ETV Bharat / sports

ತಾಹೀರ್​​​​ ಸಂಭ್ರಮದ ಓಟ ಇಂದೇ ಕೊನೆ... ಭಾವನಾತ್ಮಕ ಸಂದೇಶ ಕೊಟ್ಟ ಪರಾಶಕ್ತಿ ಎಕ್ಸ್​ಪ್ರೆಸ್​​​​

ಇಂದು ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧ ತನ್ನ ಕೊನೆಯ ಲೀಗ್​ ಪಂದ್ಯವಾಡುತ್ತಿದ್ದು, ಇದು ಇಮ್ರಾನ್​ ತಾಹೀರ್​ಗೂ ಕೂಡ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.

2019 World Cup
author img

By

Published : Jul 6, 2019, 9:01 PM IST

ಮ್ಯಾಂಚೆಸ್ಟರ್​: ಪಾಕಿಸ್ತಾನದಲ್ಲಿ ಜನಿಸಿ ದಕ್ಷಿಣ ಆಫ್ರಿಕಾ ಪರ ಕ್ರಿಕೆಟ್​ ಆಡುತ್ತಿರುವ ಇಮ್ರಾನ್​ ತಾಹೀರ್​ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಲಿದ್ದಾರೆ.

ಇಂದು ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧ ತನ್ನ ಕೊನೆಯ ಲೀಗ್​ ಪಂದ್ಯವಾಡುತ್ತಿದ್ದು, ಇದು ಇಮ್ರಾನ್​ ತಾಹೀರ್​ರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.

2011ರ ವಿಶ್ವಕಪ್​ನಲ್ಲಿ ವಿಂಡೀಸ್​ ವಿರುದ್ಧ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ತಾಹೀರ್​ ಅದೇ ಪಂದ್ಯದಲ್ಲಿ 4 ವಿಕೆಟ್​ ಪಡೆದು ಮಿಂಚಿದ್ದರು. 106 ಏಕದಿನ ಪಂದ್ಯಗಳಲ್ಲಿ ಹರಿಣಗಳನ್ನು ಪ್ರತಿನಿಧಿಸಿರುವ ಅವರು 172 ವಿಕೆಟ್​ ಕಬಳಿಸಿದ್ದಾರೆ. 45 ರನ್​ ನೀಡಿ 7 ವಿಕೆಟ್​ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್​ ಪ್ರದರ್ಶನವಾಗಿದೆ.

  • Quite an emotional moment that I will be stepping on to the field one last time for an odi for @OfficialCSA wholeheartedly thanking everyone who stood with me during my entire career and special thanks for @OfficialCSA to make my dream a reality.Will give it all I have tomm

    — Imran Tahir (@ImranTahirSA) July 5, 2019 " class="align-text-top noRightClick twitterSection" data=" ">

ನಾನು ಇಂದು ಕೊನೆಯ ಬಾರಿಗೆ ಏಕದಿನ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುತ್ತಿರುವೆ. ಈ ವೇಳೆ ನನ್ನ ವೃತ್ತಿ ಜೀವನದ ಅಂತ್ಯದವರೆಗೂ ನನ್ನ ಜೊತೆಯಾಗಿ ನಿಂತ ತಂಡಕ್ಕೆ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಗೆ ನನ್ನ ಧನ್ಯವಾದ ಅರ್ಪಿಸುತ್ತಿದ್ದೇನೆ. ಅದರಲ್ಲೂ ನನ್ನ ಕ್ರಿಕೆಟ್​ ಕನಸನ್ನು ನನಸು ಮಾಡಿದ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಗೆ ವಿಶೇಷ ಧನ್ಯವಾದ ಅರ್ಪಿಸುತ್ತಿದ್ದೇನೆಂದು ತಾಹೀರ್​ ಟ್ವೀಟ್​ ಮಾಡಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ತಾಹೀರ್​ 10 ವಿಕೆಟ್​ ಪಡೆದಿದ್ದಾರೆ. ಎಲ್ಲಾ ವಿಶ್ವಕಪ್​ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ದ.ಆಫ್ರಿಕಾ ಎಂಟನೇ ಸ್ಥಾನದಲ್ಲಿದೆ. 8 ಪಂದ್ಯಗಳಲ್ಲಿ 5 ಸೋಲು ಹಾಗೂ ಕೇವಲ 2 ಗೆಲುವು ಮಾತ್ರ ಕಂಡಿರುವ ಆಫ್ರಿಕನ್ನರು ಈ ವಿಶ್ವಕಪ್​ನಲ್ಲಿ​ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.