ಸೂರತ್ (ಗುಜರಾತ್): ಭಾರತದ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಮೂರು ವರ್ಷ ಸಂದಿದೆ. ಆದರೆ, ಅವರ ಜನಪ್ರಿಯತೆ ಎಳ್ಳಷ್ಟೂ ಕುಗ್ಗಿಲ್ಲ, ಏರುತ್ತಲೇ ಹೋಗಿದೆ. ಇದಕ್ಕೆ ಸಾಕ್ಷಿ ಎಂದರೆ 2023ರ ಐಪಿಎಲ್ನಲ್ಲಿ ಅವರ ಬ್ಯಾಟಿಂಗ್ ವೀಕ್ಷಣೆಗೆ ಮೈದಾನಕ್ಕೆ ಮತ್ತು ಒಟಿಟಿಗೆ ಹರಿದು ಬಂದ ವೀಕ್ಷಣೆ. ಈಗ ಧೋನಿಯ ಐಪಿಎಲ್ ನಿವೃತ್ತಿಯೂ ಹತ್ತಿರವಾಗಿದೆ ಎಂದು ಕೇಳಿ ಬರುತ್ತಿದೆ. 2024ರ ಐಪಿಎಲ್ ಅವರ ಕೊನೆಯ ಲೀಗ್ ಆಗಬಹುದು ಎಂದು ಹೇಳಲಾಗುತ್ತಿದೆ.
2024ರ ಐಪಿಎಲ್ ನಂತರ 'ತಲಾ' ಅವರ ಆಟ ನಾಯಕತ್ವ ನೋಡಲು ಸಿಗುವುದಿಲ್ಲ ಎಂದು ಬೇಸರ ಹೆಚ್ಚಿನ ಅಭಿಮಾನಿಗಳಲ್ಲಿದೆ. ಆದರೆ ಮಾಹಿಯ ಆಟವನ್ನು ಐಪಿಎಲ್ ನಂತರವೂ ನೋಡುವ ಅವಕಾಶ ಇದೆ. ಆದರೆ ಧೋನಿಯ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ. ಯಾವುದು ಆ ಅವಕಾಶ ಎಂದರೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ). ಎಲ್‌ಎಲ್‌ಸಿ ಸಿಇಒ ರಮಣ್ ರಹೇಜಾ, "ಐಪಿಎಲ್ ನಂತರ ಮಾಹಿ ಎಲ್‌ಎಲ್‌ಸಿ ಆಡುವುದಾದರೆ ಅವರಿಗೆ ಎಂದಿಗೂ ಬಾಗಿಲು ತೆರೆದಿರುತ್ತದೆ" ಎಂದಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) 2023/24ರ ಆವೃತ್ತಿಯ ಫೈನಲ್ ಡಿ. 9 ನಡೆಯಿತು. ಇದರಲ್ಲಿ ಅರ್ಬನ್ರೈಸರ್ಸ್ ಹೈದರಾಬಾದ್ ವಿರುದ್ಧ ಹರ್ಭಜನ್ ಸಿಂಗ್ ನಾಯಕತ್ವದ ಮಣಿಪಾಲ್ ಟೈಗರ್ಸ್ ತಂಡ ಗೆದ್ದು ಟ್ರೋಫಿ ಎತ್ತಿಹಿಡಿಯಿತು. ಕಳೆದ ವರ್ಷದಿಂದ ಆರಂಭವಾದ ಈ ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ಅನೇಕ ರಾಷ್ಟ್ರಗಳ ಹಿರಿಯ ಆಟಗಾರರು ಆಡುತ್ತಿದ್ದಾರೆ ಮತ್ತು ಲೀಗ್ ಜನಪ್ರಿಯತೆ ಪಡೆದುಕೊಂಡಿದೆ.
ಗೌತಮ್ ಗಂಭೀರ್, ಸುರೇಶ್ ರೈನಾ, ಹರ್ಭಜನ್ ಸಿಂಗ್, ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಆಲ್‌ರೌಂಡರ್ ಜಾಕ್ವೆಸ್ ಕಾಲಿಸ್ ಮತ್ತು ಇತರ ಐಕಾನ್ ಸ್ಟಾರ್ಗಳು ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮತ್ತು ಲೀಗ್ ಕ್ರಿಕೆಟ್ನಿಂದ ಬೇಗ ನಿವೃತ್ತಿ ಪಡೆದ ಆಟಗಾರರಿಗೆ ಪರ್ಯಾಯ ವೇದಿಕೆಯಾಗಿ ಎಲ್‌ಎಲ್‌ಸಿ ಬೆಳೆದಿದೆ.
ಎಲ್ಎಲ್ಸಿಯ ಯಶಸ್ವಿ ನಾಲ್ಕನೇ ಆವೃತ್ತಿ ಮುಗಿದ ನಂತರ ಎಲ್‌ಎಲ್‌ಸಿ ಸಿಇಒ ರಮಣ್ ರಹೇಜಾ ಮಾತನಾಡಿದರು. ಈ ವೇಳೆ, ಧೋನಿ ಎಲ್ಎಲ್ಸಿಯಲ್ಲಿ ಆಡುತ್ತಾರಾ ಎಂದು ಕೇಳಲಾದ ಪ್ರಶ್ನೆಗೆ,"ನಾನು ಸಕ್ರಿಯ ಕ್ರಿಕೆಟ್‌ನೊಂದಿಗೆ ಸ್ಪರ್ಧಿಸುತ್ತಿಲ್ಲ, ಧೋನಿ ನಮಗಾಗಿ ಆಡಲು ಅಂತಿಮಗೊಳಿಸಿದಾಗಲೆಲ್ಲ ನಮ್ಮ ಬಾಗಿಲುಗಳು ಅವರಿಗೆ ತೆರೆದಿರುತ್ತವೆ. ನಾನು ಖುದ್ದಾಗಿ ಹೋಗಿ ಅವರನ್ನು ಲೀಗ್‌ಗೆ ಬರುವಂತೆ ಹೇಳುತ್ತೇನೆ "ಎಂದಿದ್ದಾರೆ.
"ಅಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಪ್ಲೇಯರ್ ಆಗಿದ್ದ ಎಬಿ ಡಿವಿಲಿಯರ್ಸ್, ಮುಂಬೈ ಇಂಡಿಯನ್ಸ್ನ ಹೊಡಿಬಡಿ ದಾಂಡಿಗ ಕೀರಾನ್ ಪೊಲಾರ್ಡ್ ಅವರನ್ನು ಆಡಿಸುವ ಇಚ್ಚೆ ಇದೆ. ಡೇಲ್ ಸ್ಟೇನ್ ಈ ವರ್ಷ ಆಡುತ್ತಿದ್ದರು, ಆದರೆ ಗಾಯಕ್ಕೆ ತುತ್ತಾದ ಕಾರಣ ಅವರು ಹೊರಗುಳಿದಿದ್ದಾರೆ. ನಾವು ಎಲ್ಲಾ ಹಿರಿಯ ಆಟಗಾರರನ್ನು ಸಂಪರ್ಕಿಸುತ್ತೇವೆ. ಎಲ್ಲ ಆಟಗಾರರಿಗೂ ಇಲ್ಲಿ ಆಡುವ ಅವಕಾಶ ಇದೆ. ಜಾಕ್ವೆಸ್ ಕಾಲಿಸ್ ಅವರಿ ಸ್ಟೇನ್ಗೆ ಬರುವಂತೆ ಹೇಳಿದರು. ಹೀಗಾಗಿ ಆಟಗಾರರೇ ಇತರರನ್ನು ಕರೆದುಕೊಂಡು ಬರುತ್ತಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್ ಇನ್ನಿಂಗ್ಸ್ಗೆ ಒಲಿದ ಜಯ: ತಪ್ಪಿದ ಕ್ಲೀನ್ ಸ್ವೀಪ್ ಮುಖಭಂಗ