ETV Bharat / sports

ಅರ್ಷದೀಪ್​ ಸಿಂಗ್ ವಿಕಿಪೀಡಿಯಾದಲ್ಲಿ​ ಖಲಿಸ್ಥಾನ್​ ಪದ.. ವಿವರಣೆ ಕೇಳಿದ ಕೇಂದ್ರ ಸರ್ಕಾರ - ಈಟಿವಿ ಭಾರತ ಕನ್ನಡ ನ್ಯೂಸ್​

ಪಾಕಿಸ್ತಾನ ವಿರುದ್ಧ ಕ್ಯಾಚ್​ ಕೈಬಿಟ್ಟು ಟೀಕೆಗೆ ಗುರಿಯಾಗಿರುವ ಅರ್ಷದೀಪ್​ ಸಿಂಗ್​ರ ವಿಕಿಪೀಡಿಯಾವನ್ನು ಕಿಡಿಗೇಡಿಗಳು ತಿದ್ದಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ಕೇಂದ್ರ ಸರ್ಕಾರ ವಿಕಿಪೀಡಿಯಾದ ಸಿಇಒಗೆ ನೋಟಿಸ್​ ನೀಡಿದೆ.

wikipedia-khalistan-controversy
ಅರ್ಷದೀಪ್​ ಸಿಂಗ್ ವಿಕಿಪೀಡಿಯಾದಲ್ಲಿ​ ಖಲಿಸ್ಥಾನ್​ ಪದ
author img

By

Published : Sep 5, 2022, 3:51 PM IST

ನವದೆಹಲಿ: ಭಾರತದ ಬೌಲರ್​ ಅರ್ಷದೀಪ್​ ಸಿಂಗ್​ ಅವರ ವಿಕಿಪಿಡೀಯಾವನ್ನು ಯಾರೋ ಕಿಡಿಗೇಡಿಗಳು ತಿದ್ದಿದ್ದು "ಭಾರತ" ಎಂಬ ಜಾಗದಲ್ಲಿ ಪಂಜಾಬ್​ ಪ್ರತ್ಯೇಕತೆಯನ್ನು ಬಯಸುವ "ಖಲಿಸ್ಥಾನ್"​ ಎಂದು ಬರೆಯಲಾಗಿತ್ತು. ಇದು ಕೋಮು ಸೌಹಾರ್ದತೆ ಮತ್ತು ಆಟಗಾರನ ವೈಯಕ್ತಿಕ ಭದ್ರತೆಗೆ ಧಕ್ಕೆ ತಂದಿದ್ದು, ಈ ಕುರಿತು ವಿವರಣೆ ನೀಡಲು ಸೂಚಿಸಿ ವಿಕಿಡಿಯಾಕ್ಕೆ ಕೇಂದ್ರ ಸರ್ಕಾರ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ.

ನಿನ್ನೆ ಪಾಕಿಸ್ತಾನ ವಿರುದ್ಧದ ಪಂದ್ಯದ ಕೊನೆಯಲ್ಲಿ ಅರ್ಷದೀಪ್​ ಸಿಂಗ್​ ಸುಲಭದ ಕ್ಯಾಚ್​ ಕೈಚೆಲ್ಲಿ ಪಂದ್ಯವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಇದರ ಲಾಭ ಪಡೆದ ಪಾಕ್​ ಅಸೀಫ್​ ಅಲಿ ಬೌಂಡರಿ, ಸಿಕ್ಸರ್​ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಅರ್ಷದೀಪ್​ ಕ್ಯಾಚ್​ ಬಿಟ್ಟಿದ್ದು ದುಬಾರಿಯಾದ ಕಾರಣ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಿ ಭಾರಿ ಟೀಕೆಗೆ ಗುರಿ ಮಾಡಲಾಗಿದೆ. ಅಲ್ಲದೇ, ಅವರ ವಿಕಿಪೀಡಿಯಾವನ್ನು ತಿದ್ದಿರುವ ಕಿಡಿಗೇಡಿಗಳು ಪಂಜಾಬ್​ನ ಅರ್ಷದೀಪ್​ ಪ್ರತ್ಯೇಕತಾವಾದ ಬಯಸುವ ಗುಂಪಾದ ಖಲಿಸ್ಥಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬಿಂಬಿಸಿದ್ದರು.

ವರದಿ ನೀಡಲು ಸೂಚಿಸಿದ ಕೇಂದ್ರ: ಇದು ಕೋಮುಸೌಹಾರ್ದತೆ ಮತ್ತು ಕ್ರಿಕೆಟಿಗನ ವೈಯಕ್ತಿಕ ಭದ್ರತೆಗೆ ಚ್ಯುತಿ ತಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ವಿಕಿಪೀಡಿಯಾದಲ್ಲಿ ಭಾರತದ ಬದಲಾಗಿ ಖಲಿಸ್ಥಾನ್​ ಎಂದು ಬದಲಿಸಿದ ಬಗ್ಗೆ ವರದಿ ನೀಡಲು ವಿಕಿಪೀಡಿಯಾದ ಸಿಇಒಗೆ ನೋಟಿಸ್​ ನೀಡಿದೆ.

ಅಲ್ಲದೇ ಈ ಬಗ್ಗೆ ಖುದ್ದು ಉತ್ತರ ನೀಡಲು ಎನ್​ಸೈಕ್ಲೋಪೀಡಿಯಾದ ಕಾರ್ಯನಿರ್ವಾಹಕರನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಭಾರತದ ಬದಲಿಗೆ ಖಲಿಸ್ಥಾನ್​ ಎಂದು ಬರೆದ ಪದವನ್ನು ಗುರುತಿಸಿದ ವಿಕಿಪೀಡಿಯಾ 15 ನಿಮಿಷದಲ್ಲಿ ರದ್ದು ಮಾಡಿದೆ.

ಕ್ಯಾಚ್​ ಬಿಟ್ಟ ಸಿಂಗ್​ ವಿರುದ್ಧ ಟೀಕೆ, ಕೊಹ್ಲಿ ಬೆಂಬಲ: ಪಾಕ್​ ವಿರುದ್ಧದ ರೋಚಕ ಪಂದ್ಯದಲ್ಲಿ ಭಾರತ 5 ವಿಕೆಟ್​ಗಳಿಂದ ಸೋಲನುಭವಿಸಿದೆ. ಪಾಕ್​ಗೆ ಗೆಲ್ಲಲು 34 ರನ್​ ಅಗತ್ಯವಿದ್ದಾಗ ರವಿ ಬಿಷ್ಣೋಯ್​ ಎಸೆದ ಓವರ್​ನಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಾಕ್​ನ ಅಸಿಫ್​ ಅಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದಾಗ ಚೆಂಡು ಗಾಳಿಯಲ್ಲಿ ತೇಲಿತ್ತು. ಈ ವೇಳೆ ಅರ್ಷದೀಪ್​ ಸಿಂಗ್​ ಸುಲಭವಾಗಿ ಹಿಡಿಯಬೇಕಿದ್ದ ಕ್ಯಾಚ್​ಅನ್ನು ಕೈಚೆಲ್ಲಿದ್ದರು.

ಇದರ ಲಾಭ ಪಡೆದ ಅಸೀಫ್​ ಅಲಿ ಭರ್ಜರಿ ಬ್ಯಾಟ್ ಬೀಸಿ ತಂಡವನ್ನು ಗೆಲ್ಲಿಸಿದರು. ಇದರಿಂದ ಅರ್ಷದೀಪ್​ ಸಿಂಗ್​ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಲ್ಲದೇ, 23 ವರ್ಷದ ಅರ್ಷದೀಪ್​ ಒತ್ತಡದಲ್ಲಿ ಎಸಗಿದ ಪ್ರಮಾದವನ್ನು ನಾಯಕ ರೋಹಿತ್​ ಶರ್ಮಾ ಮೈದಾನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ, ಕಿರಿಯ ಆಟಗಾರನಿಗೆ ಅಭಿಮಾನಿಗಳು, ಹಿರಿಯ ಕ್ರಿಕೆಟಿಗರು ಮತ್ತು ಬ್ಯಾಟಿಂಗ್​ ಕಿಂಗ್​ ಕೊಹ್ಲಿ ಬೆಂಬಲ ನೀಡಿದ್ದಾರೆ. ಒತ್ತಡದಲ್ಲಿ ತಪ್ಪು ಮಾಡುವುದು ಸಹಜ ಎಂದು ಬೆನ್ನು ತಟ್ಟಿದ್ದಾರೆ.

ಓದಿ: ಸುಲಭ ಕ್ಯಾಚ್​ ಕೈ ಚೆಲ್ಲಿದ ಅರ್ಷ್‌ದೀಪ್​: ಆಕ್ರೋಶ ಹೊರಹಾಕಿದ ರೋಹಿತ್​, ಬೆನ್ನಿಗೆ ನಿಂತ ವಿರಾಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.