ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ 2022ರ ಮಹಿಳಾ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಆಸ್ಟ್ರೇಲಿಯಾ ತಂಡ ಒಂದೂ ಸೋಲನುಭವಿಸದೇ ಫೈನಲ್ ಪ್ರವೇಶಿಸಿದರೆ, ಭಾರತ ತಂಡ ಆಸ್ಟ್ರೇಲಿಯಾ ಎದುರು ಮಾತ್ರ ಸೋಲನುಭವಿಸಿದೆ.
ಟಾಸ್ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿದೆ. ಅಲಿಸ್ಸಾ ಹೀಲಿ(7) ಮೂರನೇ ಓವರ್ನಲ್ಲಿ ರೇಣುಕಾ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ನಂತರ ಆರಂಭಿಕ ಆಟಗಾರ್ತಿ ಬೆತ್ ಮೂನಿಯನ್ನು ಕೂಡಿಕೊಂಡ ನಾಯಕಿ ಮೆಗ್ ಲ್ಯಾನಿಂಗ್ ಉತ್ತಮ ಜೊತೆಯಾಟ ಆಡಿದರು. 50 ರನ್ಗಳ ಜೊತೆಯಾಟ ನೀಡಿದರು. ತಂಡದ ಮೊತ್ತ 83 ಆಗಿದ್ದಾಗ ರನ್ ಕದಿಯಲು ಹೋದ ಮೆಗ್ ಲ್ಯಾನಿಂಗ್ ರನ್ ಔಟ್ಗೆ ಬಲಿಯಾದರು.
ಮಧ್ಯಮ ಕ್ರಮಾಂಕ ಕುಸಿತ : ಬೆತ್ ಮೂನಿಗೆ ನಂತರ ಬಂದ ಯಾರು ಉತ್ತಮ ಸಾಥ್ ನೀಡಲಿಲ್ಲ. ತಹ್ಲಿಯಾ ಮೆಕ್‌ಗ್ರಾತ್(2), ಆಶ್ಲೀ ಗಾರ್ಡ್ನರ್(25), ಗ್ರೇಸ್ ಹ್ಯಾರಿಸ್ (2), ಅಲಾನಾ ಕಿಂಗ್( 1)
ಭಾರತದ ಪರ ರೆಣುಕಾ ಸಿಂಗ್ ಮತ್ತು ಸ್ನೇಹ ರಾಣ ತಲಾ ಎರಡು ವಿಕೇಟ್ ಪಡೆದು ಮಿಂಚಿದರು. ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ 1 ತಲಾ ವಿಕೆಟ್ ಪಡೆದರು.