ETV Bharat / sports

ರಹಸ್ಯ ಕಾರ್ಯಾಚರಣೆ: ಬಿಸಿಸಿಐ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಚೇತನ್​ ಶರ್ಮಾ - ಭಾರತ ಕ್ರಿಕೆಟ್​ ತಂಡದ ಮುಖ್ಯ ಆಯ್ಕೆಗಾರ ಚೇತನ್​ ಶರ್ಮಾ

ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಕಳುಹಿಸಿದ್ದು, ಅವರು ಅದನ್ನು ಅಂಗೀಕರಿಸಿದ್ದಾರೆ.

India chairman of selectors  Sharma resigns as India chairman of selectors  Chetan Sharma resigns  ಬಿಸಿಸಿಐ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ  ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಚೇತನ್​ ಚೇತನ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ  ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ  ಬಿಸಿಸಿಐ ಕಾರ್ಯದರ್ಶಿ ಜಯ್ ಶಾ  ಖಾಸಗಿ ಸುದ್ದಿವಾಹಿನಿ​ ನಡೆಸಿದ ರಹಸ್ಯ ಕಾರ್ಯಾಚರಣೆ  ಭಾರತ ಕ್ರಿಕೆಟ್​ ತಂಡದ ಮುಖ್ಯ ಆಯ್ಕೆಗಾರ ಚೇತನ್​ ಶರ್ಮಾ  ಚೇತನ್​ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ
ಬಿಸಿಸಿಐ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಚೇತನ್​ ಶರ್ಮಾ
author img

By

Published : Feb 17, 2023, 12:52 PM IST

ನವದೆಹಲಿ: ಖಾಸಗಿ ಸುದ್ದಿವಾಹಿನಿ​ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ್ದ ಭಾರತ ಕ್ರಿಕೆಟ್​ ತಂಡದ ಮುಖ್ಯ ಆಯ್ಕೆಗಾರ ಚೇತನ್​ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಕಳುಹಿಸಿದ್ದು, ಅದನ್ನು ಅವರು ಅಂಗೀಕರಿಸಿದ್ದಾರೆ. ಖಾಸಗಿ ಮಾಧ್ಯಮ ನಡೆಸಿದ್ದ ರಹಸ್ಯ ಕಾರ್ಯಾಚರಣೆಯಲ್ಲಿ ಕ್ರಿಕೆಟಿಗರು ಮತ್ತು ಬಿಸಿಸಿಐ ಬಗ್ಗೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದ್ದವು. ಇದು ಕ್ರಿಕೆಟ್​ ವಲಯದಲ್ಲಿ ಭಾರಿ ಸಂಚಲನ ಉಂಟು ಮಾಡಿತ್ತು. ಇದರಿಂದಾಗಿ ಆಯ್ಕೆ ಸಮಿತಿಗೆ ಮರು ಆಯ್ಕೆಯಾಗಿದ್ದ ಚೇತನ್​ ಶರ್ಮಾ ಭವಿಷ್ಯವೂ ಡೋಲಾಯಮಾನವಾಗಿದೆ.

ಭಾರತ ತಂಡದ ಆಟಗಾರರ ಮಧ್ಯೆ ಮನಸ್ತಾಪ, ಅವರ ದೈಹಿಕ ಸಾಮರ್ಥ್ಯ, ಫಿಟ್​ ಇಲ್ಲದಿದ್ದರೂ ಹೇಗೆ ಆಯ್ಕೆಯಾಗುತ್ತಾರೆ. ತಂಡದಲ್ಲಿನ ಬಣಗಳು ಸೇರಿದಂತೆ ವಿವಿಧ ಮಾಹಿತಿ ಸ್ಟಿಂಗ್​ ಆಪರೇಷನ್​ ಮೂಲಕ ಹೊರಬಿದ್ದಿತ್ತು. ಆಟಗಾರರು ಫಿಟ್ನೆಸ್​ಗಾಗಿ ಬೇರೆ ಮಾರ್ಗ ಹಿಡಿಯುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕ್ರೀಡಾಪಟುಗಳಿಗೆ ಫಿಟ್​ನೆಸ್​ ಬಹಳ ಮುಖ್ಯ. ಅದನ್ನು ಕಾಪಾಡಿಕೊಳ್ಳಲು ಮಾಡುವ ಕಸರತ್ತು ಒಂದೆರಡಲ್ಲ. ಆದರೆ, ಕ್ರಿಕೆಟ್ ಆಟಗಾರರು ಉದ್ದೀಪನ ಮದ್ದು​ ಹಾಕಿಕೊಳ್ಳುವ ಮೂಲಕ ಫಿಟ್​ನೆಸ್​ ಪಾಸ್​ ಆಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಇದು ಗೊತ್ತಿದ್ದರೂ ಯಾರೂ ಏನೂ ಮಾಡುತ್ತಿಲ್ಲ ಎಂದಿರುವುದು ಸ್ಟಿಂಗ್​ ಕಾರ್ಯಾಚರಣೆಯಲ್ಲಿ ಸೆರೆಯಾಗಿತ್ತು.

ಭಾರತದ ಮುಂಚೂಣಿ ವೇಗಿ ಜಸ್ಪ್ರೀತ್​ ಬೂಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದು ಹಲವು ತಿಂಗಳಿಂದ ಕ್ರಿಕೆಟ್​ನಿಂದ ದೂರವಿದ್ದಾರೆ. ಈಗ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಸರಣಿ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ. ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ವೈಮನಸ್ಸು ಇರುವುದರ ಬಗ್ಗೆ ಶರ್ಮಾ ಹೇಳಿರುವುದು ವಿಡಿಯೋದಲ್ಲಿದೆ.

ರಾಷ್ಟ್ರೀಯ ಆಯ್ಕೆದಾರರು ತಂಡದ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಎಂಬ ಒಪ್ಪಂದವಿರುತ್ತದೆ. ಆದರೆ, ಅದನ್ನು ಮೀರಿರುವ ಚೇತನ್​ ಶರ್ಮಾ ಅವರ ಭವಿಷ್ಯ ಏನಾಗಬಹುದು ಎಂಬುದು ಪ್ರಶ್ನೆಯಾಗಿತ್ತು. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಈ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿತ್ತು. ಅಷ್ಟರಲ್ಲೇ ಚೇತನ್​ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜಯ್​ಶಾ ಇದನ್ನು ಅಂಗೀಕರಿಸಿದ್ದಾರೆ.

ಮರು ಆಯ್ಕೆಯಾಗಿದ್ದ ಚೇತನ್​ ಶರ್ಮಾ: ಭಾರತ ತಂಡದ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್​ ಶರ್ಮಾ ಈಚೆಗಷ್ಟೇ ಮರು ಆಯ್ಕೆಯಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್​ ಬಳಿಕ ಆಯ್ಕೆ ಸಮಿತಿಯನ್ನೇ ವಿಸರ್ಜಿಸಲಾಗಿತ್ತು. ಬಳಿಕ ಅರ್ಜಿ ಆಹ್ವಾನಿಸಿದ್ದ ಬಿಸಿಸಿಐ ಚೇತನ್​ ಶರ್ಮಾರನ್ನು ಮತ್ತೆ ಮುಖ್ಯಸ್ಥರನ್ನಾಗಿ ಮಾಡಿ, ಸಮಿತಿ ರಚಿಸಿದ್ದು ಗಮನಾರ್ಹ.

ಓದಿ: ಚಾನಲ್​ವೊಂದರ ರಹಸ್ಯ ಕಾರ್ಯಾಚರಣೆ: ವಿವಾದದ ಸುಳಿಯಲ್ಲಿ ಚೇತನ್​ ಶರ್ಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.