ETV Bharat / sports

ವಿಶ್ವಕಪ್​ನಲ್ಲಿ ಮಲಿಂಗಾರಿಂದ 'ವೇಗದ ಅರ್ಧಶತಕ' ದಾಖಲೆ!

author img

By

Published : Jun 22, 2019, 5:37 PM IST

ಇಂಗ್ಲೆಂಡ್​ ವಿರುದ್ಧ ಅದ್ಭುತ ಪ್ರದರ್ಶನ ತೋರಿ 4 ವಿಕೆಟ್​ ಪಡೆದಿದ್ದ ಮಲಿಂಗಾ ವಿಶ್ವಕಪ್​ ಇತಿಹಾಸದಲ್ಲಿ ವೇಗವಾಗಿ 50 ವಿಕೆಟ್​ ಪಡೆದ ಬೌಲರ್​ ಹಾಗೂ ಗರಿಷ್ಠ ವಿಕೆಟ್​ ಪಡೆದ 4ನೇ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

wc

ಲೀಡ್ಸ್​: ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡ ಎನ್ನಲಾಗುತ್ತಿರುವ ಅತಿಥೇಯ ಇಂಗ್ಲೆಂಡ್​ ತಂಡವನ್ನು ಸೋಲಿಸಲು ಲಂಕಾ ತಂಡಕ್ಕೆ ನೆರವಾದ ಲಸಿತ್​ ಮಲಿಂಗಾ ವಿಶ್ವಕಪ್​ನಲ್ಲಿ ವೇಗವಾಗಿ 50 ವಿಕೆಟ್​ ಪಡೆದ ದಾಖಲೆ ಬರೆದಿದ್ದಾರೆ.

ಶುಕ್ರವಾರ ಲೀಡ್ಸ್​ನಲ್ಲಿ ಕೇವಲ 233 ರನ್​ ಟಾರ್ಗೆಟ್​ ನೀಡಿ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು 212 ರನ್​ಗಳಿಗೆ ಆಲೌಟ್​ ಮಾಡುವ ಮೂಲಕ 20 ರನ್​ಗಳಿಂದ ಜಯ ಸಾಧಿಸಿತ್ತು. ಕಡಿಮೆ ಗುರಿ ನೀಡಿದ್ದ ಲಂಕಾ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗಿತ್ತು. ಆದರೆ ಯಾರ್ಕರ್​ ಕಿಂಗ್​ ಮಲಿಂಗಾ ಇಂಗ್ಲೆಂಡ್​ ತಂಡದ ಪ್ರಮುಖ 4 ವಿಕೆಟ್ ಕಬಳಿಸಿ​ 20 ರನ್​ಗಳ ಜಯಕ್ಕೆ ಕಾರಣರಾಗಿದ್ದರು.

ಈ ಪಂದ್ಯಕ್ಕೂ ಮುನ್ನ 25 ಇನ್ನಿಂಗ್ಸ್‌ನಿಂದ 47 ವಿಕೆಟ್​ ಪಡೆದಿದ್ದ ಮಲಿಂಗಾ ತಮ್ಮ 28ನೇ ಪಂದ್ಯದಲ್ಲಿ 50ನೇ ವಿಕೆಟ್​ ಪಡೆದು ವಿಶ್ವಕಪ್​ ಇತಿಹಾಸದಲ್ಲಿ ವೇಗವಾಗಿ 50 ವಿಕೆಟ್​ ಪಡೆದ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ಸಾಧಕರ ಪಟ್ಟಿಯಲ್ಲಿ4ನೇ ಸ್ಥಾನಕ್ಕೇರಿದರು.

ಮಲಿಂಗಾ ಅವರಿಗೂ ಮುನ್ನ ಆಸ್ಟ್ರೇಲಿಯಾದ ಮೆಕ್​ಗ್ರಾತ್​, ಪಾಕಿಸ್ತಾನದ ವಾಸಿಂ ಅಕ್ರಂ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್​ ವಿಶ್ವಕಪ್​ನಲ್ಲಿ 50 ವಿಕೆಟ್​ ಪಡೆದಿದ್ದಾರೆ.

ವಿಶ್ವಕಪ್​ನಲ್ಲಿ ವೇಗವಾಗಿ 50 ವಿಕೆಟ್​ ಪಡೆದವರು:

ಲಸಿತ್​ ಮಲಿಂಗಾ (25 ಇನ್ನಿಂಗ್ಸ್​)
ಗ್ಲೇನ್​ ಮೆಕ್​ಗ್ರಾತ್ ​(30)
ಮುತ್ತಯ್ಯ ಮುರಳೀಧರನ್ ​(30)
ವಾಸೀಂ ಅಕ್ರಂ​(33)

ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್ ಪಡೆದವರು

ಗ್ಲೇನ್​ ಮೆಕ್​ಗ್ರಾತ್​ (71)
ಮುತ್ತಯ್ಯ ಮುರಳಿಧರನ್ ​(68)
ವಾಸೀಂ ಅಕ್ರಂ ​(55)
ಲಸಿತ್​ ಮಲಿಂಗಾ(50)
ಚಮಿಂದಾ ವಾಸ್​ (49)
ಜಾವಗಲ್ ಶ್ರೀನಾಥ್​/ಜಹೀರ್​ ಖಾನ್​ (44)

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.