ಕೋಲ್ಕತ್ತಾ: ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಸಮಿತಿ 14ನೇ ಆವೃತ್ತಿಯ ಐಪಿಎಲ್ ಪಂದ್ಯ ಆರಂಭವಾಗುವ ಮುನ್ನ ಮುನ್ನೆಚ್ಚರಿಕೆಯ ಕ್ರಮವಾಗಿ ತನ್ನ ಆಡಳಿತ ಮಂಡಳಿಯ ಸಿಬ್ಬಂದಿ, ಈಡನ್ ಗಾರ್ಡನ್ ಮೈದಾನದ ಸಿಬ್ಬಂದಿಗೆ ಮತ್ತು ಗ್ರೌಂಡ್ಸ್ಮ್ಯಾನ್ಗಳಿಗೆ ಕೋವಿಡ್ 19 ಲಸಿಕೆಯನ್ನು ಕೊಡಿಸಿದೆ.
ಸಿಎಬಿ ಮತ್ತು ಎಎಂಆರ್ಐ ಆಸ್ಪತ್ರೆ ಸಲ್ಲಿಸಿದ ಅರ್ಜಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಲಸಿಕೆ ಕಾರ್ಯಕ್ಕೆ ಅನುಮತಿ ನೀಡಿದೆ. ಮೊದಲಿಗೆ 45ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಮೊದಲ ಆಧ್ಯತೆ ನೀಡಿ ಎಂದು ಸೂಚನೆ ನೀಡಲು ಭರವಸೆ ನೀಡಲಾಗಿದೆ.
"ಎಎಂಆರ್ಐ ಹಾಸ್ಪಿಟಲ್ಸ್ ಲಿಮಿಟೆಡ್ನಿಂದ ಅಗತ್ಯವಿರುವ ಎಲ್ಲ ಮಾನವ ಸಂಪನ್ಮೂಲ(HR) ಮತ್ತು ನಿರ್ವಹಣಾ ಮಂಡಳಿಯವರ ಬೆಂಬಲದೊಂದಿದೆ ಲಸಿಕಾ ಕಾರ್ಯ ನಡೆಸಲು ಈ ಸೂಕ್ತವಾದ ಸೈಟ್ ಎಂಬುದು ನಮ್ಮ ಗಮನಕ್ಕೆ ಬಂದಿದೆ " ಎಂದು ನಗರಾಭಿವೃದ್ಧಿ ಮತ್ತು ಪುರಸಭೆಯ ವ್ಯವಹಾರಗಳ ವಿಭಾಗದ ಜಂಟಿ ಕಾರ್ಯದರ್ಶಿ ಜೋಲಿ ಚೌಧುರಿ ಸಿಎಬಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ವಿರುದ್ಧ ಹೋರಾಡಲು ಈ ಲಸಿಕೆ ನಮ್ಮ ಮುಂದಿರುವ ಪ್ರಮುಖ ಅಸ್ತ್ರ . ಈಡನ್ ಗಾರ್ಡನ್ನಲ್ಲಿ ಸಿಎಬಿ ಮತ್ತು ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಎಎಂಆರ್ಐ ಆಸ್ಪತ್ರೆಯ ನುರಿತ ಸಿಬ್ಬಂದಿಯೊಂದಿಗೆ ಲಸಿಕಾ ಕಾರ್ಯಕ್ರಮಕ್ಕೆ ಸರಿಯಾದ ವ್ಯವಸ್ಥೆ ಮಾಡುತ್ತಿದ್ದೇವೆ. ಶೇಕಡಾ 100 ರಷ್ಟು ಸಮಿತಿ ಸದಸ್ಯರು, ಸಿಬ್ಬಂದಿ ಮತ್ತು ಗ್ರೌಂಡ್ಸ್ಮನ್ಗಳಿಗೆ ಶುಕ್ರವಾರ ಐಪಿಎಲ್ ಪಂದ್ಯಗಳ ಆರಂಭವಾಗುವ ಮುನ್ನವೇ ಲಸಿಕೆ ಪಡೆಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.