ನವದೆಹಲಿ: "ಚಾಂಪಿಯನ್ ರೈಸ್ ಅಗೈನ್" ಎಂದು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ಪಂತ್ ಬಗ್ಗೆ ಬರೆದುಕೊಂಡಿದ್ದಾರೆ. ಗುರುವಾರ ರಿಷಬ್ ಪಂತ್ ಅವರನ್ನು ಭೇಟಿಯಾಗಿರುವ ಸಿಕ್ಸರ್ ವೀರ ಯುವರಾಜ್ ಟ್ವಿಟರ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಯುವರಾಜ್ ಸಿಂಗ್ 2011 ಏಕದಿನ ವಿಶ್ವಕಪ್ ವೇಳೆ ಮೆಡಿಯಾಸ್ಟೈನಲ್ ಸೆಮಿನೋಮಾ ಕ್ಯಾನ್ಸರ್ಗೆ ತುತ್ತಾಗಿದ್ದರು. ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಹಲವಾರು ಜನರಿಗೆ ಸ್ಫೂರ್ತಿಯಾಗಿದ್ದರು. ಅವರು ಕ್ಯಾನ್ಸ್ರ್ನಿಂದ ಚೇತರಿಸಿಕೊಂಡು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಮಾರ್ಚ್ 2012 ರಲ್ಲಿ ಅವರ ಮೂರನೇ ಮತ್ತು ಅಂತಿಮ ಕೀಮೋಥೆರಪಿ ಚಿಕಿತ್ಸೆಗೆ ಒಳಗಾದರು. ನಂತರ ಯುವರಾಜ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮತ್ತೆ ವೃತ್ತಿ ಜೀವನಕ್ಕೆ ಮರಳಿದ್ದರು.
-
On to baby steps !!! This champion is going to rise again 🔜 .was good catching up and having a laugh 😅what a guy positive and funny always !! More power to you 🤛 💫 @RishabhPant17 pic.twitter.com/OKv487GrRC
— Yuvraj Singh (@YUVSTRONG12) March 16, 2023 " class="align-text-top noRightClick twitterSection" data="
">On to baby steps !!! This champion is going to rise again 🔜 .was good catching up and having a laugh 😅what a guy positive and funny always !! More power to you 🤛 💫 @RishabhPant17 pic.twitter.com/OKv487GrRC
— Yuvraj Singh (@YUVSTRONG12) March 16, 2023On to baby steps !!! This champion is going to rise again 🔜 .was good catching up and having a laugh 😅what a guy positive and funny always !! More power to you 🤛 💫 @RishabhPant17 pic.twitter.com/OKv487GrRC
— Yuvraj Singh (@YUVSTRONG12) March 16, 2023
ಟ್ವಿಟರ್ನಲ್ಲಿ ರಿಷಬ್ ಪಂತ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಯುವರಾಜ್ ಸಿಂಗ್ ಪಂತ್ ಅವರು ಅಂಬೆಗಾಲು ಇಡುತ್ತಿದ್ದಾರೆ. ಮತ್ತೆ ಚಾಂಪಿಯನ್ ತಂಡದಲ್ಲಿ ಮಿಂಚಲಿದ್ದಾರೆ ಎಂದು ಭರವಸೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಮಗುವಿನ ಹೆಜ್ಜೆಗಳ ಮೇಲೆ!!! ಈ ಚಾಂಪಿಯನ್ ಮತ್ತೆ ಮರಳಲಿದ್ದಾರೆ. ಸುದೀರ್ಘ ಮಾತುಕತೆ ಮತ್ತು ಒಂದಿಷ್ಟು ನಗು. ಧನಾತ್ಮಕ ವ್ಯಕ್ತಿತ್ವ ಮತ್ತು ಯಾವಾಗಲೂ ತಮಾಷೆ!! ನಿಮಗೆ ಹೆಚ್ಚಿನ ಶಕ್ತಿ ಸಿಗಲಿ ರಿಷಬ್ ಪಂತ್ (@rishabpant)" ಎಂದು ಪೋಸ್ಟ್ ಮಾಡಿದ್ದಾರೆ.
ರಿಷಬ್ ಪಂತ್ ಅಪರೂಪದಲ್ಲಿ ಟ್ವಿಟರ್ನಲ್ಲಿ ತಮ್ಮ ಕೆಲ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬುಧವಾರ ಟ್ವಿಟರ್ನಲ್ಲಿ ಪಂತ್ ಸ್ವಿಮಿಂಗ್ ಪೂಲ್ನಲ್ಲಿ ನಡೆಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಊರುಗೋಲು ಬಳಸಿ ನಡೆಯುತ್ತಿದ್ದಾರೆ. ಆದಷ್ಟು ಬೇಗ ಕ್ರಿಕೆಟ್ ಪೀಲ್ಡ್ಗೆ ಪಂತ್ ಮರಳಬೇಕು ಎಂದು ಅಭಿಮಾನಿಗಳ ಜೊತೆಗೆ ಮಾಜಿ ಆಟಗಾರರು ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಪಂತ್ ಸ್ವಿಮಿಂಗ್ ಪೂಲ್ನ ಫೋಟೋದ ವಿಡಿಯೋಕ್ಕೆ"ಸಣ್ಣ, ದೊಡ್ಡ ವಿಷಯಗಳಿಗೆ ಮತ್ತು ನಡುವೆ ಇರುವ ಎಲ್ಲದಕ್ಕೂ ಕೃತಜ್ಞರಾಗಿರುತ್ತೇನೆ" ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಟ್ವಿಟರ್ನಲ್ಲಿ ನಡೆದಾಡುವ ಫೋಟೋ ಹಂಚಿಕೊಂಡು "ಒಂದು ಹೆಜ್ಜೆ ಮುಂದಕ್ಕೆ, ಒಂದು ಹೆಜ್ಜೆ ಬಲವಾಗಿ, ಒಂದು ಉತ್ತಮವಾದ ಹೆಜ್ಜೆ" ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದರು.
2023ರಲ್ಲಿ ಪಂತ್ ಬಹುತೇಕ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ. ಈ ವರ್ಷದ ಐಪಿಎಲ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡೇವಿಡ್ ವಾರ್ನರ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಉಪನಾಯಕನಾಗಿ ನೇಮಕ ಮಾಡಿದೆ. ಐಪಿಎಲ್ ನಂತರದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವೇಳೆಗೆ ಪಂತ್ ಚೇತರಿಕೆ ಸಾಧ್ಯ ಇಲ್ಲ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.
ಡಿಸೆಂಬರ್ 30 ರಂದು ದೆಹಲಿಯಿಂದ ಡೆಹ್ರಾಡೂನ್ನಲ್ಲಿರುವ ಮನೆಗೆ ರಿಷಬ್ ಪಂತ್ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್ಗೆ ದಿಕ್ಕಿಹೊಡೆದು ಗಂಭೀರ ಗಾಯಗೊಂಡಿದ್ದರು. ಅಪಘಾತ ಪರಿಣಾಮ ಕಾರು ಸ್ಥಳದಲ್ಲೇ ಹೊತ್ತಿ ಉರಿದಿತ್ತು. ಪಂತ್ ಅವರನ್ನು ಬಸ್ ಚಾಲಕ ಮತ್ತು ನಿರ್ವಹಕ ರಕ್ಷಿಸಿದ್ದರು.
ಇದನ್ನೂ ಓದಿ: IPL ಬಿಟ್ಟು ಬಿಗ್ಬ್ಯಾಷ್ ಆಯ್ದುಕೊಂಡ ಬಾಬರ್! ಹರ್ಭಜನ್ ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ