ETV Bharat / sports

ಟೆಸ್ಟ್​ ತಂಡದಲ್ಲಿ ಅವಕಾಶ ಕಳೆದುಕೊಂಡ ಪೂಜಾರ: 2024ರ ಕೌಂಟಿಯಲ್ಲಿ ಆಡಲು ಸಹಿ - ವೆಸ್ಟ್​ ಇಂಡೀಸ್​ ಪ್ರವಾಸ

2024ರ ಕೌಂಟಿ ಕ್ರಿಕೆಟ್​ ಆವೃತ್ತಿಯಲ್ಲಿ ಆಡುವುದಾಗಿ ಸಸೆಕ್ಸ್​ ತಂಡಕ್ಕೆ ಭಾರತದ ಅನುಭವಿ ಬ್ಯಾಟರ್​ ಚೇತೇಶ್ವರ ಪೂಜಾರ ಸಹಿ ಮಾಡಿದ್ದಾರೆ.

Cheteshwar Pujara
Cheteshwar Pujara
author img

By ETV Bharat Karnataka Team

Published : Dec 13, 2023, 8:49 PM IST

ಹೋವ್ (ಇಂಗ್ಲೆಂಡ್): ಭಾರತದ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಬ್ಯಾಟರ್ ಚೇತೇಶ್ವರ ಪೂಜಾರ ಮತ್ತೊಮ್ಮೆ 2024ರ ಕೌಂಟಿ ಕ್ರಿಕೆಟ್​ ಋತುವಿನಲ್ಲಿ ಆಡುವುದಾಗಿ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಕ್ಲಬ್ ಸಸೆಕ್ಸ್​ ತಂಡಕ್ಕೆ ಒಪ್ಪಿಗೆ ನೀಡಿದ್ದಾರೆ. ಅನುಭವಿ ಬ್ಯಾಟರ್​ ಪೂಜಾರ ಅವರನ್ನು ಜನವರಿಯನ್ನು ಭಾರತ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಟೆಸ್ಟ್​ಗೂ ಆಯ್ಕೆ ಮಾಡಿಲ್ಲ. ಹೀಗಾಗಿ ದೇಶೀಯ ಕ್ರಿಕೆಟ್​ ಮತ್ತು ವಿದೇಶದ ಕೌಂಟಿ ಆಡಲು ನಿರ್ಧರಿಸಿದಂತಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತ ಆಡಲಿರುವ ಎರಡು ಟೆಸ್ಟ್​ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದಾಗ 100 ಮ್ಯಾಚ್​​ಗಳ ಅನುಭವ ಇರುವ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಅವರನ್ನು ಕೈಬಿಡಲಾಯಿತು. ಇಂಗ್ಲೆಂಡ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಈ ಇಬ್ಬರು ಹಿರಿಯ ಆಟಗಾರರು ವೈಟ್ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ ವೆಸ್ಟ್​ ಇಂಡೀಸ್​ ಪ್ರವಾಸಕ್ಕೂ ಇವರನ್ನು ಕೈಬಿಟ್ಟು ಯುವ ಆಟಗಾರರಿಗೆ ಮಣೆ ಹಾಕಲಾಗಿತ್ತು. ಹಾಗೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಮತ್ತು ರುತುರಾಜ್ ಗಾಯಕ್ವಾಡ್ ಅವರಿಗೆ ಸ್ಥಾನವನ್ನು ಮಾಡಿಕೊಡಲಾಗಿದೆ.

ಮತ್ತೆ ಸಸೆಕ್ಸ್‌ ಸೇರಿದ ಚೇತೇಶ್ವರ: 2022ರಲ್ಲಿ ಮೊದಲ ಬಾರಿಗೆ ಸಹಿ ಮಾಡಿದ ಸಸೆಕ್ಸ್‌ ಕ್ಲಬ್‌ನೊಂದಿಗೆ ಇದು ಅವರ ಮೂರನೇ ನೇರ ಋತುವಾಗಿದೆ. 2024 ರ ಋತುವಿಗೆ ಸಂಬಂಧಿಸಿದಂತೆ, ಅವರು ಕೌಂಟಿ ಚಾಂಪಿಯನ್‌ಶಿಪ್‌ನ ಆರಂಭಿಕ ಏಳು ಪಂದ್ಯಗಳಿಗೆ ಪುಜಾರ ಲಭ್ಯವಿರುತ್ತಾರೆ. ಸಸೆಕ್ಸ್‌ ತಂಡಕ್ಕೆ ಸೇರುವ ಬಗ್ಗೆ ಸಹಿ ಮಾಡಿದ ನಂತರ ಪೂಜಾರ, "ಕಳೆದ ಎರಡು ಸೀಸನ್‌ಗಳಲ್ಲಿ ನಾನು ಹೋವ್‌ನಲ್ಲಿ ನನ್ನ ಸಮಯವನ್ನು ಆನಂದಿಸಿದೆ ಮತ್ತು ಸಸೆಕ್ಸ್ ತಂಡಕ್ಕೆ ಮತ್ತೆ ಮರಳುತ್ತಿರುವುದು ಸಂತೋಷ ತಂದಿದೆ. ನಾನು ತಂಡವನ್ನು ಸೇರಲು ಮತ್ತು ಅದರ ಯಶಸ್ಸಿಗೆ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದರು.

  • We are delighted to announce the re-signing of India Test batter, Cheteshwar Pujara and Australian batter, Daniel Hughes as overseas signings for the 2024 season. 🙌 #GOSBTS

    — Sussex Cricket (@SussexCCC) December 13, 2023 " class="align-text-top noRightClick twitterSection" data=" ">

ಕೌಂಟಿಯಲ್ಲಿ ಪೂಜಾರ: ಕೌಂಟಿ ಕ್ರಿಕೆಟ್​ನಲ್ಲಿ ಕಳೆದ ವರ್ಷ ಪೂಜಾರ ಬ್ಯಾಕ್​-ಟು-ಬ್ಯಾಕ್ ಶತಕಗಳ ಇನ್ನಿಂಗ್ಸ್​ ಆಡಿದ್ದರು. ಪೂಜಾರ ಅವರು ಕ್ಲಬ್‌ನೊಂದಿಗೆ ಕಳೆದ ಎರಡ ಆವೃತ್ತಿಯಲ್ಲಿ, 18 ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ 64.24 ರ ಸರಾಸರಿಯಲ್ಲಿ 1,863 ರನ್‌ ಕಲೆಹಾಕಿದ್ದಾರೆ. ಇದರಲ್ಲಿ ಎಂಟು ಶತಕ ಮತ್ತು ಮೂರು ಅರ್ಧ ಶತಕಗಳಿವೆ. ಸಸೆಕ್ಸ್‌ಗೆ ಅವರ ಅತ್ಯುತ್ತಮ ಪ್ರದರ್ಶನ ಪ್ರಥಮ ವರ್ಷ ಬಂದಿತ್ತು. ಪುಜಾರ ಡರ್ಬಿಶೈರ್ ವಿರುದ್ಧ 231 ರನ್​ ಗಳಿಸಿದ್ದರು ಮತ್ತು ಟಾಮ್ ಹೈನ್ಸ್ ಜೊತೆಗೆ 351 ಪಾಲುದಾರಿಕೆ ಹಂಚಿಕೊಂಡಿದ್ದರು.

ಪೂಜಾರ ಸಸೆಕ್ಸ್‌ಗೆ ಹಿಂದಿರುಗಿದ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಕೋಚ್ ಪಾಲ್ ಫಾರ್ಬ್ರೇಸ್, "ಚೇತೇಶ್ವರ ಅವರು ಋತುವಿನ ಮೊದಲ ಎರಡು ತಿಂಗಳುಗಳಲ್ಲಿ ಮತ್ತೆ ಹೋವ್‌ಗೆ ಮರಳುತ್ತಿರುವುದು ನನಗೆ ಸಂತೋಷ ತಂದಿದೆ. ಅವರು ಕೇವಲ ಉತ್ತಮ ಗುಣಮಟ್ಟದ ಆಟಗಾರರಲ್ಲ ಆದರೆ ಉತ್ತಮ ಗುಣಮಟ್ಟದ ವ್ಯಕ್ತಿಯೂ ಹೌದು. ಪಂದ್ಯಗಳಲ್ಲಿನ ಅವರ ಅನುಭವ ನಮ್ಮ ತಂಡಕ್ಕೆ ಅದ್ಭುತ ಆಸ್ತಿಯಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: 9 ವರ್ಷದ ನಂತರ ಭಾರತದಲ್ಲಿ ವನಿತೆಯರ ಟೆಸ್ಟ್​ ಪಂದ್ಯ: ಮೈಸೂರಿನಲ್ಲಿ ನಡೆದ ಪಂದ್ಯದ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.