ETV Bharat / sports

ವಿಶ್ವಕಪ್‌ ಎತ್ತಿ ಹಿಡಿದು ಮುತ್ತಿಕ್ಕಿದ ಆ ಕ್ಷಣ ನನಗೀಗಲೂ ರೋಮಾಂಚನಕಾರಿ: ಸಚಿನ್​ ತೆಂಡೂಲ್ಕರ್​ - MS dhoni

2011 ರ ವಿಶ್ವಕಪ್​ ಫೈನಲ್​ ಕ್ಷಣವನ್ನು ನೆನೆದರೆ ಈಗಲೂ ನನಗೆ ರೋಮಾಂಚನಕಾರಿ ಅನುಭವವಾಗುತ್ತದೆ ಎಂದು ಕ್ರಿಕೆಟ್​ ದೇವರು ಖ್ಯಾತಿಯ ಸಚಿನ್​ ತೆಂಡೂಲ್ಕರ್‌ ಹೇಳಿದ್ದಾರೆ.

2011 World Cup final
2011ರ ವಿಶ್ವಕಪ್​
author img

By

Published : Feb 13, 2020, 5:15 PM IST

ಮುಂಬೈ: 2011ರ ವಿಶ್ವಕಪ್​ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ವಿಶ್ವಕಪ್‌ಗೆ ಮುತ್ತಿಕ್ಕಿದ ಆ ಕ್ಷಣ ಈಗಲೂ ನನಗೆ ರೋಮಾಂಚನದ ಅನುಭವ ತರಿಸುತ್ತದೆ ಎಂದು ಭಾರತದ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ತಿಳಿಸಿದ್ದಾರೆ.

2011ರಲ್ಲಿ ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಭಾರತ ತಂಡ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಎತ್ತಿ ಹಿಡಿದಿತ್ತು. ಬರೋಬ್ಬರಿ 5 ವಿಶ್ವಕಪ್​ ಆಡಿದ್ದ ಸಚಿನ್​ 6ನೇ ವಿಶ್ವಕಪ್​ನಲ್ಲಿ ಚೊಚ್ಚಲ ವಿಶ್ವಕಪ್ ಕನಸನ್ನು ನನಸಾಗಿಸಿಕೊಂಡಿದ್ದರು. ಪಂದ್ಯದ ನಂತರ ಭಾರತದ ಆಟಗಾರರೆಲ್ಲರೂ ವಾಂಖೆಡೆ ಸುತ್ತ ಸಚಿನ್​ ಅವರನ್ನು ಹೆಗಲ ಮೇಲೆ ಹೊತ್ತು ನಡೆದಿದ್ದ ಆ ಕ್ಷಣ ಇಂದಿಗೂ ಭಾರತ ಕ್ರಿಕೆಟ್​ ಕಂಡ ಸರ್ವಶ್ರೇಷ್ಠ ಕ್ಷಣ ಆಗಿದೆ.

ಆ ಮದುರ ಕ್ಷಣವನ್ನು "ರಾಷ್ಟ್ರವನ್ನೇ ಹೆಗಲ ಮೇಲೆ ಹೊತ್ತ ಕ್ಷಣ" ಎಂದು ಹೆಸರಿಸಲಾಗಿದ್ದು, ಲೌರೆಸ್​ನ 2000 ದಿಂದ 2020ರ ವರೆಗಿನ ಕ್ರೀಡಾ ಕ್ಷೇತ್ರದ ಅತ್ಯುತ್ತಮ ಕ್ಷಣ ಪ್ರಶಸ್ತಿಗಾಗಿ ನಾಮ ನಿರ್ದೇಶನವಾಗಿದೆ.

  • Yuvi, this moment is for #TeamIndia and every Indian around the world.
    The 2011 @cricketworldcup win is etched in my mind like it just happened yesterday. Still get goosebumps thinking about that night.

    — Sachin Tendulkar (@sachin_rt) February 12, 2020 " class="align-text-top noRightClick twitterSection" data=" ">

ಈ ಪ್ರಶಸ್ತಿ ಸಚಿನ್​ ಬರಲು ಮತ ನೀಡುವಂತೆ ಭಾರತ ತಂಡದ ನಾಯಕ ಕೊಹ್ಲಿ, ಯುವರಾಜ್​ ಸಿಂಗ್​ ಭಾರತೀಯ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ತೆಂಡೂಲ್ಕರ್​, ಯುವಿ, ಈ ಕ್ಷಣ ಭಾರತ ತಂಡ ಹಾಗೂ ವಿಶ್ವದಾದ್ಯಂತ ಇರುವ ಭಾರತೀಯರದ್ದಾಗಿದೆ. 2011 ವಿಶ್ವಕಪ್ ಗೆಲುವು ನನಗೆ ನಿನ್ನೆ ನಡೆದಂತೆ ಭಾಸವಾಗುತ್ತಿದೆ. ಆ ರಾತ್ರಿಯ ಕ್ಷಣವನ್ನು ನೆನೆದಾಗ ಈಗಲೂ ರೋಮಾಂಚನವಾಗುತ್ತದೆ ಎಂದಿದ್ದಾರೆ.

ಲೌರೆಸ್ ಸ್ಪೋ ರ್ಟ್ಸ್​ ಸಂಸ್ಥೆಯು 2000-2020ರ ನಡುವಿನ ಕ್ರೀಡಾ ಕ್ಷಣ ಪ್ರಶಸ್ತಿಗಾಗಿ 20 ಸನ್ನಿವೇಶಗಳನ್ನು ಆಯ್ಕೆ ಮಾಡಿತ್ತು. ಇದೀಗ ಆ ಸಂಖ್ಯೆ 5ಕ್ಕೆ ಬಂದು ನಿಂತಿದೆ. ಫೆ.16ರವರೆಗೆ ಅಭಿಮಾನಿಗಳು ಪ್ರಶಸ್ತಿಗೆ ವೋಟ್ ಮಾಡುವ ಅವಕಾಶ ಹೊಂದಿದ್ದು, ಫೆ. 17 ರಂದು ಬರ್ಲಿನ್​ನಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಲಿದೆ.

  • It is definitely a moment to remember Virat!
    Glad to have a teammate & friend like you to cherish it with.
    Thank you for your support 🙂

ETV Bharat Logo

Copyright © 2025 Ushodaya Enterprises Pvt. Ltd., All Rights Reserved.