ಮುಂಬೈ : ಕೆಕೆಆರ್ ವಿರುದ್ಧ ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದು ಪಂದ್ಯ ಗೆಲ್ಲುವುದರಲ್ಲಿ ಪ್ರಮುಖ ಪಾತ್ರವಹಿಸಿದ ಯುಜ್ವೇಂದ್ರ ಚಹಲ್ ಪ್ರದರ್ಶನವನ್ನು ಪ್ರಶಂಸಿಸಿರುವ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ,"ಐಪಿಎಲ್ನಲ್ಲಿ ಲೆಗ್ ಸ್ಪಿನ್ನರ್ಗಳು ಏಕೆ ಮ್ಯಾಚ್ ವಿನ್ನರ್ಗಳು ಎನ್ನಲಾಗುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ " ಎಂದು ತಿಳಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ್ದ 218 ರನ್ಗಳ ಬೃಹತ್ ಮೊತ್ತವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಲೀಲಾಜಾಲವಾಗಿ ಹಿಂಬಾಲಿಸುತ್ತಿತ್ತು. ಕೊನೆಯ 4 ಓವರ್‌ವರೆಗೂ ಪಂದ್ಯ ಕೆಕೆಆರ್ ಕೈಯಲ್ಲಿತ್ತು. 24 ಎಸೆತಗಳಲ್ಲಿ 40 ರನ್ಗಳ ಅಗತ್ಯವಿತ್ತು. ಸೆಟ್ ಬ್ಯಾಟರ್ಗಳಾದ ಶ್ರೇಯಸ್ ಅಯ್ಯರ್ (85) ಮತ್ತು ವೆಂಕಟೇಶ್ ಅಯ್ಯರ್ ಕ್ರೀಸ್ನಲ್ಲಿದ್ದರು. ಆದರೆ, 17ನೇ ಓವರ್ ಎಸೆದ ಚಹಲ್ ಪಂದ್ಯದ ಗತಿಯನ್ನೇ ಬದಲಿಸಿದರು.
ಚಹಲ್ ಆ ಓವರ್ನ ಮೊದಲ ಎಸೆತದಲ್ಲಿಯೇ ವೆಂಕಟೇಶ್ ಅಯ್ಯರ್ ವಿಕೆಟ್ ಪಡೆದರೆ, ಕೊನೆಯ 3 ಎಸೆತದಲ್ಲಿ ಶ್ರೇಯಸ್ ಅಯ್ಯರ್ ಸೇರಿದಂತೆ ಮೂರು ವಿಕೆಟ್ ಪಡೆದರು. ಒಟ್ಟಾರೆ ಆ ಒಂದೇ ಓವರ್ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನು ಸಂಪೂರ್ಣ ಬದಲಿಸಿದರು.
ಚಹಲ್ ಅವರಿಗೆ ಅಪಾರವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವಿದೆ. ಅವರು ಟೂರ್ನಮೆಂಟ್ ಮತ್ತು ದೇಶದ ಅತ್ಯಂತ ಅನುಭವಿ ಲೆಗ್ ಸ್ಪಿನ್ನರ್ ಆಗಿದ್ದಾರೆ. ಅವರು ಇಂದು(ಸೋಮವಾರ) ಕೌಶಲ್ಯವನ್ನು ಹೇಗೆ ನಿಯಂತ್ರಿಸಬೇಕೆಂದು ತೋರಿಸಿಕೊಟ್ಟಿದ್ದಾರೆ. ಅವರು ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡುವುದಕ್ಕೆ ತಾವೂ ಸಾಕಷ್ಟು ಯೋಗ್ಯರು ಎನ್ನುವುದನ್ನು ತೋರಿಸಿರುವುದು ಮುಖ್ಯವಾಗಿತ್ತು ಎಂದು ಮಾಲಿಂಗ ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಟೂರ್ನಿಯಲ್ಲಿ ಅದ್ಭುತ ಯಶಸ್ಸು ಸಾಧಿಸಿರುವ ಚಹಲ್ ಆಡಿರುವ 6 ಪಂದ್ಯಗಳಲ್ಲಿ7.33ರ ಎಕಾನಮಿಯಲ್ಲಿ 17 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ವಯಸ್ಸು ನೋಡದೆ ಟಿ20 ವಿಶ್ವಕಪ್ನಲ್ಲಿ ಅವರಿಗೆ ಚಾನ್ಸ್ ಕೊಡಿ, ಉತ್ತಮ ಫಿನಿಶರ್ ಆಗ್ತಾರೆ: ಗವಾಸ್ಕರ್