ETV Bharat / sports

ಬರ್ಮಿಗ್​ಹ್ಯಾಮ್​ ಕಾಮನ್​ವೆಲ್ತ್​ ಗೇಮ್ಸ್​ಗೆ ಕ್ರಿಕೆಟ್​ ತಂಡಗಳ ಕನ್ಫರ್ನ್ : ಭಾರತ ಸೇರಿದಂತೆ 8 ದೇಶಗಳಿಂದ ಪೈಪೋಟಿ - 24 ವರ್ಷಗಳ ನಂತರ ಕಾಮನ್​ವೆಲ್ತ್​ ಗೇಮ್ಸ್​ಗೆ ಕ್ರಿಕೆಟ್ ಅರ್ಹತೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ

ಬಹು ಕ್ರೀಡೆಗಳ ಈ ಸ್ಪರ್ಧೆಯಲ್ಲಿ ಕ್ರಿಕೆಟ್​ ಭಾಗವಹಿಸುತ್ತಿರುವುದು ಇದು 2ನೇ ಬಾರಿಯಾಗಿದೆ. 1998ರಲ್ಲಿ ಕೌಲಾಲಂಪುರ​ದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಪುರುಷ ತಂಡಗಳು ಭಾಗವಹಿಸಿದ್ದವು. ಶಾನ್​ ಪೊಲಕ್​ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಸ್ಟೀವ್​ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್​ಗಳಿಂದ ಮಣಿಸಿ ಚಿನ್ನದ ಪದಕ ಪಡೆದಿತ್ತು..

Birmingham Commonwealth Games
ಬರ್ಮಿಗ್​ಹ್ಯಾಮ್​ ಕಾಮನ್​ವೆಲ್ತ್​ ಗೇಮ್ಸ್
author img

By

Published : Feb 1, 2022, 3:34 PM IST

ದುಬೈ : 2022ರ ಕಾಮನ್​ವೆಲ್ತ್​​ ಗೇಮ್ಸ್​ ಅರ್ಹತಾ ಟೂರ್ನಿ ಗೆದ್ದ ಶ್ರೀಲಂಕಾ ತಂಡ 8ನೇ ತಂಡವಾಗಿ ಬಹು ತಂಡಗಳ ಟೂರ್ನಿಗೆ ಅರ್ಹತೆ ಪಡೆದಿದೆ. ಈ ಮೂಲಕ ಕ್ರಿಕೆಟ್​ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ತಂಡಗಳನ್ನು ಖಚಿತಪಡಿಸಿದ ಮೊದಲ ಕ್ರೀಡೆಯಾಗಿದೆ.

ಕಳೆದ ವಾರ ಕೌಲಾಲಂಪುರದಲ್ಲಿ 5 ದೇಶಗಳ ನಡುವೆ ನಡೆದ ಅರ್ಹತಾ ಟೂರ್ನಾಮೆಂಟ್​ನಲ್ಲಿ ಶ್ರೀಲಂಕಾ ಮಹಿಳಾ ತಂಡ ಗೆಲ್ಲುತ್ತಿದ್ದಂತೆ ಟೂರ್ನಿಯಲ್ಲಿ ಭಾಗವಹಿಸಲು ಅನುಮೋದನೆ ಪಡೆದುಕೊಂಡಿದೆ ಎಂದು ಐಸಿಸಿ ಮತ್ತು ಕಾಮನ್​ವೆಲ್ತ್​ ಫೆಡೆರೇಶನ್​ 8 ತಂಡಗಳು ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿವೆ ಎಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಕಾಮನ್​ವೆಲ್ತ್​ ಗೇಮ್ಸ್​ಗೆ ಆಸ್ಟ್ರೇಲಿಯಾ, ಬಾರ್ಬಡೊಸ್​, ಇಂಗ್ಲೆಂಡ್​, ಇಂಡಿಯಾ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳು ಈಗಾಗಲೇ ನೇರ ಅರ್ಹತೆ ಪಡೆದಿದ್ದವು.

ಬಹು ಕ್ರೀಡೆಗಳ ಈ ಸ್ಪರ್ಧೆಯಲ್ಲಿ ಕ್ರಿಕೆಟ್​ ಭಾಗವಹಿಸುತ್ತಿರುವುದು ಇದು 2ನೇ ಬಾರಿಯಾಗಿದೆ. 1998ರಲ್ಲಿ ಕೌಲಾಲಂಪುರ​ದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಪುರುಷ ತಂಡಗಳು ಭಾಗವಹಿಸಿದ್ದವು. ಶಾನ್​ ಪೊಲಕ್​ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಸ್ಟೀವ್​ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್​ಗಳಿಂದ ಮಣಿಸಿ ಚಿನ್ನದ ಪದಕ ಪಡೆದಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಐಸಿಸಿ ಹಾಲ್​ ಆಫ್​ ಫೇಮ್​ ಗೌರವಕ್ಕೆ ಪಾತ್ರರಾಗಿರುವ ಭಾರತದ ಸಚಿನ್​ ತೆಂಡೂಲ್ಕರ್​, ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್​, ಶ್ರೀಲಾಂಕದ ಮಹೇಲಾ ಜಯವರ್ಧನೆ ಸೇರಿದಂತೆ ಹಲವು ದಿಗ್ಗಜರು ಕ್ರೀಡಾಕೂಟದ ಭಾಗವಾಗಿದ್ದರು.

ಇದೀಗ ಮಹಿಳಾ ತಂಡ ಬರೋಬ್ಬರಿ 24 ವರ್ಷಗಳ ನಂತರ ಮತ್ತೆ ಕಾಮನ್​ವೆಲ್ತ್​​ ಗೇಮ್ಸ್​ನಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ. ಕ್ರಿಕೆಟ್​ ಆಟವನ್ನು ವಿಶ್ವದಾದ್ಯಂತ ಮತ್ತಷ್ಟು ಪಸರಿಸಲು ಈ ಕ್ರೀಡಾಕೂಟ ಪ್ರಮುಖ ಪಾತ್ರವಹಿಸಲಿದೆ.

8 ತಂಡಗಳನ್ನು ತಲಾ 4 ತಂಡಗಳಾಗಿ ವಿಂಗಡಿಸಲಾಗಿದೆ. ಆಸ್ಟ್ರೇಲಿಯಾ, ಭಾರತ, ಬಾರ್ಬಡೊಸ್​ ಮತ್ತು ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿ ಮತ್ತು ಶ್ರೀಲಂಕಾ,ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್​ ಮಹಿಳಾ ತಂಡಗಳು ಬಿ ಗುಂಪಿನಲ್ಲಿವೆ.

ಇದನ್ನೂ ಓದಿ:ಸೂಪರ್ ಓವರ್‌ನಲ್ಲಿ ದ. ಆಫ್ರಿಕಾ ವಿರುದ್ಧ ವಿಂಡೀಸ್ ವನಿತೆಯರ ಆರ್ಭಟ ; ರೋಚಕ ಪಂದ್ಯಕ್ಕೆ ವಾಂಡರರ್ಸ್ ಸ್ಟೇಡಿಯಂ ಸಾಕ್ಷಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.