ETV Bharat / sports

ಕ್ರಿಕೆಟಿಗ ರವಿ ಬಿಷ್ಣೋಯ್​ಗೆ ಡಬಲ್​ ಧಮಾಕಾ.. ಭಾರತ ರಾಷ್ಟ್ರೀಯ ತಂಡದಲ್ಲಿ ಸ್ಥಾನ, ಐಪಿಎಲ್​ನಲ್ಲಿ 4 ಕೋಟಿಗೆ ಖರೀದಿ - ಕೇಕ್​ ಕಟ್​ ಮಾಡಿದ ಜನರಿಂದ ಸಂಭ್ರಮ

ಭಾರತ ಏಕದಿನ ಮತ್ತು ಟಿ - 20 ತಂಡದಲ್ಲಿ ಸ್ಥಾನ ಪಡೆದಿರುವ ಯುವ ಸ್ಪಿನ್ನರ್​ ರವಿ ಸಾಧನೆಗೆ ರಾಜಸ್ತಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು. ಉತ್ತಮ ಪ್ರದರ್ಶನ ನೀಡಿ ಎಂದು ಹಾರೈಸಿದ್ದಾರೆ.

ravi-vishnoi
ರವಿ ಬಿಷ್ಣೋಯ್
author img

By

Published : Jan 27, 2022, 1:19 PM IST

ಜೋಧಪುರ(ರಾಜಸ್ತಾನ): ಕೆಲ ದಿನಗಳ ಹಿಂದಷ್ಟೇ ಐಪಿಎಲ್​ನ ಹೊಸ ತಂಡವಾದ ಲಖನೌಗೆ 4 ಕೋಟಿ ರೂಪಾಯಿಗೆ ಬಿಕರಿಯಾಗಿದ್ದ ಯುವ ಕ್ರಿಕೆಟಿಗ, ಸ್ಪಿನ್ನರ್​ ರವಿ ಬಿಷ್ನೋಯ್​ ಇದೀಗ ಭಾರತ ತಂಡದಲ್ಲಿ ಸ್ಥಾನ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಪೋಷಕರ ಜೊತೆ ಕ್ರಿಕೆಟಿಗ ರವಿ ಬಿಷ್ಣೋಯ್​
ಪೋಷಕರ ಜೊತೆ ಕ್ರಿಕೆಟಿಗ ರವಿ ಬಿಷ್ಣೋಯ್​

21 ವರ್ಷದ ರವಿ ಬಿಷ್ಣೋಯ್​ ವೆಸ್ಟ್ ಇಂಡೀಸ್​ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ಪರ ಆಡುತ್ತಿದ್ದ ರವಿಯನ್ನು ತಂಡ ಕೈಬಿಟ್ಟ ಬಳಿಕ ಇದೀಗ ಲಖನೌ ತಂಡ 4 ಕೋಟಿಗೆ ಹರಾಜಿಗೂ ಮುನ್ನವೇ ಖರೀದಿಸಿದೆ.

ರವಿ ಬಿಷ್ಣೋಯ್​ ಪಂಜಾಬ್​ ಪರ 23 ಪಂದ್ಯಗಳಲ್ಲಿ 24 ವಿಕೆಟ್​ ಪಡೆದಿದ್ದಾರೆ. ಇದಲ್ಲದೇ 2020 ರಲ್ಲಿ ಭಾರತ ಅಂಡರ್​-19 ತಂಡದಲ್ಲೂ ಆಟವಾಡಿದ ಅನುಭವ ಹೊಂದಿದ್ದಾರೆ.

ಜೋಧ್​ಪುರದಲ್ಲಿ ಕೇಕ್​ ಕತ್ತರಿಸಿ ಸಂಭ್ರಮಾಚರಣೆ

ರಾಜಸ್ತಾನ ಸಿಎಂ ಗೆಹ್ಲೋಟ್​ ಅಭಿನಂದನೆ

ಇನ್ನು ಭಾರತ ಏಕದಿನ ಮತ್ತು ಟಿ-20 ತಂಡದಲ್ಲಿ ಸ್ಥಾನ ಪಡೆದಿರುವ ಯುವ ಸ್ಪಿನ್ನರ್​ ರವಿ ಸಾಧನೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು. ಉತ್ತಮ ಪ್ರದರ್ಶನ ನೀಡಿ ಎಂದು ಹಾರೈಸಿದ್ದಾರೆ. ಇದಲ್ಲದೇ ರವಿ ಬಿಷ್ಣೋಯ್​ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ನಿನ್ನೆ ರಾತ್ರಿ ಕೇಕ್​ ಕಟ್​ ಮಾಡಿ ಸ್ವಾಗತಿಸಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.