ETV Bharat / sports

2022 ಭಾರತೀಯ ಕ್ರಿಕೆಟ್​ಗೆ ಅತ್ಯಂತ ಬಿಡುವಿಲ್ಲದ ವರ್ಷ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ - ಭಾರತೀಯ ಕ್ರಿಕೆಟ್ ವೇಳಾಪಟ್ಟಿ 2022

ಇಂಗ್ಲಿಷ್ ಪ್ರವಾಸ ಮುಗಿಯುತ್ತಿದ್ದಂತೆ ಜುಲೈ-ಆಗಸ್ಟ್​ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ. ಅಲ್ಲಿಂದ ವಾಪಸ್ ಆದ ನಂತರ ಶ್ರೀಲಾಂಕದಲ್ಲಿ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್​ನಲ್ಲಿ ಪಾಲ್ಗೊಳ್ಳಲಿದೆ. ಈ ಎರಡೂ ಸರಣಿಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ..

Indian Cricket schedule for 2022
ಭಾರತ ಕ್ರಿಕೆಟ್ ವೇಳಾಪಟ್ಟಿ 2022
author img

By

Published : Jan 1, 2022, 7:09 PM IST

ಮುಂಬೈ : 2021ರಲ್ಲಿ ಕೊರೊನಾ ಭೀತಿಯ ನಡುವೆಯೂ ವಿಶ್ವದಾದ್ಯಂತ ಕ್ರಿಕೆಟ್ ಪಂದ್ಯಗಳನ್ನ ಎಚ್ಚರಿಕೆಯಿಂದ ಬಯೋಬಬಲ್ ನೆರವಿನ​ ಮೂಲಕ ಆಯೋಜಿಸಲಾಗಿದೆ. 2021ರಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಜಯಿಸಿದರೆ, ನ್ಯೂಜಿಲ್ಯಾಂಡ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆದ್ದು ವರ್ಷವನ್ನು ಸ್ಮರಣೀಯವಾಗಿಸಿಕೊಂಡವು.

ಇದೀಗ 2022ರ ಆರಂಭವಾಗಿದೆ. ಈ ವರ್ಷ ಮೂರು ದೊಡ್ಡ ಟೂರ್ನಮೆಂಟ್​ಗಳು ಕ್ರಿಕೆಟ್​ ಅಭಿಮಾನಿಗಳಿಗೆ ರಸದೌತಣ ನೀಡಲಿವೆ. ಜನವರಿ-ಫೆಬ್ರವರಿಯಲ್ಲಿ ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್, ಮಾರ್ಚ್​-ಏಪ್ರಿಲ್​ನಲ್ಲಿ ನ್ಯೂಜಿಲ್ಯಾಂಡ್​ನಲ್ಲಿ ಮಹಿಳಾ ವಿಶ್ವಕಪ್​ ಮತ್ತು ಅಕ್ಟೋಬರ್​-ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ಗಳು ಈ ವರ್ಷದಲ್ಲಿ ಆಯೋಜನೆಯಾಗಿಲಿರುವ ದೊಡ್ಡ ಕ್ರಿಕೆಟ್ ಟೂರ್ನಮೆಂಟ್​ಗಳಾಗಿವೆ.

ಇನ್ನು ಭಾರತ ಹಿರಿಯರ ತಂಡದ ವೇಳಾಪಟ್ಟಿ ನೋಡುವುದಾದರೆ, 2022ರಲ್ಲಿ 11 ಟೆಸ್ಟ್​ ಪಂದ್ಯಗಳನ್ನಾಡಲಿದೆ. ಕೋವಿಡ್​-19 ಪರಿಸ್ಥಿತಿಯನ್ನು ನೋಡಿಕೊಂಡು ಬಿಸಿಸಿಐ ಒಂದಷ್ಟು ಪಂದ್ಯಗಳನ್ನು ಏರಿಸುವ ಸಾಧ್ಯತೆಯಿದೆ.

ಆದರೆ, 1-0ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿ ಮುನ್ನಡೆ ಸಾಧಿಸಿರುವ ಕೊಹ್ಲಿ ಪಡೆ ಮುಂದಿನ 2 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಐತಿಹಾಸಿಕ ಟೆಸ್ಟ್​ ಸರಣಿ ಗೆಲ್ಲುವ ಆಲೋಚನೆಯಲ್ಲಿದೆ.

ಇದನ್ನೂ ಓದಿ:ರಾಹುಲ್​ ಮೇಲೆ ವಿಶ್ವಾಸವಿದೆ, ಭವಿಷ್ಯದ ನಾಯಕನನ್ನಾಗಿ ಬೆಳೆಸಲಾಗುತ್ತಿದೆ: ಆಯ್ಕೆ ಸಮಿತಿ ಅಧ್ಯಕ್ಷ

ಭಾರತ ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿ ನಂತರ ಜನವರಿ 19, 21 ಮತ್ತು 23 ರಂದು 3 ಏಕದಿನ ಪಂದ್ಯಗಳನ್ನಾಡಲಿದೆ. ಆ ಪ್ರವಾಸ ಮುಗಿಸಿ ಬರುತ್ತಿದ್ದಂತೆ ತವರಿನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಫೆಬ್ರವರಿಯಲ್ಲಿ 6,9 ಮತ್ತು 12ರಂದು ಏಕದಿನ ಮತ್ತು ಫೆಬ್ರವರಿ 15, 18 ಮತ್ತು 20 ರಂದು ಟಿ20 ಸರಣಿಯನ್ನಾಡಲಿದೆ.

ಫೆಬ್ರವರಿ -ಮಾರ್ಚ್​​ನಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. 25ರಿಂದ ಮಾರ್ಚ್​1ರ ಮತ್ತು ಮಾರ್ಚ್​5ರಿಂದ 9ರವರೆಗೆ 2 ಟೆಸ್ಟ್​ ಪಂದ್ಯ ಮತ್ತು ಮಾರ್ಚ್​ 13,15 ಮತ್ತು 18ರಂದು 3 ಟಿ20 ಪಂದ್ಯಗಳನ್ನಾಡಲಿದೆ. ಈ ಸರಣಿ ಮುಗಿಯುತ್ತಿದ್ದಂತೆ ಆಫ್ಘಾನಿಸ್ತಾನ ಮಾರ್ಚ್​​ನಲ್ಲಿ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಆಗಮಿಸಲಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಏಪ್ರಿಲ್-ಮೇನಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಯಲಿದೆ. ಐಪಿಎಲ್ ಮುಗಿಯುತ್ತಿದ್ದಂತೆ ಜೂನ್​ನಲ್ಲಿ ದಕ್ಷಿಣ ಆಫ್ರಿಕಾಗೆ 5 ಟಿ20(ಜೂ9,12, 14, 15, 19) ಸರಣಿಯನ್ನಾಡಲು ಭಾರತ ಪ್ರವಾಸ ಕೈಗೊಳ್ಳಲಿದೆ.

ಈ ಸರಣಿಯ ನಂತರ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಕಳೆದ ವರ್ಷ ರದ್ದಾಗಿರುವ ಒಂದು ಟೆಸ್ಟ್​(ಜು1-5)ಜುಲೈ 7, 9 ಮತ್ತು 10ರಂದು ಟಿ20 ಸರಣಿ, ಜುಲೈ 12, 14 ಮತ್ತು 17ರಂದು ಏಕದಿನ ಪಂದ್ಯಗಳನ್ನಾಡಲಿದೆ.

ಇಂಗ್ಲಿಷ್ ಪ್ರವಾಸ ಮುಗಿಯುತ್ತಿದ್ದಂತೆ ಜುಲೈ-ಆಗಸ್ಟ್​ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ. ಅಲ್ಲಿಂದ ವಾಪಸ್ ಆದ ನಂತರ ಶ್ರೀಲಾಂಕದಲ್ಲಿ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್​ನಲ್ಲಿ ಪಾಲ್ಗೊಳ್ಳಲಿದೆ. ಈ ಎರಡೂ ಸರಣಿಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಸೆಪ್ಟೆಂಬರ್​ನಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 4 ಟೆಸ್ಟ್​ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಅಕ್ಟೋಬರ್​ನಲ್ಲಿ ಭಾರತ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.

ನವೆಂಬರ್​-ಡಿಸೆಂಬರ್​ನಲ್ಲಿ ಭಾರತ 3 ಟೆಸ್ಟ್​ ಮತ್ತು 3 ಏಕದಿನ ಪಂದ್ಯಗಳ ಸರಣಿಗಾಗಿ ಬಾಂಗ್ಲಾದೇಶ ಪ್ರಯಾಣ ಬೆಳೆಸಲಿದೆ. ಡಿಸೆಂಬರ್​ನಲ್ಲಿ ಶ್ರೀಲಂಕಾ 5 ಪಂದ್ಯಗಳ ಏಕದಿನ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಲಿದೆ.

ಇದನ್ನೂ ಓದಿ:ಬುಮ್ರಾಗೆ ಉಪನಾಯಕನ ಪಟ್ಟ: ಎಲ್ಲಾ ಮಾದರಿಯಲ್ಲೂ ತೋರುವ ಅತ್ಯುತ್ತಮ ಪ್ರದರ್ಶನಕ್ಕೆ ಸಿಕ್ಕ ಗೌರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.