಗ್ಲೆಂಡ್​ ಹಾಗೂ ಬಾಂಗ್ಲಾದೇಶದೊಂದಿಗೆ ತ್ರಿಕೋನ ಸರಣಿಯಲ್ಲಿ ಭಾಗಿಯಾಗಿರುವ ಪ್ರಿಯಾಂ ಗರ್ಗ್, ಶುಭಾಂಗ್ ಹೆಗ್ಡೆ, ಯಶಸ್ವಿ ಜೈಸ್ವಾಲ್, ಪ್ರಜ್ಞೇಶ್ ಕಾನ್ಪಿಲೆವಾರ್, ಕಾರ್ತಿಕ್ ತ್ಯಾಗಿ, ಪ್ರಭಾತ್ ಮೌರ್ಯ, ರವಿ ಬಿಷ್ಣೋಯ್, ಸಮೀರ್ ರಿಜ್ವಿ ಮತ್ತು ದಿವ್ಯಾನ್ಶ್ ಸಕ್ಸೇನಾ ತಂಡದಲ್ಲಿ ಚಾನ್ಸ್​ ಪಡೆದುಕೊಂಡಿಲ್ಲ.

ಆದರೆ ರಾಯಚೂರಿನ ವೇಗದ ಬೌಲರ್​​ ವಿದ್ಯಾಧರ್​ ಪಾಟೀಲ್ ಅಂಡರ್​​-19 ತಂಡದಲ್ಲಿ ಚಾನ್ಸ್​ ಪಡೆದುಕೊಂಡಿದ್ದು, ಇಂಗ್ಲೆಂಡ್​ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಎರಡು ವಿಕೆಟ್​ ಪಡೆದುಕೊಂಡು ಮಿಂಚಿದ್ದರು. ಅಂಡರ್​​​-19 ಏಷ್ಯಾಕಪ್​​​ ಸೆಪ್ಟೆಂಬರ್​​ 3ರಿಂದ 15ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ.

Vidyadhar Patil
ವೇಗದ ಬೌಲರ್​ ವಿದ್ಯಾಧರ್​ ಪಾಟೀಲ್​

ತಂಡ ಇಂತಿದೆ: ಧ್ರುವ್ ಚಂದ್ ಜುರೆಲ್ (ಕ್ಯಾಪ್ಟನ್/ವಿ,ಕೀ), ಸುವೇದ್ ಪಾರ್ಕರ್, ಠಾಕೂರ್ ತಿಲಕ್ ವರ್ಮಾ, ನೆಹಲ್ ವಢೇರ್​​, ಅರ್ಜುನ್ ಆಜಾದ್, ಶಶ್ವತ್ ರಾವತ್, ವರುಣ್ ಲವಾಂಡೆ, ಸಲೀಲ್ ಅರೋರಾ, ಕರಣ್ ಲಾಲ್, ಅಥರ್ವ ಅಂಕೋಲೆಕರ್, ಪಂಕಜ್ ಯಾದವ್, ಆಕಾಶ್ ಸಿಂಗ್,ಶುಶಾಂತ್​​ ಮಿಶ್ರಾ, ಪೂರ್ಣಾಂಕ್ ತ್ಯಾಗಿ, ವಿದ್ಯಾಧರ್ ಪಾಟೀಲ್.

Intro:Body:

ಅಂಡರ್​​-19 ಏಷ್ಯಾ ಕಪ್​ಗೆ ಟೀಂ ಇಂಡಿಯಾ ಆಯ್ಕೆ... ಅವಕಾಶ ಗಿಟ್ಟಿಸಿಕೊಂಡ ಕನ್ನಡದ ಪ್ರತಿಭೆ! 

ನವದೆಹಲಿ: ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್​ಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಇಂಗ್ಲೆಂಡ್​​ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿರುವ ಕನ್ನಡದ ಪ್ರತಿಭೆಯೊಂದು ಅವಕಾಶ ಪಡೆದುಕೊಂಡಿದೆ. 

ಜೂನಿಯರ್​ ಸೆಲೆಕ್ಷನ್​ ಕಮೀಟಿ ಅಂಡರ್​​-19 ತಂಡವನ್ನ ಪ್ರಕಟಿಸಿದ್ದು, ವಿಕೆಟ್​ ಕೀಪರ್​ ಬ್ಯಾಟ್ಸ್​​ಮನ್​ ಆಗಿರುವ ಧ್ರುವ್​ ಚಂದ್​​ ಜುರೆಲ್​ ತಂಡವನ್ನ ಮುನ್ನಡೆಸಲಿದ್ದಾರೆ. ಇನ್ನು ಸದ್ಯ ಅಂಡರ್​​-19 ತಂಡದ ಕ್ಯಾಪ್ಟನ್​​ ಪ್ರಿಯಾಂ ಗರ್ಗ್​​ ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ತ್ರಿಕೋನ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಿದ್ದಾರೆ. 

ಆಯ್ಕೆಯಾಗಿರುವ ತಂಡದಲ್ಲಿ ಅನೇಕ ಬದಲಾವಣೆ ಮಾಡಲಾಗಿದ್ದು, ಇಂಗ್ಲೆಂಡ್​ ಹಾಗೂ ಬಾಂಗ್ಲಾದೇಶದೊಂದಿಗೆ ತ್ರಿಕೋನ ಸರಣಿಯಲ್ಲಿ ಭಾಗಿಯಾಗಿರುವ  ಪ್ರಿಯಾಂ ಗರ್ಗ್, ಶುಭಾಂಗ್ ಹೆಗ್ಡೆ, ಯಶಸ್ವಿ ಜೈಸ್ವಾಲ್, ಪ್ರಜ್ಞೇಶ್ ಕಾನ್ಪಿಲೆವಾರ್, ಕಾರ್ತಿಕ್ ತ್ಯಾಗಿ, ಪ್ರಭಾತ್ ಮೌರ್ಯ, ರವಿ ಬಿಷ್ಣೋಯ್, ಸಮೀರ್ ರಿಜ್ವಿ ಮತ್ತು ದಿವ್ಯಾನ್ಶ್ ಸಕ್ಸೇನಾ ತಂಡದಲ್ಲಿ ಚಾನ್ಸ್​ ಪಡೆದುಕೊಂಡಿಲ್ಲ. 

ಆದರೆ ರಾಯಚೂರಿನ ವೇಗದ ಬೌಲರ್​​ ವಿದ್ಯಾಧರ್​ ಪಾಟೀಲ್ ಅಂಡರ್​​-19 ತಂಡದಲ್ಲಿ ಚಾನ್ಸ್​ ಪಡೆದುಕೊಂಡಿದ್ದು, ಇಂಗ್ಲೆಂಡ್​ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಎರಡು ವಿಕೆಟ್​ ಪಡೆದುಕೊಂಡು ಮಿಂಚಿದ್ದರು. ಅಂಡರ್​​​-19 ಏಷ್ಯಾಕಪ್​​​ ಸೆಪ್ಟೆಂಬರ್​​ 3ರಿಂದ 15ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ. 

ತಂಡ ಇಂತಿದೆ: ಧ್ರುವ್ ಚಂದ್ ಜುರೆಲ್ (ಕ್ಯಾಪ್ಟನ್/ವಿ,ಕೀ), ಸುವೇದ್ ಪಾರ್ಕರ್, ಠಾಕೂರ್ ತಿಲಕ್ ವರ್ಮಾ, ನೆಹಲ್ ವಢೇರ್​​, ಅರ್ಜುನ್ ಆಜಾದ್, ಶಶ್ವತ್ ರಾವತ್, ವರುಣ್ ಲವಾಂಡೆ, ಸಲೀಲ್ ಅರೋರಾ, ಕರಣ್ ಲಾಲ್, ಅಥರ್ವ ಅಂಕೋಲೆಕರ್, ಪಂಕಜ್ ಯಾದವ್, ಆಕಾಶ್ ಸಿಂಗ್,ಶುಶಾಂತ್​​ ಮಿಶ್ರಾ, ಪೂರ್ಣಾಂಕ್ ತ್ಯಾಗಿ, ವಿದ್ಯಾಧರ್ ಪಾಟೀಲ್

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.