ETV Bharat / sports

'ಉದಾರತೆ' ಮೆರೆದ ಪೂರನ್​: ಕೋವಿಡ್ ಹೋರಾಟಕ್ಕೆ IPL ಸಂಬಳದ ಇಷ್ಟೊಂದು ಹಣ ದೇಣಿಗೆ - ಕೋವಿಡ್ ಹೋರಾಟಕ್ಕೆ IPL ಸಂಬಳ

ಮಹಾಮಾರಿ ಕೊರೊನಾ ವೈರಸ್ ಹೋರಾಟದಲ್ಲಿ ಅನೇಕರು ತಮ್ಮ ಕೈಲಾದ ಸಹಾಯ ಮಾಡ್ತಿದ್ದು, ಸದ್ಯ ನಿಕೂಲಸ್ ಪೂರನ್ ಕೂಡ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

Pooran
Pooran
author img

By

Published : Apr 30, 2021, 3:05 PM IST

ನವದೆಹಲಿ: ಡೆಡ್ಲಿ ವೈರಸ್ ಕೋವಿಡ್ ವಿರುದ್ಧ ಭಾರತ ಹೋರಾಟ ನಡೆಸಿದ್ದು, ಇದೀಗ ಎಲ್ಲೆಡೆಯಿಂದ ಸಹಾಯ ಹರಿದು ಬರುತ್ತಿದೆ. ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಈಗಾಗಲೇ ರಷ್ಯಾ, ಅಮೆರಿಕ ಸೇರಿದಂತೆ ಅನೇಕ ದೇಶಗಳಿಂದ ಸಹಾಯಹಸ್ತ ಬರುತ್ತಿದೆ. ಇದರ ಮಧ್ಯೆ ಕೆಲ ಖ್ಯಾತ ಕ್ರಿಡಾಪಟುಗಳು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.

ಈಗಾಗಲೇ ಮಾಸ್ಟರ್ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​, ಬ್ರೆಟ್​ ಲೀ ಹಾಗೂ ಪ್ಯಾಟ್​ ಕಮ್ಮಿನ್ಸ್​ ಕೋವಿಡ್​ ಹೋರಾಟಕ್ಕೆ ಕೈ ಜೋಡಿಸಿ ಧನ ಸಹಾಯ ಮಾಡಿದ್ದಾರೆ. ಇದೀಗ ಕಿಂಗ್ಸ್ ಪಂಜಾಬ್​ ತಂಡದ ಬ್ಯಾಟ್ಸ್​ಮನ್​ ನಿಕೂಲಸ್ ಪೂರನ್ ಕೂಡ ದೇಣಿಗೆ ನೀಡಿದ್ದಾರೆ.

  • Although many other countries are still being affected by the pandemic, the situation in India right now is particularly severe. I will do my part to bring awareness and financial assistance to this dire situation.#PrayForIndia pic.twitter.com/xAnXrwMVTu

    — nicholas pooran #29 (@nicholas_47) April 30, 2021 " class="align-text-top noRightClick twitterSection" data=" ">

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿನ ತಮ್ಮ ಸಂಬಳದ ಒಂದು ಭಾಗ ದೇಣಿಗೆ ನೀಡಲು ಅವರು ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ. ಜತೆಗೆ ಇತರರು ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿರುವ ಪೂರನ್​, ನಿಮ್ಮ ಕೈಯಿಂದ ಆಗುವ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಪೂರನ್​ಗೆ 4.2 ಕೋಟಿ ರೂ. ನೀಡಿ ಖರೀದಿ ಮಾಡಲಾಗಿದೆ.

ಭಾರತದ ಕೋವಿಡ್ ಹೋರಾಟದಲ್ಲಿ ಕೈ ಜೋಡಿಸಿರುವ ರಾಜಸ್ಥಾನ ರಾಯಲ್ಸ್​ 7.5 ಕೋಟಿ ರೂ ದೇಣಿಗೆ ನೀಡಲು ಮುಂದಾಗಿದ್ದು, ಡೆಲ್ಲಿ ಕ್ಯಾಪಿಟಲ್ ಕೂಡ ಸಹಾಯ ಮಾಡುವುದಾಗಿ ಹೇಳಿಕೊಂಡಿದೆ. ಇದೀಗ ಕಿಂಗ್ಸ್ ಪಂಜಾಬ್ ಕೂಡ ಕೋವಿಡ್ ಹೋರಾಟಕ್ಕಾಗಿ ಆಮ್ಲಜನಕ ಸಾಂದ್ರಕ ನೀಡುವುದಾಗಿ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.