ಬೆಂಗಳೂರು : ಭಾರತದಲ್ಲಿ ಆಡುವಾಗ ಟೆಸ್ಟ್‌ನಲ್ಲಿ ಇದೇ ಮೊದಲ ಐದು ವಿಕೆಟ್‌ಗಳ ಸಾಧನೆ ಮಾಡಿದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ತಂಡದ ಯಶಸ್ಸಿಗೆ ತವರಿನಲ್ಲಿ ಕೊಡುಗೆ ನೀಡಿದಾಗ ಆಟಗಾರರಲ್ಲಿ ಗೌರವ ಭಾವನೆಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ಸಾಗರೋತ್ತರ ಸರಣಿಗಳಲ್ಲಿ ಭಾರತದ ಬ್ರಹ್ಮಾಸ್ತ್ರವಾಗಿರುವ ಜಸ್ಪ್ರೀತ್ ಬುಮ್ರಾ ಸ್ವದೇಶದಲ್ಲಿ ಇದುವರೆಗೂ ಉತ್ತಮ ಪ್ರದರ್ಶನ ತೋರಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ 8 ವಿಕೆಟ್ ಪಡೆಯುವ ಮೂಲಕ ತವರಿನಲ್ಲೂ ತಂಡಕ್ಕೆ ನೆರವಾಗಬಲ್ಲೆ ಎಂದು ಸಾಬೀತುಪಡಿಸಿದ್ದಾರೆ.
"ತವರಿನಲ್ಲಿ ವಿಕೆಟ್ ಪಡೆದಾಗ ಉತ್ತಮ ಭಾವನೆ ಉಂಟು ಮಾಡಲಿದೆ. ನೀವು ಎಲ್ಲಾ ಸ್ವರೂಪದ ಕ್ರಿಕೆಟ್ ಆಡುವಾಗ, ನೀವು ನಿಮ್ಮ ದೇಹದ ಕಡೆಗೂ ಗಮನ ನೀಡಬೇಕಾಗುತ್ತದೆ. ಹಾಗಾಗಿ, ಕೆಲವು ಪಂದ್ಯಗಳಿಂದ ಹೊರಗುಳಿಯುವುದು ಅನಿವಾರ್ಯ.
ಆದರೆ, ಅವಕಾಶ ಸಿಕ್ಕಾಗ ತಂಡದ ಯಶಸ್ಸಿನಲ್ಲಿ ನಿಮ್ಮದೇ ಆದ ಕೊಡುಗೆ ನೀಡುವುದು ಸದಾ ಹೆಮ್ಮೆಯ ವಿಷಯ" ಎಂದು 2ನೇ ದಿನದಾಟದ ನಂತರ ಬುಮ್ರಾ ಹೇಳಿದರು.
ಬುಮ್ರಾ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ 29 ಟೆಸ್ಟ್ ಪಂದ್ಯಗಳನ್ನಾಡಿದ್ದರೂ ಭಾರತದಲ್ಲಿ ಕೇವಲ 4 ಪಂದ್ಯಗಳಲ್ಲಿ(ಈ ಸರಣಿ ಸೇರಿ) ಆಡುವ ಅವಕಾಶ ಪಡೆದಿದ್ದರು.
ಅವರು ಈ ಸರಣಿಗೂ ಮುನ್ನ ಭಾರತದಲ್ಲಿ 2 ಪಂದ್ಯಗಳನ್ನಾಡಿ 4 ವಿಕೆಟ್ ಪಡೆದಿದ್ದರು. ಇದೀಗ ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ 8 ವಿಕೆಟ್ ಪಡೆದಿದ್ದಾರೆ. ವಿದೇಶದಲ್ಲಿ ಆಡಿರುವ 25 ಪಂದ್ಯಗಳಿಂದ 109 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಡೇಲ್ ಸ್ಟೇನ್ ಹಿಂದಿಕ್ಕಿದ ಅಶ್ವಿನ್ ; ಟೆಸ್ಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ವಿಶ್ವದ 7ನೇ ಬೌಲರ್