ಹೈದರಾಬಾದ್: 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ಗೆ ಸಂತೋಷಕ್ಕಿಂತಲೂ ದುಃಖವನ್ನೇ ಹೆಚ್ಚಾಗಿ ನೀಡಿದೆ. ಕಾರಣವಿಲ್ಲದೇ ನಾಯಕತ್ವ ಕಿತ್ತುಕೊಳ್ಳುವುದರ ಜೊತೆಗೆ ಆಡುವ 11ರ ಬಳಗದಿಂದಲೂ ಕೈಬಿಡಲಾಗಿತ್ತು. ಇದೇ ವಿಚಾರವಾಗಿ ಈಗಾಗಲೇ ಅನೇಕ ಸಲ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ವಾರ್ನರ್ಗೆ ಇದೀಗ ಫ್ರಾಂಚೈಸಿ ತಂಡದಿಂದ ಕೊಕ್ ನೀಡಿದೆ.
2016ರಿಂದಲೂ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ವಾರ್ನರ್ ತಂಡಕ್ಕಾಗಿ ಅನೇಕ ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿ, ಗೆಲುವಿನ ದಡ ಸೇರಿಸಿದ್ದರು. ಇದರ ಜೊತೆಗೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಸಹಕಾರಿಯಾಗಿದ್ದರು. ಆದರೆ ಈ ಸಲ ಭಾರತದಲ್ಲಿ ನಡೆದ ಟೂರ್ನಿಯಲ್ಲಿ ವಾರ್ನರ್ ವಿಫಲಗೊಳ್ಳುತ್ತಿದ್ದಂತೆ ನಾಯಕತ್ವ ಜವಾಬ್ದಾರಿ ಹಾಗೂ ಆಡುವ 11ರ ಬಳಗದಿಂದ ಹೊರಗಿಡಲಾಗಿತ್ತು.
2022ರ ಐಪಿಎಲ್ಗೋಸ್ಕರ ತಮ್ಮಿಷ್ಟದ ಕೆಲ ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು ನಿನ್ನೆ ಕೊನೆಯ ದಿನವಾಗಿದ್ದರಿಂದ ಹೈದರಾಬಾದ್ ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್ ಹಾಗೂ ಉಮ್ರಾನ್ ಮಲಿಕ್ಗೆ ಉಳಿಸಿಕೊಂಡು, ಡೇವಿಡ್ ವಾರ್ನರ್, ರಾಶೀದ್ ಖಾನ್ ಹಾಗೂ ಬೈರ್ಸ್ಟೋ ರಂತಹ ಪ್ಲೇಯರ್ಸ್ಗೆ ಕೈಬಿಟ್ಟಿದೆ.
-
Chapter closed!! Thanks to all of the fans @srhfansofficial @sunrisersfansofficial for your support over all the years, it was was much appreciated. #fans #loyal https://t.co/P13ztBcBQH
— David Warner (@davidwarner31) December 1, 2021 " class="align-text-top noRightClick twitterSection" data="
">Chapter closed!! Thanks to all of the fans @srhfansofficial @sunrisersfansofficial for your support over all the years, it was was much appreciated. #fans #loyal https://t.co/P13ztBcBQH
— David Warner (@davidwarner31) December 1, 2021Chapter closed!! Thanks to all of the fans @srhfansofficial @sunrisersfansofficial for your support over all the years, it was was much appreciated. #fans #loyal https://t.co/P13ztBcBQH
— David Warner (@davidwarner31) December 1, 2021
ತಮ್ಮನ್ನ ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ವಾರ್ನರ್, Chapter closed!! ಎಲ್ಲರಿಗೂ ಧನ್ಯವಾದಗಳು. ತಂಡದಲ್ಲಿದ್ದಾಗ ನನಗೆ ನೀಡಿರುವ ಬೆಂಬಲಕ್ಕಾಗಿ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.