ಬಿಗ್ ಬ್ಯಾಷ್ ಟಿ20 ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಆಟಗಾರ ಬಾರಿಸಿದ ಚೆಂಡನ್ನು ಬ್ರಿಸ್ಬೇನ್ ತಂಡದ ಮೈಕಲ್ ನೀಸರ್ ಕ್ಯಾಚ್ ಮಾಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಂಪೈಲ್ ಇದನ್ನು ಸಿಕ್ಸರ್ ಎಂದು ತೀರ್ಪಿತ್ತು ಬಳಿಕ ಥರ್ಡ್ ಅಂಪೈರ್ ಮೊರೆ ಹೋಗಿದ್ದರು. ಆದ್ರೆ ಥರ್ಡ್ ಅಂಪೈರ್ ಇದನ್ನು ಔಟ್ ಎಂದು ತಮ್ಮ ನಿರ್ಧಾರ ವ್ಯಕ್ತಪಡಿಸಿದ್ದರು. ಈಗ ಈ ಕ್ಯಾಚ್ ನೆಟ್ಟಿಗರ ಮನೆಯಲ್ಲಿ ಬಹು ಚರ್ಚೆಯ ವಿಷಯವಾಗಿದೆ.
ಆಗಿದ್ದೇನು?: ಭಾನುವಾರ ನಡೆದ ಪಂದ್ಯದಲ್ಲಿ ಅನಿರೀಕ್ಷಿತ ರೀತಿಯಲ್ಲಿ ಸಿಡ್ನಿ ಸಿಕ್ಸರ್ಸ್ ಆಟಗಾರ ಜೋರ್ಡಾನ್ ಸಿಲ್ಕ್ ಹೊಡೆದ ಚೆಂಡನ್ನು ಬ್ರಿಸ್ಬೇನ್ ಹೀಟ್ ಆಟಗಾರ ನೀಸರ್ ಹಿಡಿದರು. ಈ ಕ್ಯಾಚ್ ನಂತರ ನೀಸರ್ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ದಾಟಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಚೆಂಡನ್ನು ಗಾಳಿಯಲ್ಲಿ ಎಸೆದಿದ್ದರು. ಚೆಂಡು ಸಹ ಬೌಂಡರಿ ಲೈನ್ ದಾಟಿತ್ತು. ಈ ಸಂದರ್ಭದಲ್ಲಿ ಬೌಂಡರಿ ಲೈನ್ ಆಚೆಯಿದ್ದ ನೀಸರ್ ಮತ್ತೆ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದು ಮೈದಾನದೊಳಗೆ ಗಾಳಿಯಲ್ಲಿ ಎಸೆದರು. ಬಳಿಕ ಬೌಂಡರಿ ಲೈನ್ ಸರಿದು ಬಂದ ನೀಸರ್ ಗಾಳಿಯಲ್ಲಿದ್ದ ಚೆಂಡು ಹಿಡಿದುಕೊಂಡರು.
ಇದು ಔಟೋ ಅಥವಾ ಸಿಕ್ಸರೋ ಅಂತ ಅಂಪೈರ್ ಕೂಡಾ ಗೊಂದಲಕ್ಕೀಡಾಗಿದ್ದರು. ಹೀಗಾಗಿ ಅಂಪೈರ್ ತಕ್ಷಣಕ್ಕೆ ಸಿಕ್ಸರ್ ಎಂದು ತಮ್ಮ ನಿರ್ಣಯ ನೀಡಿ ಥರ್ಡ್ ಅಂಪೈರ್ಗೆ ಮೊರೆ ಹೋಗಿದ್ದಾರೆ. ಬಹಳ ಸಮಯದವರೆಗೂ ಪರಿಶೀಲನೆ ನಡೆದು ಮೂರನೇ ಅಂಪೈರ್ ಇದನ್ನು ಔಟ್ ಎಂದು ಹೇಳಿದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲರಿಗೂ ಅರೆಕ್ಷಣ ಅಚ್ಚರಿ!.
-
👏 Quite a few questions have emerged following this outstanding bit of fielding in the @BBL.@Gmaxi_32 provides expert commentary as to why this indeed was Out.
— Marylebone Cricket Club (@MCCOfficial) January 1, 2023 " class="align-text-top noRightClick twitterSection" data="
See here for the Law: https://t.co/A1dNCFU9vo#MCCLawspic.twitter.com/OppIx2ufa6
">👏 Quite a few questions have emerged following this outstanding bit of fielding in the @BBL.@Gmaxi_32 provides expert commentary as to why this indeed was Out.
— Marylebone Cricket Club (@MCCOfficial) January 1, 2023
See here for the Law: https://t.co/A1dNCFU9vo#MCCLawspic.twitter.com/OppIx2ufa6👏 Quite a few questions have emerged following this outstanding bit of fielding in the @BBL.@Gmaxi_32 provides expert commentary as to why this indeed was Out.
— Marylebone Cricket Club (@MCCOfficial) January 1, 2023
See here for the Law: https://t.co/A1dNCFU9vo#MCCLawspic.twitter.com/OppIx2ufa6
ಥರ್ಡ್ ಅಂಪೈರ್ ನೀಡಿದ್ದ ನಿರ್ಣಯ ಸರಿಯಾಗಿದೆ ಎಂದು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ ಸಮರ್ಥಿಸಿಕೊಂಡಿದೆ. ಆದರೆ, ನೀಸರ್ ಕ್ಯಾಚ್ ಅನ್ನು ಥರ್ಡ್ ಅಂಪೈರ್ ಹೇಗೆ ಔಟ್ ಕೊಟ್ಟರು? ಎಂಬ ಚರ್ಚೆ ನಡೆಯುತ್ತಿದೆ. ಇಂತಹ ಕ್ಯಾಚ್‌ಗಳ ವಿಚಾರದಲ್ಲಿ ನಿಯಮಗಳ ಬದಲಾವಣೆ ಆಗಬೇಕು ಅನ್ನೋದು ನೆಟ್ಟಿಗರು ಅಂಬೋಣ.
ನಿನ್ನೆ ನಡೆದ ಪಂದ್ಯವೂ ಅತ್ಯಂತ ರೋಚಕತೆಯಿಂದ ಕೂಡಿತ್ತು. ಮೊದಲು ಬ್ಯಾಟ್ ಬೀಸಿದ ಬ್ರಿಸ್ಬೇನ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 224 ರನ್ಗಳನ್ನು ಕಲೆಹಾಕಿತ್ತು. ಗುರಿ ಬೆನ್ನತ್ತಿದ್ದ ಸಿಡ್ನಿ ಸಿಕ್ಸರ್ 20 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 209 ರನ್ಗಳನ್ನು ಮಾತ್ರ ಕಲೆ ಹಾಕಲು ಶಕ್ತವಾಯಿತು. ಹೀಗಾಗಿ ಸಿಡ್ನಿ ಸಿಕ್ಸರ್ಸ್ ವಿರುದ್ಧ ಬ್ರಿಸ್ಬೇನ್ 15 ರನ್ಗಳ ಭರ್ಜರಿ ಜಯ ಸಾಧಿಸಿತು.
ಪಾಯಿಂಟ್ ಟೇಬಲ್ನಲ್ಲಿ ಸಿಡ್ನಿ ಸಿಕ್ಸರ್ಸ್ 7 ಪಂದ್ಯಗಳಲ್ಲಿ ಮೂರು ಸೋಲನ್ನಪ್ಪಿದ್ದು, ನಾಲ್ಕು ಜಯ ಗಳಿಸಿ ಮೂರನೇ ಸ್ಥಾನದಲ್ಲಿದೆ. ಬ್ರಿಸ್ಬೇನ್ ಹೀಟ್ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಸೋತು ಎರಡು ಮಾತ್ರ ಗೆದ್ದಿದ್ದು, 7 ಸ್ಥಾನದಲ್ಲಿದೆ.
ಇದನ್ನೂ ಓದಿ: ಪಂತ್ ಪ್ರಾಣ ರಕ್ಷಿಸಿದ ಬಸ್ ಚಾಲಕ, ನಿರ್ವಾಹಕನನ್ನು ಗೌರವಿಸಲಿದೆ ಉತ್ತರಾಖಂಡ್ ಸರ್ಕಾರ