ETV Bharat / sports

ಕೌಂಟಿ ಚಾಂಪಿಯನ್‌ಶಿಪ್: ಎರಡನೇ ಶತಕ ದಾಖಲಿಸಿದ ಚೇತೇಶ್ವರ ಪೂಜಾರ - ETV Bharath Kannada news

ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರ ಸಸೆಕ್ಸ್ ಮತ್ತು ಗ್ಲೌಸೆಸ್ಟರ್‌ಶೈರ್ ನಡುವಿನ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಶತಕ ದಾಖಲಿಸಿದ್ದಾರೆ.

Cheteshwar Pujara
ಚೇತೇಶ್ವರ ಪೂಜಾರ
author img

By

Published : Apr 29, 2023, 8:01 PM IST

ಬ್ರಿಸ್ಟಲ್ (ಇಂಗ್ಲೆಂಡ್): ಭಾರತದ ಕ್ರಿಕೆಟಿಗ ಚೇತೇಶ್ವರ ಪೂಜಾರ ಅವರು ಶನಿವಾರ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರ 2023 ರಲ್ಲಿ ಸಸೆಕ್ಸ್‌ಗಾಗಿ ತಮ್ಮ ಎರಡನೇ ಟೆಸ್ಟ್ ಶತಕವನ್ನು ಗಳಿಸಿದರು. ಸಸೆಕ್ಸ್ ಮತ್ತು ಗ್ಲೌಸೆಸ್ಟರ್‌ಶೈರ್ ನಡುವಿನ ಟೆಸ್ಟ್ ಪಂದ್ಯದ ಮೂರನೇ ದಿನದಂದು, ಪೂಜಾರ ಮೊದಲ ಇನ್ನಿಂಗ್ಸ್‌ನಲ್ಲಿ 238 ಎಸೆತಗಳಲ್ಲಿ 20 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡ 151 ರನ್ ಗಳಿಸಿದರು.

ಚೇತೇಶ್ವರ ಪೂಜಾರ ಅವರ 151 ರನ್, ಟಾಮ್ ಅಲ್ಸೋಪ್ 67, ಜೇಮ್ಸ್ ಕೋಲ್ಸ್ 74 ಮತ್ತು​ ಆಲಿವರ್ ಕಾರ್ಟರ್ 59 ರನ್​ನ ಸಹಾಯದಿಂದ ಸಸೆಕ್ಸ್‌ 455 ರನ್​ ಗಳಿಸಿ ಡಿಕ್ಲೆರ್​ ಘೋಷಿಸಿತು. ಇದಕ್ಕೂ ಮೊದಲು ಪೂಜಾರ ಮೊದಲ ಇನ್ನಿಂಗ್ಸ್‌ನಲ್ಲಿ ಡರ್ಹಾಮ್ ವಿರುದ್ಧ 163 ಎಸೆತಗಳಲ್ಲಿ 115 ರನ್ ಗಳಿಸಿದ್ದರು. ಅವರ ನಾಕ್ 13 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಕೌಂಟಿ ಕ್ರಿಕೆಟ್‌ನಲ್ಲಿ ಇದು ಅವರ ಏಳನೇ ಶತಕವಾಗಿದೆ. ಅವರು ತಮ್ಮ ಎಲ್ಲಾ ಐವತ್ತು ಪ್ಲಸ್ ಸ್ಕೋರ್‌ಗಳನ್ನು ಶತಕಗಳಾಗಿ ಪರಿವರ್ತಿಸಲು ಸಮರ್ಥರಾಗಿದ್ದಾರೆ.

ಡರ್ಹಾಮ್ ಹಾಕಿದ ಮೊದಲ ಇನ್ನಿಂಗ್ಸ್ 376 ರನ್‌ಗಳಿಗೆ ಉತ್ತರವಾಗಿ ಅವರ ತಂಡವು ಒಟ್ಟು 335 ರನ್‌ಗಳನ್ನು ಗಳಿಸಿಲು ಪುಜಾರ ಅವರ ಇನ್ನಿಂಗ್ಸ್​ ಸಹಕಾರಿಯಾಗಿತ್ತು. ಆ ಪಂದ್ಯದಲ್ಲಿ ಸಸೆಕ್ಸ್ ಎರಡು ವಿಕೆಟ್‌ಗಳ ಜಯ ದಾಖಲಿಸಿತ್ತು. ಕಳೆದ ವರ್ಷವೂ ಸಸೆಕ್ಸ್ ಪರ ಪೂಜಾರ ಉತ್ತಮ ಫಾರ್ಮ್‌ನಲ್ಲಿದ್ದರು. ಚಾಂಪಿಯನ್‌ಶಿಪ್‌ನಲ್ಲಿ ಕಳೆದ ವರ್ಷ ಎಂಟು ಪಂದ್ಯಗಳಲ್ಲಿ ಅವರು 109.40 ಸರಾಸರಿಯಲ್ಲಿ 1,094 ರನ್ ಗಳಿಸಿದ್ದರು. ಅವರು ಕಳೆದ ವರ್ಷ 231 ರನ್‌ಗಳ ಅತ್ಯುತ್ತಮ ಸ್ಕೋರ್‌ನೊಂದಿಗೆ ಐದು ಅರ್ಧ ಶತಕಗಳನ್ನು ಗಳಿಸಿದರು.

ಅವರು ವೇಯ್ನ್ ಮ್ಯಾಡ್ಸೆನ್ (ಡರ್ಬಿಶೈರ್‌ಗೆ 1,273), ಹಸೀಬ್ ಹಮೀದ್ (ನಾಟಿಂಗ್‌ಹ್ಯಾಮ್‌ಶೈರ್‌ಗೆ 1,235) ಮತ್ತು ಸ್ಯಾಮ್ ನಾರ್ತ್‌ಈಸ್ಟ್ (ಗ್ಲಾಮೊರ್ಗಾನ್‌ಗಾಗಿ 1,189) ನಂತರ ವಿಭಾಗದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದವರಾಗಿ ಪುಜಾರ ಹೊರಹೊಮ್ಮಿದ್ದರು.

ಪೂಜಾರ ಕಳೆದ ವರ್ಷ ಏಕದಿನ ಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಒಂಬತ್ತು ಪಂದ್ಯಗಳಲ್ಲಿ, ಅವರು 89.14 ರ ಸರಾಸರಿಯಲ್ಲಿ ಮತ್ತು 111.62 ರ ಸ್ಟ್ರೈಕ್ ರೇಟ್‌ನಲ್ಲಿ 624 ರನ್ ಗಳಿಸಿದರು. ಅವರು ಮೂರು ಶತಕಗಳು ಮತ್ತು ಎರಡು ಅರ್ಧ ಶತಕಗಳನ್ನು ಗಳಿಸಿದ್ದು, ಅವರ ಅತ್ಯುತ್ತಮ ಸ್ಕೋರ್ 174 ಆಗಿದೆ.

ಜೂನ್ 7 ರಿಂದ ಲಂಡನ್‌ನ ಓವಲ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಫೈನಲ್‌ಗೆ ತಯಾರಿ ನಡೆಸುತ್ತಿರುವ ಭಾರತಕ್ಕೆ ಚೇತೇಶ್ವರ ಪೂಜಾರ ಅವರು ಫಾರ್ಮ್​ ಆಶಾದಾಯಕವಾಗಿದೆ. ಪೂಜಾರ ಕಳೆದ ವರ್ಷ ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದದಾರೆ. ಐದು ಟೆಸ್ಟ್​ನ 10 ಇನ್ನಿಂಗ್ಸ್‌ಗಳಲ್ಲಿ 45.44 ಸರಾಸರಿಯಲ್ಲಿ 409 ರನ್ ಗಳಿಸಿದ್ದು, ಒಂದು ಶತಕ ಮತ್ತು ಮೂರು ಅರ್ಧ ಶತಕ ಅವರ ಖಾತೆಗೆ ಸೇರಿಸಿದ್ದರು, ಅಜೇಯ 102 ಅವರ ಕಳೆದ ವರ್ಷದ ಅತ್ಯತ್ತಮ ಸ್ಕೋರ್​​ ಆಗಿತ್ತು.

ಇದನ್ನೂ ಓದಿ: ಧೋನಿಯಿಂದ ರನ್​ ಔಟ್​ ಆದ ಧ್ರುವ್: 20 ವರ್ಷಗಳ ನಂತರವೂ ಇದನ್ನು ನೆನೆಯುತ್ತೇನೆ ಎಂದ ಜುರೆಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.